
ಬೆಂಗಳೂರು:
ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನ ಮತ್ತು ಆಭರಣ ಖರೀದಿಯನ್ನು ಶುಭಕರವೆಂದು ಪರಿಗಣಿಸುವ ಭಾರತೀಯ ಸಂಸ್ಕೃತಿಯ ಸಂಪ್ರದಾಯವನ್ನು ಗೌರವಿಸಿ, ಓರಾ ಫೈನ್ ಜ್ಯೂವೆಲ್ಲರಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಓರಾ ಫೈನ್ ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ದೀಪು ಮೆಹ್ತಾ ಮಾತನಾಡಿ, “ಓರಾ ಆಭರಣವು ಕೇವಲ ಅಲಂಕಾರವಲ್ಲ, ಅದು ಪರಂಪರೆ ಮತ್ತು ಸಂಭ್ರಮದ ಪ್ರತೀಕ. ಈ ಅಕ್ಷಯ ತೃತೀಯದ ವಿಶೇಷ ಸಂಗ್ರಹವು ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡಲಿದೆ,” ಎಂದರು.

ಅವರು ಮಾತನ್ನು ಮುಂದುವರೆಸುತ್ತಾ, “ಈ ಸಂಗ್ರಹದಲ್ಲಿ ನೆಕ್ಲೇಸ್ ಸೆಟ್‌ಗಳು, ಇಯರ್ ರಿಂಗ್‌ಗಳು, ಪೆಂಡೆಂಟ್‌ಗಳು, ರಿಂಗ್‌ಗಳು ಮತ್ತು ಚೈನ್‌ಗಳು ಸೇರಿವೆ. ಇವು ಆಧುನಿಕ ಮಹಿಳೆಯರ ಅವಶ್ಯಕತೆ ಮತ್ತು ಆಕಾಂಕ್ಷೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ,” ಎಂದು ಹೇಳಿದರು.
ಈ ವಿಶೇಷ ಆಫರ್ ಅಡಿಯಲ್ಲಿ ವಜ್ರದ ಮೌಲ್ಯದಲ್ಲಿ ಶೇ.25ರ ರಿಯಾಯಿತಿ, ಶೂನ್ಯ ಶೇಕಡಾ ಬಡ್ಡಿ ಇಎಂಐ ಸೌಲಭ್ಯ ಹಾಗೂ ಹಳೆಯ ವಜ್ರಾಭರಣ ವಿನಿಮಯದ ಮೇಲೂ ಶೂನ್ಯ ಶೇಕಡಾ ಕಡಿತವನ್ನು ನೀಡಲಾಗುತ್ತಿದೆ. (ನಿಯಮ ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ.)
ಮದುವೆಗಾಗಿ ಅಥವಾ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಆಭರಣ ಖರೀದಿಸುವವರು ಹತ್ತಿರದ ಓರಾ ಫೈನ್ ಜ್ಯೂವೆಲ್ಲರಿ ಮಳಿಗೆಗೆ ಭೇಟಿ ನೀಡಿ ಈ ವಿಶೇಷ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
City Today News 9341997936
