
ಬೆಂಗಳೂರು, ಏಪ್ರಿಲ್ 5:
ಯಶವಂತಪುರದ ಪ್ರಸಿದ್ಧ ಶ್ರೀ ದಾರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇದೇ ಏಪ್ರಿಲ್ 6, ಭಾನುವಾರ, ಶ್ರೀರಾಮನವಮಿಯ ಅಂಗವಾಗಿ ಅದ್ಧೂರಿ ಮಹೋತ್ಸವ ಆಯೋಜಿಸಲಾಗಿದೆ. ದೇವಸ್ಥಾನ ಟ್ರಸ್ಟ್ ವತಿಯಿಂದ ಪೂಜಾ ಕಾರ್ಯಗಳು ಶಾಸ್ತ್ರೋಕ್ತ ವಿಧಾನದಲ್ಲಿ ನಡೆಯಲಿದ್ದು, ನೂರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಶಾಲಿವಾಹನ ಶಕ 1947ನೇ ವರ್ಷದ ಶ್ರೀ ವಿಶ್ವಾವಸು ಸಂವತ್ಸರ, ಚೈತ್ರ ಮಾಸ, ಶುಕ್ಲಪಕ್ಷ ನವಮಿಯಂದು ನಡೆಯಲಿರುವ ಈ ಮಹೋತ್ಸವವು ಮುಂಜಾನೆ 6:00 ಗಂಟೆಗೆ ಅಭಿಷೇಕ ಹಾಗೂ ಹೋಮಾದಿ ಪೂರ್ವಕ ಪೂಜೆಯಿಂದ ಆರಂಭವಾಗಲಿದೆ. ಬೆಳಿಗ್ಗೆ 10:00ರೊಳಗೆ ಪುಷ್ಪಾಲಂಕಾರ ಅರ್ಚನೆ ನಡೆಯಲಿದ್ದು, ಮಧ್ಯಾಹ್ನ 11:45ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನದಾನ ನಡೆಯಲಿದೆ.
ಸಂಜೆ 6:45ಕ್ಕೆ ಕಿರುಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಕರ್ನಾಟಕದ ಹೆಸರಾಂತ ಭಕ್ತಿಗೀತೆ ತಂಡ ಭಕ್ತಿಗೀತೆಗಳ ಮೂಲಕ ಭಕ್ತರ ಮನಸೂರೆಗೊಳ್ಳಲಿದೆ.
ದೇವಸ್ಥಾನ ಟ್ರಸ್ಟ್ ವತಿಯಿಂದ ನೀಡಿರುವ ಮಾಹಿತಿಯಂತೆ, ಈ ಕಾರ್ಯಕ್ರಮದಲ್ಲಿ ಭಕ್ತರು ಸ್ವಯಂ ಸೇವಾ ಮನೋಭಾವದಿಂದ ಭಾಗವಹಿಸುತ್ತಿದ್ದಾರೆ. ದೈವಾನುಗ್ರಹ ಮತ್ತು ಪುಣ್ಯಲಾಭಕ್ಕಾಗಿ ಭಕ್ತರಿಗೆ ತಮ್ಮ ಬಂಧು-ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಡಾ.ಅಂಬರೀಶ್ ಧರ್ಮದರ್ಶಿಗಳು ವತಿಯಿಂದ ಆಹ್ವಾನ.
ಸ್ಥಳ: ಶ್ರೀ ದಾರೀ ಆಂಜನೇಯ ಸ್ವಾಮಿ ದೇವಸ್ಥಾನ, ಯಶವಂತಪುರ ಮುಖ್ಯದ್ವಾರ, ಬೆಂಗಳೂರು – 22.
City Today News 9341997936
