
ಬೆಂಗಳೂರು, ಮಾ. 14: ಮೆಥೋಡಿಸ್ಟ್ ಚರ್ಚ್ ಮತ್ತು ಬಾಲ್ಡ್ ವಿನ್ ಶಾಲಾ ವಿದ್ಯಾಸಂಸ್ಥೆಯ ಮಾಜಿ ಮುಖ್ಯಸ್ಥ ಎನ್.ಎಲ್. ಕರ್ಕರೆ ವಿರುದ್ಧ ಭಕ್ತರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಾಂತಕುಮಾರಿ, ಇಂಡಿಯನ್ ವೆಲ್ಫೇರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಸಂಜಯ್ ಜಗೀರ್‌ದಾರ್, ಕ್ರೈಸ್ತ ಮಹಾ ಸಭಾದ ಪ್ರಜ್ವಲ್ ಸ್ವಾಮಿ ಸೇರಿ ಅನೇಕರು ಭಾಗವಹಿಸಿದರು. ಅವರ ಮಾತಿನಲ್ಲಿ, “ಎನ್.ಎಲ್. ಕರ್ಕರೆ ಅವರು ಚರ್ಚ್ ಮತ್ತು ಬಾಲ್ಡ್ ವಿನ್ ವಿದ್ಯಾಸಂಸ್ಥೆಗಳ ಆಡಳಿತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ ಬಿಷಪ್ ಆಗಿ ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧ 210ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ” ಎಂದು ಆರೋಪಿಸಿದರು.

ಇದಕ್ಕೆ ಮೇರಾಗಿ, “ಎಲ್.ಎನ್. ಕರ್ಕರೆ ಅವರು ಸುಮಾರು 300-400 ಕೋಟಿ ರೂಪಾಯಿ ದುರುಪಯೋಗ ಮಾಡಿರುವ ಮಾಹಿತಿ ಲಭ್ಯವಾಗಿದೆ. ಅವರ ನಡವಳಿಕೆಯಿಂದ ಚರ್ಚ್ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಭಾರಿ ನಷ್ಟ ಉಂಟಾಗಿದೆ. ಮೆಥೋಡಿಸ್ಟ್ ಚರ್ಚ್‌ನ ಇತರ ಬಿಷಪ್‌ಗಳು ಗೌರವಯುತವಾಗಿ ನಿವೃತ್ತರಾಗಿದ್ದರೆ, ಕರ್ಕರೆ ಮಾತ್ರ ಹುದ್ದೆಯನ್ನು ಬಿಡಲು ನಿರಾಕರಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಶಕ್ತಿಯಾಗಿ ಪ್ರತಿಭಟಿಸುತ್ತೇವೆ” ಎಂದು ಭಕ್ತರು ಘೋಷಿಸಿದರು.

ಈ ಪ್ರತಿಭಟನೆಯಲ್ಲಿ ಮೆಥೋಡಿಸ್ಟ್ ಚರ್ಚ್‌ನ ನೂತನ ಬಿಷಪ್ ಅನಿಲ್ ಕುಮಾರ್, ಬಾಲ್ಡ್ ವಿನ್ ವಿದ್ಯಾಸಂಸ್ಥೆಗಳ ಸೊಸೈಟಿಯ ಡಾ. ಸೆಬಾಸ್ಟಿಯನ್ ರವಿಕುಮಾರ್ ಸೇರಿದಂತೆ ಹಲವಾರು ಮತ ಬೋದಕರು ಹಾಗೂ ಭಕ್ತರು ಭಾಗವಹಿಸಿದ್ದರು.
City Today News 9341997936
