
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರಿನ ವತಿಯಿಂದ 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಮಾರ್ಚ್ 22 ಮತ್ತು 23, 2025 ರಂದು ನಡೆಯಲಿದೆ. ಕಾರ್ಯಕ್ರಮವು ಕೊಂಡಜ್ಜಿ ಬಸಪ್ಪ ಸಭಾಭವನ, ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ.
“ಅರಿವೆಂಬುದು ಬಿಡುಗಡೆ” ಸಮ್ಮೇಳನದ ಆಶಯವಾಗಿದೆ.
ಸಮ್ಮೇಳನಾಧ್ಯಕ್ಷೆ ಡಾ. ಎಚ್.ಎಸ್. ಶ್ರೀಮತಿ.

ಸಂಘದ ಪ್ರಮುಖರು:
▶ ಅಧ್ಯಕ್ಷೆ: ಡಾ. ಎಚ್.ಎಲ್. ಪುಷ್ಪ
▶ ಕಾರ್ಯದರ್ಶಿ: ಭಾರತಿ ಹೆಗಡೆ
▶ ಸಹಕಾರ್ಯದರ್ಶಿ: ಸುಮಾ ಸತೀಶ್
▶ ಖಜಾಂಚಿ: ಹಾ.ವಿ. ಮಂಜುಳಾ ಶಿವಾನಂದ
ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅವರ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಮತ್ತು ಲೇಖಕಿಯರ ಅಭಿವೃದ್ದಿಗೆ ಇದು ಮಹತ್ವದ ವೇದಿಕೆಯಾಗಲಿದೆ.
City Today News 9341997936
