
ಬೆಂಗಳೂರು, ಏಪ್ರಿಲ್ 29: ಅಂತಾರಾಷ್ಟ್ರೀಯ ನೃತ್ಯ ದಿನದ ಅಂಗವಾಗಿ ‘ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್’ ವತಿಯಿಂದ ನೃತ್ಯ ಕ್ಷೇತ್ರದಲ್ಲಿ ವಿಶ್ವದಾಖಲೆ ಸಾಧನೆಯ ವಿಶೇಷ ಪ್ರಯತ್ನಕ್ಕೆ ಇಂದು ನಗರದ ಬಸವನಗುಡಿಯ ಬಿ.ಪಿ. ವಾಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆಂಡ್ ಕಲ್ಚರ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಸಂಸ್ಥೆಯ ಸಂಸ್ಥಾಪಕಿ ಅಂಬಿಕಾ ಸಿ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ವಿಶ್ವದಾಖಲೆ ಬರೆಯುವ ಉದ್ದೇಶದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದು, ನೃತ್ಯ ಅಭಿಮಾನಿಗಳು ಹಾಗೂ ಪೋಷಕರು ಭಾಗಿ ಪಡೆದು ಪ್ರತಿಭಾವಂತ ಮಕ್ಕಳಿಗೆ ಹರ್ಷೋದ್ಗಾರಗಳೊಂದಿಗೆ ಶ್ಲಾಘನೆ ಸಲ್ಲಿಸಿದರು.
ಇತ್ತೀಚೆಗೆ ನೃತ್ಯ ಕಲೆಯ ಪ್ರಚಾರ-ಪ್ರಸಾರಕ್ಕಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಫೌಂಡೇಶನ್, ಈ ಬಾರಿ ವಿಶ್ವದಾಖಲೆ ಮೂಲಕ ಗಮನಸೆಳೆಯಲು ಮುಂದಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಂಸ್ಕೃತಿಕ ವಲಯದ ಹಲವಾರು ಗಣ್ಯರು ಸಹಕರಿಸಿದರು.
City Today News 9341997936
