ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪ್ರಕರಣಕ್ಕೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದಿಂದ ತೀವ್ರ ಖಂಡನೆ

ಬೆಂಗಳೂರು: ಧಾರವಾಡ, ಶಿವಮೊಗ್ಗ, ಬೀದರ್ ಹಾಗೂ ಸಾಗರ್ ನಗರದಲ್ಲಿನ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಹಾಗೂ ಕಾಶೀದಾರವನ್ನು ಸಿಇಟಿ ಸಿಬ್ಬಂದಿ ಬಲವಂತವಾಗಿ ತೆಗೆದುಹಾಕಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗಾಯತ್ರೀ ಮಂತ್ರ ದೀಕ್ಷೆ ಪಡೆದು ಆತ್ಮ ಸಾಕ್ಷಾತ್ಕಾರದ ಪರಮಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಯನ್ನು ಅವಹೇಳನೆ ಮಾಡುವ ರೀತಿಯಲ್ಲಿ ನಡೆದ ಈ ಘಟನೆ ಕುರಿತು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ, ಉಪಾಧ್ಯಕ್ಷ ರಾಘವೇಂದ್ರ ಅಲಗೂರ ಅವರು ಮಾತನಾಡುತ್ತಾ, “ಮುಗಳರು ಮತ್ತು ಬ್ರಿಟಿಷರು ಮಾಡಿದ ಹೀನ ಕೃತ್ಯಗಳನ್ನು ಈಗಲೂ ಮುಂದುವರಿಸುತ್ತಿರುವುದು ದುರ್ದೈವಕರ. ವಿದ್ಯಾರ್ಥಿಗಳು ಮಾನಸಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಇಂಥ ಘಟನೆಗಳು ಇಡೀ ಬ್ರಾಹ್ಮಣ ಸಮಾಜಕ್ಕೆ ಅವಮಾನಕಾರಿಯಾಗಿದ್ದು, ಧರ್ಮ ರಕ್ಷಣೆಗಾಗಿ ಬ್ರಾಹ್ಮಣ ಸಮಾಜ ಪ್ರಾಣ ಪಣಕ್ಕಿಡಲು ಸಿದ್ಧವಾಗಿದೆ” ಎಂದರು.

ಅಧಿಕಾರಿಗಳ ಅಮಾನತು ಹಾಗೂ ಶಿಕ್ಷೆಗೆ ಆಗ್ರಹ
ಘಟನೆಗೆ ಕಾರಣರಾದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ, ಕಾನೂನು ಕ್ರಮ ಜರುಗಿಸಬೇಕು ಎಂಬುದು ಮಹಾಸಂಘದ ಬೇಡಿಕೆಯಾಗಿದೆ. ಅಲ್ಲದೆ, ಘಟನೆಗೆ ಒಳಪಟ್ಟ ವಿದ್ಯಾರ್ಥಿಗೆ ಉತ್ತಮ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಸರ್ಕಾರ ಈ ಬಗ್ಗೆ ತಕ್ಷಣ ಸ್ಪಂದಿಸದೆ ಇದ್ದರೆ, ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕಾಂತರಾಜು ಸಮೀಕ್ಷೆಯ ವಿರುದ್ಧ ಆಕ್ಷೇಪ
ಹತ್ತು ವರ್ಷಗಳ ಹಿಂದೆ ನಡೆದ ಕಾಂತರಾಜು ಸಮೀಕ್ಷೆ ವೈಜ್ಞಾನಿಕವಲ್ಲ ಎಂದು ಮಹಾಸಂಘ ಅಭಿಪ್ರಾಯಪಟ್ಟಿದ್ದು, ಬ್ರಾಹ್ಮಣರಲ್ಲಿ ಇರುವ 44 ಉಪಪಂಗಡಗಳನ್ನು ಒಂದೇ ಶ್ರೇಣಿಗೆ ಸೇರಿಸಿ ‘ಹಿಂದೂ ಬ್ರಾಹ್ಮಣ’ ಎಂದು ಪರಿಗಣಿಸುವುದು ಅನ್ಯಾಯkar. ಈ ಹಿನ್ನೆಲೆಯಲ್ಲಿ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಹೊಸ ಸರ್ವೆ ನಡೆಸಬೇಕೆಂದು ಆಗ್ರಹಿಸಲಾಗಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.