
ಬೆಂಗಳೂರು, ಮೇ 5:
ಮೇ 5 ರಿಂದ 17ರವರೆಗೆ ನಡೆಯಲಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ವೇಳೆ ‘ಪರಯ’ ಉಪಜಾತಿ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಪರಯ ಮಹಾಸಭೆ ಜಾಗೃತಿ ಅಭಿಯಾನ ಆರಂಭಿಸಿದೆ.
ಮಹಾಸಭೆಯ ಅಧ್ಯಕ್ಷ ಎ. ಕೃಷ್ಣಪ್ಪ ಮಾಹಿತಿ ನೀಡಿದ್ದು, “ತಿಗಳ ಹೊಲಯ (ಚಿಕ್ಕತಾಳಿ) ರೇಣುಕಾ ಯಲ್ಲಮ್ಮ ಬಳಗದವರು ‘ಪರಯ’ ಎಂಬ ಹೆಸರಿನಲ್ಲಿ ತಮ್ಮ ಜಾತಿಯನ್ನು ದಾಖಲಿಸಿಕೊಳ್ಳಬೇಕು. ಇಂದಿನ ಸಮೀಕ್ಷೆ ನಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ಬಹುಮುಖ್ಯವಾಗಿದೆ,” ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರಗಳು ಒಳಮೀಸಲಾತಿ ವಿಭಾಗ ಮಾಡಬಹುದಾದ ಹಿನ್ನೆಲೆಯಲ್ಲಿ ಈ ಸಮೀಕ್ಷೆಗೆ ಸಂವಿಧಾನಿಕ ಮಾನ್ಯತೆ ಇದೆ. ಸುಮಾರು 15 ಲಕ್ಷ ಜನರಿರುವ ಈ ಸಮುದಾಯವು ಪ್ರತ್ಯೇಕ ಶೇ.1ರಷ್ಟು ಮೀಸಲಾತಿಗೆ ಅರ್ಹವಾಗಬೇಕಾದರೆ ಸರಿಯಾದ ಜಾತಿ ದಾಖಲೆಯು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್, ರವಿಕುಮಾರ್, ವೈ. ಗೋಪಾಲ್, ಡಾ. ಕೆ.ಪಿ. ವೆಂಕಟೇಶ್, ಹೆಚ್.ಆರ್. ರಮೇಶ್ ಭಾಗವಹಿಸಿದ್ದರು.
City Today News 9341997936
