ವಿಶ್ವಪಥ ಕಲಾ ಸಂಗಮದ “ಪುಕ್ಕಟೆ ಸಲಹೆ” ನಾಟಕದ ಶತಕೋತ್ಸವ ಪ್ರದರ್ಶನ

ಬೆಂಗಳೂರು: ಕಳೆದ ಎಂಟು ವರ್ಷಗಳಿಂದ ನಾಡಿನ ಪ್ರಸಿದ್ಧ ಸಾಹಿತ್ಯಕೃತಿಗಳಿಗೆ ರಂಗರೂಪ ನೀಡಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಿರುವ ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು, ತನ್ನ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ. ತಂಡದ ಅತ್ಯಂತ ಜನಪ್ರಿಯ ಹಾಸ್ಯ ನಾಟಕವಾದ “ಪುಕ್ಕಟೆ ಸಲಹೆ” ತನ್ನ ಶತಕೋತ್ಸವ ಪ್ರದರ್ಶನವನ್ನು ದಿನಾಂಕ 13 ಏಪ್ರಿಲ್ 2025, ಭಾನುವಾರ ಸಂಜೆ 5 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಚರಿಸಲಿದೆ.

ಲೇಖಕ ಎಚ್.ಡುಂಡಿರಾಜ್ ಅವರ ಕಲ್ಪನಾಶಕ್ತಿಯಿಂದ ಜನ್ಮ ಪಡೆದ ಈ ನಾಟಕವು, ದಿನನಿತ್ಯದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷ್ಯ ಕಾರ್ಯಕ್ರಮಗಳ ವ್ಯಂಗ್ಯರೂಪದಲ್ಲಿ ರೂಪುಗೊಂಡಿದೆ. ನಾಟಕದ ಮೂಲಕ ಜ್ಯೋತಿಷ್ಯಿಗಳ ವೈಚಿತ್ರಿಕತೆ, ಜನರ ನಂಬಿಕೆಯ ದುರ್ಬಳಕೆ, ಹಾಗೂ ಸಮಕಾಲೀನ ಸಾಮಾಜಿಕ ಪರಿಸ್ಥಿತಿಗಳಲ್ಲಿ ಹಾಸ್ಯಮಯವಾಗಿ ದರ್ಶನ ನೀಡಲಾಗಿದೆ. ಲ್ಯಾಪ್ಟಾಪ್ ಹಿಡಿದು ರಂಗದ ಮೇಲೆ ಬರುವ ‘ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ’ ಎಂಬ ಪಾತ್ರವು ನಾಟಕದ ಕೇಂದ್ರ ಆಕರ್ಷಣೆಯಾಗಿ ಮಿಂಚುತ್ತದೆ.

ಇದುವರಗೆ 99 ಪ್ರದರ್ಶನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಈ ನಾಟಕದ ಶತಕೋತ್ಸವ ಪ್ರದರ್ಶನವು ವಿಶೇಷವಾಗಿದ್ದು, ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ನಾ. ದಾಮೋದರ ಶೆಟ್ಟಿ, ಬಿ.ಆರ್. ಲಕ್ಷ್ಮಣ ರಾವ್, ಎಚ್.ಡುಂಡಿರಾಜ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ.

ಈ ನಾಟಕವನ್ನು ಅಶೋಕ್ ಬಿ. ಅವರು ನಿರ್ದೇಶಿಸಿದ್ದು, ಪ್ರವೇಶ ಶುಲ್ಕ ರೂ.100 ನಿಗದಿಯಾಗಿದೆ.

ಈ ಕುರಿತಂತೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ನಿರ್ದೇಶಕರಾದ ಅಶೋಕ್ ಬಿ ಮತ್ತು ವಿಶ್ವಪಥ ಕಲಾ ಸಂಗಮದ ಪ್ರಮುಖರು ವಿವರ ನೀಡಿ, ಶತಕೋತ್ಸವ ಪ್ರದರ್ಶನಕ್ಕೆ ಎಲ್ಲಾ ಕಲಾಭಿಮಾನಿಗಳನ್ನು ಆಹ್ವಾನಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.