
ಬೆಂಗಳೂರು: ರಾಷ್ಟ್ರೀಯ ಪೀಪಲ್ಸ್ ಪಾರ್ಟಿಯ ಅಲ್ಪಸಂಖ್ಯಾತರ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ತಬ್ಬನಂ ತಾಜ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷ ಡಾ. ಅಶೋಕ್ ಕುಮಾರ್ ಅವರ ನೇಮಕಾತಿ ಆದೇಶದೊಂದಿಗೆ ಈ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು ಬಾಸ್ಕೋ, ರಾಜ್ಯ ಯುವ ಘಟಕದ ಅಧ್ಯಕ್ಷ ಡಿ. ಸುಧಾಕರ್ ಹಾಗೂ ಬೆಂಗಳೂರು ನಗರ ಅಧ್ಯಕ್ಷ ಸರವಣ ಉಪಸ್ಥಿತರಿದ್ದು, ಹೊಸ ಅಧ್ಯಕ್ಷೆಗೆ ಶುಭ ಹಾರೈಸಿದರು. ಪಕ್ಷದಲ್ಲಿ ಮಹಿಳಾ ವಿಭಾಗದ ಬಲವರ್ಧನೆ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕಾಗಿ ತಬ್ಬನಂ ತಾಜ್ ಕೆಲಸ ಮಾಡಲಿದ್ದಾರೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
City Today News 9341997936
