
ಬೆಂಗಳೂರು | ಮೇ 18, 2025:
ಅಂತರರಾಷ್ಟ್ರೀಯ ಚಿಲ್ಲರೆ ವ್ಯಾಪಾರದ ಪ್ರಮುಖ ಸಂಸ್ಥೆ ಲುಲು ಗ್ರೂಪ್, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎಂ5 ಇಸಿಟಿ ಮಾಲ್ ನಲ್ಲಿ ತನ್ನ ನಾಲ್ಕನೇ ಶಾಖೆಯಾದ ‘ಲುಲು ಡೈಲಿ’ ಸ್ಟೋರ್‌ನ್ನು ಶನಿವಾರ ಉದ್ಘಾಟಿಸಿತು. ಈ ಮೂಲಕ ಕರ್ನಾಟಕದಲ್ಲಿ ಸಂಸ್ಥೆಯ ಚಿಲ್ಲರೆ ವ್ಯಾಪಾರದ ಹಾದಿ ಮತ್ತಷ್ಟು ಬಲವಾಗಿದೆ.
ಹೊಸ ಸ್ಟೋರ್‌ನ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಲುಲು ಗ್ರೂಪ್ ಅಧ್ಯಕ್ಷ ಯೂಸುಫಲಿ ಎಂ.ಎ. ಅವರು ಸೇರಿ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಎಂ5 ಮಹೇಂದ್ರ ಗ್ರೂಪ್‌ನ ಅಧ್ಯಕ್ಷ ಬಿ.ಟಿ. ನಾಗರಾಜ್ ರೆಡ್ಡಿ, ಚಿಕ್ಕಪೇಟೆ ಶಾಸಕ ಉದಯ್ ಬಿ. ಗರುಡಾಚಾರ್, ಲುಲು ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫ್ ಅಲಿ, ಡೈರೆಕ್ಟರ್ ಅನಂತ್ ಎ.ವಿ. ಸೇರಿದಂತೆ ಸಂಸ್ಥೆಯ ಹಿರಿಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

“ಈ ಹೊಸ ಲುಲು ಡೈಲಿ ಸ್ಟೋರ್ ನೇರ ಹಾಗೂ ಪರೋಕ್ಷವಾಗಿ 1,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದು, ಸ್ಥಳೀಯ ರೈತರು ಮತ್ತು ಪೂರೈಕೆದಾರರನ್ನು ನೇರ ಸೋರ್ಸಿಂಗ್ ಮೂಲಕ ಬೆಂಬಲಿಸುತ್ತದೆ. ಇದರ ಮೂಲಕ ಸ್ಥಳೀಯ ಆರ್ಥಿಕತೆಗೆ ಗಂಭೀರ ಉತ್ತೇಜನ ದೊರೆಯಲಿದೆ,” ಎಂದು ಲುಲು ಗ್ರೂಪ್ ಅಧ್ಯಕ್ಷ ಯೂಸುಫಲಿ ಎಂ.ಎ. ಹೇಳಿದರು. “ಈ ಪ್ರಾರಂಭದೊಂದಿಗೆ ನಾವು ಜಾಗತಿಕ ಮಟ್ಟದ ಶಾಪಿಂಗ್ ಅನುಭವವನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರಕ್ಕೆ ತರುತ್ತಿದ್ದೇವೆ” ಎಂಬುದೂ ಅವರು ವಿವರಿಸಿದರು.
45,000 ಚದರ ಅಡಿ ವಿಸ್ತೀರ್ಣದ ಈ ಸ್ಟೋರ್‌ನಲ್ಲಿ ಹಣ್ಣು, ತರಕಾರಿ, ದಿನಸಿ ಸಾಮಗ್ರಿ, ಮಾಂಸ, ಡೇರಿ ಉತ್ಪನ್ನಗಳು, ಗೃಹೋಪಯೋಗಿ ಸಾಮಗ್ರಿಗಳು, ಆಟಿಕೆಗಳು, ಬ್ಯೂಟಿ ಉತ್ಪನ್ನಗಳು ಸೇರಿದಂತೆ ನೂರಾರು ವಿವಿಧ ಆಯ್ಕೆಗಳು ಲಭ್ಯವಿವೆ. ಇತ್ತೀಚಿನ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಈ ಔಟ್‌ಲೆಟ್‌ನಲ್ಲಿ ಪ್ರತ್ಯೇಕ ಫ್ರೆಶ್ ಫುಡ್ ಮತ್ತು ಬೇಕರಿ ವಿಭಾಗವೂ ಇದೆ.

ಗ್ರಾಹಕರ ಅನುಕೂಲಕ್ಕಾಗಿ 700ಕ್ಕಿಂತ ಹೆಚ್ಚು ಪಾರ್ಕಿಂಗ್ ಸ್ಥಳಗಳು, ಶಾಪಿಂಗ್ ಸುಲಭವಾಗಿಸಲು ಉದ್ದೇಶಿತ ಆಧುನಿಕ ಸೌಲಭ್ಯಗಳು ಹಾಗೂ ಆಕರ್ಷಕ ಉದ್ಘಾಟನಾ ಕೊಡುಗೆಗಳು ಸಹ ಲಭ್ಯವಿವೆ.
ಉದ್ಘಾಟನಾ ಸಮಾರಂಭದಲ್ಲಿ ಲುಲು ಗ್ರೂಪ್ ಇಂಡಿಯಾ ನಿರ್ದೇಶಕ ಹಾಗೂ ಸಿಇಒ ನಿಷಾದ್ ಎಂ.ಎ., ನಿರ್ದೇಶಕ ಫಹಾಜ್ ಅಶ್ರಫ್, ಸಿಒಒ ರೇಜಿತ್ ರಾಧಾಕೃಷ್ಣನ್, ಕರ್ನಾಟಕ ವಲಯದ ಪ್ರಾದೇಶಿಕ ನಿರ್ದೇಶಕ ಶೆರೀಫ್ ಕೆ.ಕೆ., ವಲಯದ ಪ್ರಾದೇಶಿಕ ವ್ಯವಸ್ಥಾಪಕ ಜಮಾಲ್ ಕೆ.ಪಿ. ಸೇರಿದಂತೆ ಹಲವರು ಭಾಗವಹಿಸಿದ್ದರು.
City Today News 9341997936
