~ಮಾರ್ಚ್ 11 ರ ಈ ಕಾರ್ಯಕ್ರಮವು, ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಅವರ ಕೊಡುಗೆಗಳನ್ನು ಗುರುತಿಸುತ್ತದೆ

ಬೆಂಗಳೂರು, ಮಾರ್ಚ್ 6, 2025 – ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಆಯುವವರ ಜೊತೆಗಿನ ಏಕತೆಯ ಪ್ರಬಲ ಪ್ರದರ್ಶನದಲ್ಲಿ, ನಮ್ಮ ನಗರದ ಎಲೆಮರೆ ಕಾಯಿಗಳಾದ ಪರಿಸರ ಸಂರಕ್ಷಣಾ ಚಾಂಪಿಯನ್‌ಗಳು, ಸಂಭವ್ ಫೌಂಡೇಶನ್, ಕ್ರೈಸ್ಟ್ ಯೂನಿವರ್ಸಿಟಿ ಬನ್ನೇರುಘಟ್ಟ ರಸ್ತೆಯ ಲಿಬರಲ್ ಆರ್ಟ್ ವಿಭಾಗದ ಸಹಯೋಗದೊಂದಿಗೆ, ಮಾರ್ಚ್ 11, 2025 ರಂದು ಮನಮೋಹಕವಾದ ಥಿಯೇಟರ್ ನಿರ್ಮಾಣ-ನವರಸ ಮೂಲಕ ತಮ್ಮ ಕಥೆಗಳನ್ನು ಮುಖ್ಯವಾಹಿನಿಗೆ ತರುತ್ತಿದೆ.
ವಿಶ್ವಾದ್ಯಂತ ಇರುವ ತ್ಯಾಜ್ಯ ಆಯುವವರ ಕೊಡುಗೆಗಳನ್ನು ಗುರುತಿಸಲು ಮೀಸಲಾದ ದಿನವಾದ-ಅಂತರಾಷ್ಟ್ರೀಯ ತ್ಯಾಜ್ಯ ಆಯುವವರ ದಿನದೊಂದಿಗೆ (ಮಾರ್ಚ್ 1) ಜೋಡಣೆಗೊಂಡಿದ್ದು ಈ ಉಪಕ್ರಮವು ನಿರೀಕ್ಷೆಯನ್ನೂ ಮೀರಿದ ಕಾರ್ಯಕ್ಷಮತೆಯಾಗಿದೆ; ಇದು ಸಬಲೀಕರಣ, ಸಮರ್ಥನೆ ಮತ್ತು ಆರ್ಥಿಕ ಪರಿವರ್ತನೆಗೆ ಒದಗಿಸಲಾದ ವೇದಿಕೆಯಾಗಿದೆ.
ಇದೇ ಪ್ರಪ್ರಥಮ ಬಾರಿಗೆ, ತ್ಯಾಜ್ಯ ಆಯುವ ಸಮುದಾಯದ ಸದಸ್ಯರು ಕೇವಲ ಮಾತಿನ ವಿಷಯಗಳಾಗಿ ಉಳಿದಿಲ್ಲ, ಬದಲಾಗಿ ಇದರ ಸಕ್ರಿಯ ರಚನೆಕಾರರಾಗಿದ್ದಾರೆ, ಪ್ರದರ್ಶನದ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ತಯಾರಿಸಿದ್ದಾರೆ. ಸಂಭವ್ ಫೌಂಡೇಶನ್‌ನಿಂದ ತರಬೇತಿ ಪಡೆದ, ಸಾಮೂಹಿಕ ಶಕ್ತಿ ಉಪಕ್ರಮದ ಭಾಗವಾಗಿ, ಈ ಕುಶಲಕರ್ಮಿಗಳು ವೇಷಭೂಷಣ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಕೌಶಲ್ಯಗಳನ್ನು ಹೊಂದಿದ್ದಾರೆ, ತ್ಯಾಜ್ಯ ನಿರ್ವಹಣೆ ಪರಿಸರ ವ್ಯವಸ್ಥೆಯಲ್ಲಿ ತಮ್ಮ ನಿರ್ಣಾಯಕ ಪಾತ್ರಕ್ಕೆ ಯಾವುದೇ ಲೋಪವಾಗದೆ ಪರ್ಯಾಯ ಜೀವನೋಪಾಯಕ್ಕೆ ಇರುವ ಅವಕಾಶಗಳ ಬಾಗಿಲನ್ನು ತೆರೆಯುತ್ತಿದ್ದಾರೆ.
ನವರಸ, ಲಿಬರಲ್ ಆರ್ಟ್ಸ್ ವಿಭಾಗದ ವಾರ್ಷಿಕ ವಿದ್ಯಾರ್ಥಿ-ಚಾಲಿತ ನಿರ್ಮಾಣವು, ಮನದ ಒಂಬತ್ತು ಭಾವನೆಗಳನ್ನು ಅನ್ವೇಷಿಸಲು ಸಂಗೀತ, ನೃತ್ಯ ಮತ್ತು ರಂಗಭೂಮಿಯನ್ನು ಸಂಯೋಜಿಸುತ್ತಿದೆ, ಕಲಾತ್ಮಕ ಬೆಳವಣಿಗೆ, ನಾಯಕತ್ವ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಯಲ್ಲಿ ತಲ್ಲೀನಗೊಳಿಸುವಂತಹ ಕಥೆಯ ನಿರೂಪಣೆಯನ್ನು ಪ್ರದರ್ಶಿಸುತ್ತದೆ.
ಇದು ಈ ಕುಶಲಕರ್ಮಿಗಳನ್ನು ಗೌರವಿಸಲು ಮೀಸಲಾಗಿರುವ ವಿಶೇಷ 15 ನಿಮಿಷಗಳ ಭಾಗವನ್ನು ಹೊಂದಿದೆ. ಒಂದು ಸಣ್ಣ ಸಾಕ್ಷ್ಯಚಿತ್ರವು ಅವರ ಕಥೆಗಳಲ್ಲಿ ಅಪರೂಪದ, ಸಮಾಜಕ್ಕೆ ತಿಳಿಯದ ನೋಟವನ್ನು ನೀಡುತ್ತದೆ-ತಮ್ಮ ಗಳಿಕೆಯನ್ನು ಹೆಚ್ಚಿಸಲು ಪರ್ಯಾಯ ಜೀವನೋಪಾಯವನ್ನು ಹುಡುಕುತ್ತಿರುವ ತ್ಯಾಜ್ಯ ಆಯುವವರ ಹೋರಾಟಗಳು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವುಗಳನ್ನು ಇದು ಪ್ರಸ್ತುತಪಡಿಸುತ್ತದೆ.
“ಈ ಉಪಕ್ರಮವು ರಂಗಭೂಮಿಗಿಂತ ಹೆಚ್ಚಿನದಾಗಿದ್ದು; ಇದು ಒಂದು ಅಭಿವ್ಯಕ್ತಿಯಾಗಿದೆ. ಇದು ದೃಷ್ಟಿಕೋನಗಳನ್ನು ಬದಲಾಯಿಸುವ ಬಗ್ಗೆ, ಸಮಾಜವು ಕಡೆಗಣಿಸುತ್ತಿರುವ ಅವರ ಘನತೆಯನ್ನು ತಿಳಿಯುವುದರ ಕುರಿತಾಗಿದೆ” ಎಂದು ಸಂಭವ್ ಫೌಂಡೇಶನ್‌ನ ಚೀಫ್ ಇಂಪ್ಯಾಕ್ಟ್ ಆಫೀಸರ್ ಡಾ. ಗಾಯತ್ರಿ ವಾಸುದೇವನ್ ಹೇಳಿದರು. “ನಾವು ಈಗ 4 ವರ್ಷಗಳಿಂದ ನವರಸವನ್ನು ಮಾಡುತ್ತಿದ್ದೇವೆ. ಈ ವರ್ಷ, ಸ್ಥಿತಿಸ್ಥಾಪಕತ್ವದ ಕಥೆಗಳತ್ತ ಗಮನ ಸೆಳೆಯಲು ನಾವು ವೇದಿಕೆಯನ್ನು ಬಳಸಲು ಬಯಸುತ್ತೇವೆ. ಈ ಅನುಭವಕ್ಕೆ ನಿಮ್ಮೆಲ್ಲರನ್ನು ನಾವು ಆಹ್ವಾನಿಸುತ್ತೇವೆ” ಎಂದು ಲಿಬರಲ್ ಆರ್ಟ್ಸ್‌ನ ಎಚ್ಒಡಿ ಆಗಿರುವ ಡಾ. ಪ್ರೇರಣಾ ಶ್ರೀಮಾಲ್ ಹೇಳಿದರು.
ಸಂಭವ್ ಫೌಂಡೇಶನ್ ಮತ್ತು ಕ್ರೈಸ್ಟ್ ಯೂನಿವರ್ಸಿಟಿ ನಡುವಿನ ಈ ಸಹಯೋಗವು ಕಲೆಗಳ ಮೂಲಕ ಸೇರ್ಪಡೆ, ಕೌಶಲ್ಯ-ನಿರ್ಮಾಣ ಮತ್ತು ಸಾಮಾಜಿಕ ನ್ಯಾಯದ ಕುರಿತು ಜನರ ನಡುವಿನ ಸಂಭಾಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: ಮಾರ್ಚ್ 11, 2025
ಸಮಯ: ಸಂಜೆ 4:30 ರಿಂದ
ಸ್ಥಳ: ಮುಖ್ಯ ಆಡಿಟೋರಿಯಮ್, ಕ್ರೈಸ್ಟ್ ಯೂನಿವರ್ಸಿಟಿ, ಬನ್ನೇರುಘಟ್ಟ ರಸ್ತೆ ಕ್ಯಾಂಪಸ್
City Today News 9341997936
