
ಬೆಂಗಳೂರು: ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆ ಇದೀಗ ಅತ್ಯಾಧುನಿಕ ತೃತೀಯ ಶ್ರೇಣಿಯ ಕಣ್ಣಿನ ಆರೈಕಾ ಕೇಂದ್ರವಾಗಿ, ಹಲವಾರು ವಿದೇಶಿ ರೋಗಿಗಳಿಗೆ ಅತ್ಯುತ್ತಮ ಶಸ್ತ್ರಚಿಕಿತ್ಸೆ ನೀಡುತ್ತಿದೆ. ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ನಿರಾಕರಿಸಲ್ಪಟ್ಟ ಗಂಭೀರ ಕಣ್ಣಿನ ಸಮಸ್ಯೆಗಳಿಗೆ ಇಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚೆಗೆ ಸೂಡಾನ್ ಮೂಲದ 45 ವರ್ಷದ ವ್ಯಕ್ತಿಯೊಬ್ಬರು ಫಾಕೋ-ರಿಫ್ರಾಕ್ಟಿವ್ ರೆಟಿನಾ ಶಸ್ತ್ರಚಿಕಿತ್ಸೆಗಾಗಿ ರಾಜಾಜಿನಗರ ವಾಸನ್ ಐ ಕೇರ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ರೋಗಿಯ ಕಣ್ಣಿಗೆ ಹಲವು ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳು ನಡೆಯಿತ್ತಾದರೂ, ದೃಷ್ಟಿ ಪುನಃಸ್ಥಾಪನೆಯಾಗಿರಲಿಲ್ಲ.

ವಾಸನ್ ಐ ಕೇರ್ ಆಸ್ಪತ್ರೆಯ ನುರಿತ ವೈದ್ಯರ ತಂಡ – ಡಾ. ದೇವಶೀಶ್ ದುಬೆ (ರಟಿನಾ ಶಸ್ತ್ರಚಿಕಿತ್ಸಕ) ಮತ್ತು ಡಾ. ದೇವಿಕಾ ಸಿಂಗ್ (ಕಾರ್ನಿಯಾ ಮತ್ತು ಫಾಕೋ-ರಿಫ್ರಾಕ್ಟಿವ್ ತಜ್ಞ) ಅವರ ಮಾರ್ಗದರ್ಶನದಲ್ಲಿ ಕಾರ್ನಿಯಾ ಕಸಿ ಮತ್ತು ರೆಟಿನಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯಲ್ಲಿ Temp K PRO + SOA + SFIOL + Revitrectomy + ReSOI ಮುಂತಾದ ನವೀಕೃತ ವಿಧಾನಗಳು ಬಳಸಲಾಯಿತು. ಇಂಟ್ರಾಕ್ಯುಲರ್ ಲೆನ್ಸ್ (IOL) ಅಳವಡಿಸುವ ಮೂಲಕ ರೋಗಿಯ ದೃಷ್ಟಿ ಪುನಃಸ್ಥಾಪಿತವಾಯಿತು.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೈ-ಟೆಕ್ ಉಪಕರಣಗಳೊಂದಿಗೆ, ಈ ಆಸ್ಪತ್ರೆಯಲ್ಲಿ ಕಾರ್ನಿಯಾ ಟ್ರಾನ್ಸ್‌ಪ್ಲಾಂಟೇಶನ್, ರೆಟಿನಾ ಶಸ್ತ್ರಚಿಕಿತ್ಸೆಗಳು, ಗ್ಲೂಕೋಮಾ, ನ್ವೆಂಟ್ ಮತ್ತು ಆಕ್ಯುಲೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ಅನುಭವೀ ತಜ್ಞರು ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಬಹು ಮಾದರಿಯ ರೆಟಿನಲ್ ಲೇಸರ್ ಯಂತ್ರವನ್ನು ಅಳವಡಿಸಲಾಗಿದೆ, ಇದು ರೋಗಿಗಳಿಗೆ ವೇಗ, ನಿಖರತೆ, ಮತ್ತು ಹೆಚ್ಚಿನ ಆರಾಮ ಒದಗಿಸಲಿದೆ.
ವಾಸನ್ ಐ ಕೇರ್ ಆಸ್ಪತ್ರೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಫಲಾನುಭವಿಗಳಿಗೆ ಅನುಮೋದಿತವಾಗಿದ್ದು, ನಗದು ರಹಿತ (Cashless) ಚಿಕಿತ್ಸೆಗೆ ಟಿ.ಪಿ.ಎ ಮತ್ತು ವಿವಿಧ ವಿಮಾ ಸಂಸ್ಥೆಗಳ ಅನುಮೋದನೆ ಹೊಂದಿದೆ. ಕರ್ನಾಟಕ ಸರ್ಕಾರದ KSRTC ನೌಕರರು ಸಹ ಈ ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
City Today News 9341997936
