
ಬೆಂಗಳೂರು: ಖ್ಯಾತ ಅಡುಗೆ ಸಾಧನಗಳ ಬ್ರಾಂಡ್ ವಂಡರ್ಷೆಫ್ (Wonderchef), ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ಸಾದ್ಯತೆಗಳನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಬೆಂಗಳೂರು ಗರುಡಾ ಮಾಲ್‌ನಲ್ಲಿ 30ನೇ ಎಕ್ಸ್ಕ್ಲೂಸಿವ್ ಬ್ರಾಂಡ್ ಔಟ್ಲೆಟ್ (EBO) ಅನ್ನು ಉದ್ಘಾಟಿಸಿದೆ. ಷೆಫ್ ಸಂಜೀವ್ ಕಪೂರ್ ಮತ್ತು ರವಿ ಸಕ್ಸೇನಾ ಅವರ ಸಹ-ಸಂಸ್ಥಾಪನೆಯಾದ ಈ ಬ್ರಾಂಡ್, 2026ರೊಳಗೆ ತನ್ನ ಇಬಿಒ (EBO) ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
ಈ ಕುರಿತಾಗಿ ಮಾಧ್ಯಮ ಮತ್ತು ಗ್ರಾಹಕರೊಂದಿಗೆ ಮಾತನಾಡಿದ ಷೆಫ್ ಸಂಜೀವ್ ಕಪೂರ್, ದಕ್ಷಿಣ ಭಾರತದಲ್ಲಿ ಆವಿಷ್ಕಾರಕ ಅಡುಗೆ ಪರಿಹಾರಗಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಹಂಚಿಕೊಂಡರು. “ದಕ್ಷಿಣ ಭಾರತ ನಮ್ಮ ಪ್ರಮುಖ ಮಾರುಕಟ್ಟೆಯಾಗಿದ್ದು, ಬೆಂಗಳೂರು ಇದರ ಕೇಂದ್ರಬಿಂದುವಾಗಿದೆ. ಇಲ್ಲಿ ಸ್ಮಾರ್ಟ್ ಕಿಚನ್ ಸಾಧನೆಗಳು ಮತ್ತು ಆರೋಗ್ಯಕರ ಅಡುಗೆ ಪರಿಕರಗಳಿಗೆ ಅಪಾರ ಬೇಡಿಕೆ ಇದೆ. ನಮ್ಮ ರಿಟೇಲ್ ವಿಸ್ತರಣೆ ಗ್ರಾಹಕರಿಗೆ ನಮ್ಮ ಉತ್ಪನ್ನಗಳನ್ನು ಹತ್ತಿರದಿಂದ ಅನುಭವಿಸಲು ಮತ್ತು ತ್ವರಿತ ಸೇವೆ ಒದಗಿಸಲು ಸಹಾಯ ಮಾಡಲಿದೆ,” ಎಂದು ಅವರು ತಿಳಿಸಿದರು.

Wonderchef ಸಹ-ಸಂಸ್ಥಾಪಕ ಮತ್ತು ಸಿಇಒ ರವಿ ಸಕ್ಸೇನಾ, ದಕ್ಷಿಣದ ಗ್ರಾಹಕರ ಅಗತ್ಯಗಳಿಗೆ ತಕ್ಕ ರೀತಿಯಲ್ಲಿ ಕಂಪನಿಯ ತೊಡಗಿಸಿಕೊಂಡಿರುವ ಬದ್ಧತೆಯನ್ನು ಪುನರುಚ್ಛರಿಸಿದರು. “ದಕ್ಷಿಣದ ಮಾರುಕಟ್ಟೆ ಅಡುಗೆ ಸಾಧನ ಮತ್ತು ಪರಿಕರಗಳ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿದೆ. ವಿಶೇಷವಾಗಿ, Chef Magic ತರಹದ ಆವಿಷ್ಕಾರಕ ಉಪಕರಣಗಳು ಹಾಗೂ Ferrero Cast Iron ಮತ್ತು Nickella Tri-Ply Cookware ಶ್ರೇಣಿಯ ಆರೋಗ್ಯಕರ ಅಡುಗೆ ಉಪಕರಣಗಳಿಗೆ ಅಪಾರ ಬೇಡಿಕೆ ಇದೆ. ನಾವು ಈ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಗ್ರಾಹಕರಿಗೆ ಸುಲಭ, ಆರೋಗ್ಯಕರ ಅಡುಗೆ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ,” ಎಂದು ಅವರು ಹೇಳಿದರು.

ಈ ಹೊಸ ಔಟ್ಲೆಟ್ ಅನ್ನು “ಮಾಸ್ಟರ್ ಹೌಸ್ ಆಫ್ ಹೆಲ್ತ್ ವಿತ್ ಸಂಜೀವ್ ಕಪೂರ್” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು. ಈ ವೇಳೆ, ಷೆಫ್ ಕಪೂರ್ ಲೈವ್ ಕುಕಿಂಗ್ ಡೆಮೊ ನಡೆಸಿ Chef Magic ಉಪಕರಣ ಬಳಸಿ ಆರೋಗ್ಯಕರ ತಿನಿಸು ತಯಾರಿಸುವ ವಿಧಾನವನ್ನು ಪ್ರದರ್ಶಿಸಿದರು.
ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡುಗಳನ್ನು ಪ್ರಮುಖ ಮಾರುಕಟ್ಟೆಗಳಾಗಿ ಗುರುತಿಸಿರುವ Wonderchef, ದಕ್ಷಿಣ ಭಾರತದೆಲ್ಲೆಡೆ ತನ್ನ ಗ್ರಾಹಕರಿಗೆ ಆಧುನಿಕ, ಸುಲಭ ಮತ್ತು ಆರೋಗ್ಯಕರ ಅಡುಗೆ ಪರಿಹಾರಗಳನ್ನು ಒದಗಿಸುವ ಗುರಿಯೊಂದಿಗೆ ಮುಂದೆ ಸಾಗುತ್ತಿದೆ.
City Today News 9341997936
