
ಬಿ. ಎಂ. ಎಸ್. ಕಾನೂನು ಮಹಾವಿದ್ಯಾಲಯ ವತಿಯಿಂದ ಉತ್ತರ ತಾಲ್ಲೂಕಿನ ಶಿವಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಕಾನೂನು ವಿದ್ಯಾರ್ಥಿಗಳು ಪಾಲ್ಗೊಂಡು ಗ್ರಾಮೀಣ ಭಾಗದ ಜನರಿಗೆ ಕಾನೂನು ಅರಿವು ಮೂ ಡಿಸುವದರ ಜೊತೆಗೆ ಉಚಿತ ವೈದ್ಯಕಿಯ ಸೇವೆಯನ್ನು ನೀಡಿದರು. ವಿದ್ಯಾರ್ಥಿಗಳು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸಿದರು.
ಉಚಿತವಾಗಿ ಕಾನೂನು ಸೇವೆ ಹೇಗೆ ಪಡೆದುಕೊಳ್ಳಬೇಕು. ಸರ್ಕಾರದ ಉಚಿತ ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳಬೇಕು, ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಅರಿವು, ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಇತ್ಯಾದಿ ಉಪಯುಕ್ತ ಮಾಹಿತಿಯನ್ನು ನೀಡಿದರು ಶಿಬಿರದ ಉದ್ಘಾಟನೆ ಡಾ. ಪ್ರಶಾಂತ್ ಚಕ್ರವರ್ತಿ ಸಂಸ್ಥಾಪಕರು, ಕರ್ನಾಟಕ ಜನಸೇವಾ ಟ್ರಸ್ಟ್, ಇವರು ಉದ್ಘಾಟಿದರು, ಅಧ್ಯಕತೆಯನ್ನು ಬಿ. ಎಂ. ಎಸ್. ಕಾನೂನು ಮಹಾವಿದ್ಯಾಲಯಾದ ಪ್ರಾಂಶುಪಾಲಾರದ ಪ್ರೊ. (ಡಾ.) ಅನಿತಾ ಎಫ್ ಎನ್ ಡಿಸೋಜಾ ವಹಿಸಿದ್ದರು. ಮತ್ತು ಡಾ. ಅನುಪಮ ಪ್ರಶಾಂತ್ ಚಕ್ರವರ್ತಿ, ಗ್ರಾಮ ಪಂಚಾಯತಿಯ ಅಧ್ಯಕ್ಷರು,ಉಪಾಧ್ಯಕ್ಷರುಸದಸ್ಯರು, ಗ್ರಾಮಸ್ಥರು, ಸೇರಿದಂತೆ ಕಾಲೇಜಿನ ಶಿಕ್ಷಕ ವೃoದವರು ಉಪಸ್ಥಿತರಿದ್ದರು.
City Today News 9341997936
