
ಬೆಂಗಳೂರು, ಮೇ 4, 2025: ಗ್ಲೆನೀಗಲ್ಸ್ ಆಸ್ಪತ್ರೆಗಳ ಬೆಂಗಳೂರು ಕ್ಲಸ್ಟರ್ ಯಶಸ್ವಿಯಾಗಿ “ವೀಲ್ಸ್ ಆಫ್ ಹೋಪ್: ಎ ರೈಡ್ ಫಾರ್ ಬ್ರೆಸ್ಟ್ ಹೆಲ್ತ್ (ಭರವಸೆಯ ಗಾಲಿಗಳು – ಸ್ತನ ಆರೋಗ್ಯ ಜಾಗೃತಿ ಸವಾರಿ)” ಎಂಬ ಉತ್ಸಾಹಭರಿತ ಬೈಕ್ ರ್ಯಾಲಿಯನ್ನು ಆಯೋಜಿಸಿತು.ಬುಲ್ ಟಸ್ಕರ್ಸ್ ಸಹಯೋಗದೊಂದಿಗೆ ಗ್ಲೆನೀಗಲ್ಸ್ ರಿಚ್ಚಂಡ್ ರಸ್ತೆ ಘಟಕದಿಂದ ಆರಂಭವಾದ ಈ ಸವಾರಿ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಬೈಕರ್‌ಗಳು, ವೈದ್ಯಕೀಯ ವೃತ್ತಿಪರರು, ಕ್ಯಾನ್ಸರ್ ಬದುಕುಳಿದವರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದರು.
ಇದು ಗ್ಲೆನೀಗಲ್ಸ್ ಆಸ್ಪತ್ರೆಗಳ ಸಮುದಾಯ ತೊಡಗಿಸಿಕೊಳ್ಳುವಿಕೆ ಪರಂಪರೆಯ ಭಾಗವಾಗಿ ಆರಂಭವಾದ ಹೊಸ ಉಪಕ್ರಮವಾಗಿದ್ದು, ಪ್ರತೀ ಅಕ್ಟೋಬರ್‌ನಲ್ಲಿ ಆಯೋಜಿಸಲಾಗುವ 5 ಕಿ.ಮೀ. ಸ್ತನ ಕ್ಯಾನ್ಸರ್ ಜಾಗೃತಿ ಓಟದಂತೆ, ಆರಂಭಿಕ ಪತ್ತೆಹಚ್ಚುವಿಕೆಯ ಮಹತ್ವವನ್ನು ಬೆಳಗಿಸುವ ಮತ್ತೊಂದು ಹಾದಿಯಾಗಿದೆ. ರಿಚ್ಚಂಡ್ ರಸ್ತೆ ಘಟಕದ ನೇತೃತ್ವದಲ್ಲಿ ಈ ಉಪಕ್ರಮ ನಗರ ಸಮುದಾಯದೊಂದಿಗೆ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ. ಸಿ. ಉತ್ತಪ್ಪ, ಹಿರಿಯ ಸಲಹೆಗಾರ – ಇಂಟರ್ವೆನ್ನನಲ್ ರೇಡಿಯಾಲಜಿ ರವರು
“ಜಾಗೃತಿಯೇ ಮೊದಲ ಹೆಜ್ಜೆ. ಇಮೇಜಿಂಗ್ ಮತ್ತು ಇಂಟರ್ವೆನ್ನನಲ್ ರೇಡಿಯಾಲಜಿಯಲ್ಲಿ ಪ್ರಗತಿಯಾದ ತಂತ್ರಜ್ಞಾನದಿಂದ ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಈಗ ಸುಲಭವಾಗಿದೆ. ಈ ರೀತಿಯ ಕಾರ್ಯಕ್ರಮಗಳು ತಂತ್ರಜ್ಞಾನ ಮತ್ತು ಜನಜಾಗೃತಿಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತವೆ.” ಎಂದು ಹೇಳಿದರು
ಡಾ. ರಾಜೀವ್ ವಿಜಯಕುಮಾರ್, ಹಿರಿಯ ಸಲಹೆಗಾರ – ವೈದ್ಯಕೀಯ ಆಂಕೊಲಾಜಿ, ಹೆಮಟೋ-ಆಂಕೊಲಾಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ತಜ್ಞ ಮತ್ತು ಡಾ. ಸಿಂಧು ವಿ.ಎ., ಸಲಹೆಗಾರ್ತಿ – ಶಸ್ತ್ರಚಿಕಿತ್ಸಾ ಆಂಕೊಲಾಜಿ ರವರು,
“ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ, ಇದು ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪವಾಗಿದೆ. ಈ ರೀತಿಯ ಸಮುದಾಯ ಕಾರ್ಯಕ್ರಮಗಳು ಮಹಿಳೆಯರಲ್ಲಿ ಅರಿವು ಮೂಡಿಸಲು, ಭಯವನ್ನು ನಿವಾರಿಸಲು ಮತ್ತು ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರನ್ನು ಸಬಲೀಕರಿಸುತ್ತವೆ.”ಎಂದರು.
ಈ ಸಂದರ್ಭದಲ್ಲಿ ಡಾ. ಜತೀಂದರ್ ಅರೋರ, ಕ್ಲಸ್ಟರ್ ಸಿಓಓ, ಗ್ಲೆನೀಗಲ್ಸ್ ಆಸ್ಪತ್ರೆಗಳು, ಬೆಂಗಳೂರು ರವರು
“ಈ ರ್ಯಾಲಿಯಲ್ಲಿ ಕಂಡುಬಂದ ಉತ್ಸಾಹಭರಿತ ಭಾಗವಹಿಸುವಿಕೆ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಮುದಾಯದ ಬದ್ಧತೆಗೆ ಸಾಕ್ಷಿಯಾಗಿದೆ. ಕೆಂಗೇರಿ ಮತ್ತು ರಿಚ್ಚಂಡ್ ರಸ್ತೆಯ ಆಸ್ಪತ್ರೆಗಳು ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಡೆಗಟ್ಟುವ ಆರೋಗ್ಯದ ಕುರಿತು ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಈ ಬೈಕ್ ರ್ಯಾಲಿ ಯುವಜನರ ಮೊಬೈಲ್ ಜೀವನಶೈಲಿಗೆ ತಲುಪುವ ಮೂಲಕ, ಹೆಚ್ಚಿನ ಪ್ರಭಾವ ಬೀರುವ ಜಾಗೃತಿ ಪಥವನ್ನು ಒದಗಿಸುತ್ತಿದೆ.”ಎಂದು ಹೇಳಿದರು.
ಅವರು ಮುಂದುವರೆದು “ಗ್ಲೆನೀಗಲ್ಸ್ ಆಸ್ಪತ್ರೆಗಳಲ್ಲಿ, ನಾವು ಕೇವಲ ಚಿಕಿತ್ಸೆ ನೀಡುವುದಲ್ಲದೆ, ಸಮುದಾಯಗಳನ್ನು ಆರೋಗ್ಯಪೂರ್ಣವಾಗಿ, ಮಾಹಿತಿಯುತವಾಗಿ ಉಳಿಸಲು ನಿರಂತರವಾಗಿ ಕೆಲಸ ಮಾಡುತ್ತೇವೆ. ‘ಭರವಸೆಯ ಗಾಲಿಗಳು’ ಕೇವಲ ಒಂದು ಸವಾರಿ ಅಲ್ಲ – ಇದು ಉತ್ಸಾಹ, ಅರಿವು ಮತ್ತು ಮಹಿಳೆಯರ ಆರೋಗ್ಯಕ್ಕೆ ಬದ್ಧತೆಯ ಸಂಕೇತವಾಗಿದೆ.”ಎಂದು ಹೇಳಿದರು.
City Today News 9341997936
