
ಬೆಂಗಳೂರು, ಮಾರ್ಚ್ 26, 2025: ಬಿ.ಎಂ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ “ಭಾರತದಲ್ಲಿ ತಳಿ ಸಂಪನ್ಮೂಲಗಳು ಮತ್ತು ಸಂಪ್ರದಾಯಿಕ ಜ್ಞಾನದ ಕಾನೂನುಬದ್ದ ಆಡಳಿತ” ಕುರಿತ ರಾಷ್ಟ್ರೀಯ ಸಮ್ಮೇಳನವು ನಡೆಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಎ.ಬಿ.ಎಲ್.ಇ ಬೆಂಗಳೂರು (A.B.L.E Bangalore) ಯ ಜನರಲ್ ಮ್ಯಾನೇಜರ್ ಡಾ.ಎಸ್. ಬಾಲಸುಬ್ರಮಣ್ಯ ಅವರು ಭಾಗವಹಿಸಿ ವಕ್ತವ್ಯ ನೀಡಿದರು. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರಾದ ಪ್ರೊ. (ಡಾ.) ಸಿ.ಎಸ್. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್ ಹಾಗೂ ಬಿ.ಎಂ.ಎಸ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. (ಡಾ.) ಅನಿತಾ ಎಫ್ ಎನ್ ಡಿಸೋಜಾ ಅವರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಸಂಶೋಧಕರು ಮತ್ತು ಕಾನೂನು ವಿದ್ಯಾರ್ಥಿಗಳು ಸೇರಿ ಸುಮಾರು 45 ಮಂದಿ ಪಾಲ್ಗೊಂಡು ಚರ್ಚೆಗಳಲ್ಲಿ ತೊಡಗಿದರು. ತಳಿ ಸಂಪನ್ಮೂಲಗಳ ಸಂರಕ್ಷಣೆ, ಸಂಪ್ರದಾಯಿಕ ಜ್ಞಾನಗಳ ಕಾನೂನುಬದ್ದ ಸಂವರ್ಧನೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಕ್ಕುಗಳ ಕುರಿತು ಮಹತ್ವದ ಚಿಂತನೆಗಳು ಈ ಸಮ್ಮೇಳನದಲ್ಲಿ ನಡೆದಿದೆ.
City Today News 9341997936
