ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಅಧ್ಯಕ್ಷ ಸ್ಥಾನಕ್ಕೆ ರಘುನಾಥ್ ಎಸ್. ಅಭ್ಯರ್ಥಿ ಘೋಷಣೆ – 2025–2030 ಅವಧಿಗೆ ಪ್ರಣಾಳಿಕೆ ಬಿಡುಗಡೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಅಧ್ಯಕ್ಷ ಸ್ಥಾನಕ್ಕೆ ರಘುನಾಥ್ ಎಸ್. ಅಭ್ಯರ್ಥಿ ಘೋಷಣೆ – 2025–2030 ಅವಧಿಗೆ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ಯ 2025–2030 ಅವಧಿಗೆ ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೇಆಕಾಂಕ್ಷಿಯಾಗಿ ರಘುನಾಥ್ ಎಸ್. ಅವರು ಸ್ಪರ್ಧಿಸುತ್ತಿರುವುದಾಗಿ ಘೋಷಣೆ ನೀಡಿದ್ದು, ಈ ಸಂಬಂಧ ತಮ್ಮ ದೀರ್ಘಕಾಲೀನ ದೃಷ್ಟಿಕೋನವನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಇತರ ಅಭ್ಯರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ರಾಜ್ಯದಾದ್ಯಂತ ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಒಳಗೊಂಡಿದ್ದು, ಸಧೃಢ ಆರ್ಥಿಕತೆ, ಸಂಘಟಿತ ಆಡಳಿತ ಮತ್ತು ಸಾಂಸ್ಕೃತಿಕ ಪುನಶ್ಚೇತನವನ್ನು ಕೇಂದ್ರಬಿಂದುವಾಗಿರಿಸಿದೆ.

ಪ್ರಣಾಳಿಕೆ ಪ್ರಮುಖ ಅಂಶಗಳು:

ಮಹಾಸಭೆಗೆ ರೂ. 100 ಕೋಟಿ ಮೂಲಧನ ಸಂಗ್ರಹ.

ಅಧ್ಯಕ್ಷರ ಅವಧಿಯನ್ನು 5 ವರ್ಷಗಳಿಗೆ ನಿಗದಿಪಡಿಸುವುದು.

ಕಾರ್ಯಕ್ಷಮ ಆಡಳಿತಕ್ಕಾಗಿ ಉಪಸಮಿತಿಗಳ ರಚನೆ.

ಸದಸ್ಯರ ಸಂಪೂರ್ಣ ದತ್ತಾಂಶದ ಗಣಕೀಕರಣ.

ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮುದಾಯಕ್ಕಾಗಿ CA (ಸಿವಿಕ್ ಅಮೆನಿಟಿ) ಜಾಗಗಳನ್ನು ಒದಗಿಸಲು ಪ್ರಯತ್ನ.

ಮಹಾಸಭೆಯ ಮಾಸಪತ್ರಿಕೆ ವಿಪನುಡಿಯನ್ನು ಮುದ್ರಿತ ಹಾಗೂ ಡಿಜಿಟಲ್ ಸ್ವರೂಪದಲ್ಲಿ ಸದಸ್ಯರಿಗೆ ಪಠಿಸಲು ವ್ಯವಸ್ಥೆ.

ಪದ್ಮನಾಭನಗರದಲ್ಲಿರುವ ಮಹಾಸಭೆಯ ಆಸ್ತಿಯ ಅಭಿವೃದ್ಧಿ.

ಮಹಿಳಾ ವಸತಿ ನಿಲಯಗಳ ವಿಸ್ತರಣೆ.

ಪ್ರತಿ ಆರು ತಿಂಗಳಿಗೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ.

ಕರ್ನಾಟಕ ಬ್ರಾಹ್ಮಣರ ಇತಿಹಾಸದ ಕುರಿತ ಕೃತಿಗಳ ಪ್ರಕಟಣೆ.

ವೇದ ಪಾಠಶಾಲೆಯ ಸ್ಥಾಪನೆ.

ಪದ್ಮನಾಭನಗರ ಆಸ್ತಿಯ ಪೂರ್ಣ ಮಟ್ಟದ ಅಭಿವೃದ್ಧಿ ಮತ್ತು ಸ್ಥಿರ ಆದಾಯದ ವ್ಯವಸ್ಥೆ.

ಅಪರಕರ್ಮಗಳಿಗೆ ಸರ್ಕಾರದಿಂದ ನಿವೇಶನ ಒದಗಿಸಲು ನಿರಂತರ ಪ್ರಯತ್ನ.

ರಾಜ್ಯದಾದ್ಯಂತ ಶೈಕ್ಷಣಿಕ ಸಂಸ್ಥೆಗಳ ಆರಂಭ.

ಸಮುದಾಯದ ಸಾಂದರ್ಭಿಕ ಡಿಜಿಟಲ್ ಮಾಹಿತಿಕೋಶದ ರಚನೆ.

ಎಲ್ಲಾ ಜಿಲ್ಲೆಗಳಲ್ಲಿ ಇ-ಸೇವಾ ಕೌಂಟರ್‌ಗಳ ಸ್ಥಾಪನೆ.

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಸಮುದಾಯದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಘುನಾಥ್ ಎಸ್. ಅವರು, “ಸಂಘಟಿತ ಅಭಿವೃದ್ದಿ, ಆರ್ಥಿಕ ಸ್ಥಿರತೆ ಮತ್ತು ಸಮಾನ ಒಳಗೊಂಡ ಬೆಳವಣಿಗೆ” ಎಂಬ ಧ್ಯೇಯದೊಂದಿಗೆ ಈ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.