ರಂಗಶ್ರೀ ಸಂಸ್ಥೆಯ 40ನೇ ವಾರ್ಷಿಕೋತ್ಸವ – ಮಾರ್ಚ್ 10ರಂದು ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಂಗಳೂರು, ಮಾರ್ಚ್ 8: ನಾಲ್ಕು ದಶಕಗಳ ಸಾಂಸ್ಕೃತಿಕ ಸೇವೆಯನ್ನು ನಡೆಸುತ್ತಿರುವ ರಂಗಶ್ರೀ ಸಂಸ್ಥೆಯ 2025ರ ಚೈತ್ರಪೂರ್ವ ಸಂಭ್ರಮವು ಮಾರ್ಚ್ 10ರ ಸಂಜೆ 5:00 ಗಂಟೆಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದ್ದು, ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ನೆರವೇರಿಸಲಿದ್ದು, ಸಾರಿಗೆ ಹಾಗೂ ಮುಜರಾಯಿ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಹೆಚ್.ಎಂ. ರೇವಣ್ಣ ಗೌರವಾತಿಥಿಯಾಗಿ ಭಾಗವಹಿಸಲಿದ್ದಾರೆ.

ಕುವೆಂಪು ರಾಷ್ಟ್ರೀಯ ಪ್ರಶಸ್ತಿ ವಿಜೇತರು:

ಪದ್ಮಶ್ರೀ ಡಾ. ದೊಡ್ಡರಂಗೇಗೌಡ – ಸಾಹಿತ್ಯ ಸೇವೆ

ನ್ಯಾಯಮೂರ್ತಿ ವಿ. ಗೋಪಾಲಗೌಡ – ನ್ಯಾಯಾಂಗ ಸೇವೆ

ಶ್ರೀ ಎಸ್.ಟಿ. ಸೋಮಶೇಖರ್ – ಸಹಕಾರ ಕ್ಷೇತ್ರ

ಡಾ. ಜಯಮಾಲ – ಚಲನಚಿತ್ರ ಕ್ಷೇತ್ರ

ಶ್ರೀ ಕೆ.ಎಂ. ನಾಗರಾಜ್ – ಧಾರ್ಮಿಕ ಸೇವೆ

ಡಾ. ಕೆ.ಎಸ್. ಕಿಶೋರ್ – ವೈದ್ಯಕೀಯ ಸೇವೆ


ಈ ಸಮಾರಂಭದಲ್ಲಿ ಡಾ. ಎಸ್.ಎಲ್.ಎನ್. ಸ್ವಾಮಿ ಅವರ ‘ಕರ್ನಾಟಕ ಧರ್ಮದರ್ಶನ’ ಧ್ವನಿರೂಪದ ಪುಸ್ತಕವನ್ನು ಶ್ರೀ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ.

ರಂಗಶ್ರೀ ಸಂಸ್ಥೆಯ 40 ವರ್ಷಗಳ ಸಂಭ್ರಮ

ಶಿಕ್ಷಣ ತಜ್ಞೆ ಪ್ರೊ. ಚಿ.ನಾ. ಮಂಗಳ ಅವರ ಮಾರ್ಗದರ್ಶನದಲ್ಲಿ ರಂಗಶ್ರೀ ಸಂಸ್ಥೆ ನೂರಾರು ಪ್ರತಿಭೆಗಳನ್ನು ಗುರುತಿಸಿ, ರಂಗಭೂಮಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. ನಟಭೈರವ ವಜ್ರಮುನಿ ಅವರ ಆಶೀರ್ವಾದದಿಂದ ಪ್ರಾರಂಭವಾದ ಈ ಸಂಸ್ಥೆಗೆ, ಕಣಗಾಲ್ ಪ್ರಭಾಕರ್ ಶಾಸ್ತ್ರಿ ರಚಿಸಿದ ‘ಪ್ರಚಂಡ ರಾವಣ’ ನಾಟಕ 800ಕ್ಕೂ ಹೆಚ್ಚು ಪ್ರದರ್ಶನ ಕಂಡು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ದಯಾನಂದ ಸಾಗರ್ ಪ್ರತಿಷ್ಠಾನದ ಡಾ. ಹೇಮಚಂದ್ರ ಸಾಗರ್ ಮತ್ತು ಡಾ. ಪ್ರೇಮಚಂದ್ರ ಸಾಗರ್ ಅವರ ಬೆಂಬಲದಿಂದ ಸಾಂಸ್ಕೃತಿಕ ಉತ್ಸವ, ನಾಟಕ ಸ್ಪರ್ಧೆ, ಪೌರಾಣಿಕ ನಾಟಕ ಮೇಳ, ಭಜನಾ ಮೇಳ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ರಾಜ್ಯ ಪ್ರಶಸ್ತಿಯನ್ನು ಪಡೆದ ಹೆಮ್ಮೆ ರಂಗಶ್ರೀ ಸಂಸ್ಥೆಗೆ ಇದೆ.

ಈ ಬೃಹತ್ ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಲು ಎಲ್ಲರಿಗೂ ಆಹ್ವಾನಿಸಲಾಗಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.