
ಬೆಂಗಳೂರು: ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಪ್ರಭು ಭಾಸ್ಕೋ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ತಮ್ಮ ಮನವಿಯಲ್ಲಿ, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಪ್ರದರ್ಶಿಸಿದ ಚಾಣಕ್ಯತನ ಹಾಗೂ ಪರಿಶ್ರಮದ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿರುವ ಭಾಸ್ಕೋ, 134 ಶಾಸಕರನ್ನು ಗೆಲ್ಲಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ್ದಾರೆ.
ಆದರೆ, ಸರಕಾರಿ ಯೋಜನೆಗಳ ಮೂಲಕ ಕಾರ್ಯಕರ್ತರಿಗೆ ನೆರವು ನೀಡುವುದಕ್ಕಿಂತ, ಪಕ್ಷದ ಶಾಸಕರ ಸಂಬಳದಿಂದಲೇ ಕಾರ್ಯಕರ್ತರಿಗೆ ಸಹಾಯ ಮಾಡಲು ಡಿಕೆ ಶಿವಕುಮಾರ್ ಅವರು ಮುಂದಾಗಬೇಕು ಎಂಬ ಮನವಿಯನ್ನು ಅವರು ವ್ಯಕ್ತಪಡಿಸಿದ್ದಾರೆ. “ಪಕ್ಷವನ್ನು ಕಟ್ಟುವಲ್ಲಿ ಹಾಗೂ ನಿಮ್ಮನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿದ ಕಾರ್ಯಕರ್ತರಿಗೆ, ಶಾಸಕರ ಸಂಬಳದಿಂದ ಆರ್ಥಿಕ ನೆರವು ನೀಡಲು ನೀವು ನಿರ್ಣಯ ಮಾಡಬೇಕು “ ಎಂದು ಪ್ರಭು ಭಾಸ್ಕೋ ಮನವಿ ಮಾಡಿದ್ದಾರೆ.
ಈ ಮನವಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರಿಂದ ಈ ಬಗ್ಗೆ ಏನಾಗುತ್ತದೋ ಎನ್ನುವುದನ್ನು ಗಮನಿಸಬೇಕಾಗಿದೆ.
City Today News
