ಡಾ. ಯೂನಾಸ್ ಜೋನ್ಸ್ ಅವರಿಗೆ ‘ಜಾಗತಿಕ ಮಾನವತಾವಾದಿ ಪ್ರಶಸ್ತಿ’

ಬೆಂಗಳೂರು: ಧಾರ್ಮಿಕ ಸಹಿಷ್ಣುತೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಮಾನ್ಯಗೊಳಿಸಿ, ಸೇಂಟ್ ಮದರ್ ಥೆರೆಸಾ ವಿಶ್ವವಿದ್ಯಾಲಯವು ‘ಜಾಗತಿಕ ಮಾನವತಾವಾದಿ ಪ್ರಶಸ್ತಿ’ಯನ್ನು ಡಾ. ಯೂನಾಸ್ ಜೋನ್ಸ್ ಅವರಿಗೆ ಪ್ರದಾನಿಸಿದೆ.

ಡಾ. ಜೋನ್ಸ್ ಅವರು ‘ಅಹಿಂದ’ ಚಳುವಳಿ ಸಂಘಟನೆಯ ರಾಜ್ಯ ಸಮಿತಿಯಲ್ಲಿ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ಸಹಿಷ್ಣುತೆ ಹಾಗೂ ಸಮುದಾಯಗಳ ಮಧ್ಯೆ ಸಾಮರಸ್ಯ ಬಿಂಬಿಸುವ ಕಾರ್ಯಗಳಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ಪ್ರಶಸ್ತಿ ಮಾನವೀಯ ಮೌಲ್ಯಗಳ ಉತ್ತರಣೆಗೆ ಅವರು ನೀಡಿರುವ ಸುದೀರ್ಘ ಮತ್ತು ಸಮರ್ಪಿತ ಸೇವೆಯ ಮಾನ್ಯತೆ ರೂಪವಾಗಿದೆ.

ಪ್ರಶಸ್ತಿ ಪ್ರಕಟಣೆಯ ನಂತರ, ರಾಜ್ಯದ ವಿವಿಧ ಮೂಲಗಳಿಂದ ಹಾಗೂ ಸಂಘಟನೆಗಳ ವತಿಯಿಂದ ಡಾ. ಯೂನಾಸ್ ಜೋನ್ಸ್ ಅವರಿಗೆ ಅಭಿನಂದನೆಗಳ ಹರಿದುಬಂದಿವೆ.

City Today News 9341997936

Leave a comment

This site uses Akismet to reduce spam. Learn how your comment data is processed.