ಜಯನಗರ ರಾಯರ ಮಠಕ್ಕೆ ಆಗಮಿಸಿ, ಗುರುಗಳ ದರ್ಶನ ಪಡೆದ  ಮಾಜಿ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡರು



ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಈ ದಿನ ಗುರುವಾರದ ಪ್ರಯುಕ್ತ  ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಶ್ರೀ ಗುರು  ರಾಯರ ಬೃಂದಾವನದ ಮುಂಭಾಗದಲ್ಲಿ ಅರ್ಚಕರಾದ ಶ್ರೀ ನಂದಕಿಶೋರ್  ಆಚಾರ್ಯರು ಸಂಕಲ್ಪವನ್ನು ಮಾಡಿಸಿದರು. ನಂತರ ಶ್ರೀ ದೇವೇಗೌಡರು  ಪ್ರಾರ್ಥನೆಯನ್ನು ಮಾಡಿ ದೀಪಗಳನ್ನು ಬೆಳಗಿಸಿ ಮಂಗಳಾರತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಶೇಷವಸ್ತ್ರ, ಪರಿಮಳ ಪ್ರಸಾದ, ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು,

City Today News 9341997936

Leave a comment

This site uses Akismet to reduce spam. Learn how your comment data is processed.