
ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2024-25 ನೇ ಹಣಕಾಸು ವರ್ಷದ ಅಂತಿಮ ತ್ರೈಮಾಸಿಕದಲ್ಲಿ ಶಕ್ತಿಶಾಲಿ ಬೆಳವಣಿಗೆ ದಾಖಲಿಸಿದ್ದು, ಠೇವಣಿಗಳಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ. ಬಟವಾಡೆಗಳ ಮೊತ್ತವು ₹7,440 ಕೋಟಿಗೆ ತಲುಪಿದ್ದು, ಬ್ಯಾಂಕ್ ಇತಿಹಾಸದಲ್ಲೇ ಅತ್ಯುನ್ನತ ಮಟ್ಟವಾಗಿದೆ. ತ್ರೈಮಾಸಿಕ ಪ್ರಮಾಣದಲ್ಲಿ ಶೇ.39 ಹಾಗೂ ವಾರ್ಷಿಕವಾಗಿ ಶೇ.11ರಷ್ಟು ವೃದ್ಧಿ ಕಂಡಿದೆ.
ಬ್ಯಾಂಕಿನ ಒಟ್ಟು ಸಾಲ ಖಾತೆ ₹32,122 ಕೋಟಿಗೆ ಏರಿಕೆ ಕಂಡಿದ್ದು, ತ್ರೈಮಾಸಿಕದ ದರದಲ್ಲಿ ಶೇ.5 ಮತ್ತು ವರ್ಷಾಧಾರದ ಮೇಲೆ ಶೇ.8 ಏರಿಕೆಯಾಗಿದೆ. ಅಡಮಾನ ಆಧಾರಿತ ಸಾಲಗಳು ₹13,988 ಕೋಟಿಗೆ ತಲುಪಿದ್ದು, ತ್ರೈಮಾಸಿಕದಲ್ಲಿ ಶೇ.17 ಮತ್ತು ವಾರ್ಷಿಕವಾಗಿ ಶೇ.56ರಷ್ಟು ಪ್ರಗತಿ ಸಾಧಿಸಿವೆ.
ಹೊಸ ಉತ್ಪನ್ನಗಳು ಈ ತ್ರೈಮಾಸಿಕದ ಒಟ್ಟು ಬಟವಾಡೆಗಳಲ್ಲಿ ಶೇ.11ರಷ್ಟು ಪಾತ್ರವಹಿಸಿದ್ದರೆ, ಮೈಕ್ರೋ ಬ್ಯಾಂಕಿಂಗ್ ವಿಭಾಗದಲ್ಲಿ ಶೇ.38ರಷ್ಟು ಏರಿಕೆಯಾಗಿದೆ. ವೈಯಕ್ತಿಕ ಸಾಲಗಳು ₹5,182 ಕೋಟಿಗೆ ತಲುಪಿದ್ದು, ಇದು ತ್ರೈಮಾಸಿಕದಲ್ಲಿ ಶೇ.5ರಷ್ಟು ಬೆಳವಣಿಗೆಯಾಗಿದೆ. ಒಟ್ಟಾರೆ ಮೈಕ್ರೋ ಬ್ಯಾಂಕಿಂಗ್ ಸಾಲ ಪೋರ್ಟ್‌ಫೋಲಿಯ ಶೇ.28ನ್ನು ಹೊಂದಿದೆ.
ಬ್ಯಾಂಕ್‌ನ ಎಂ.ಡಿ ಮತ್ತು ಸಿಇಒ ಸಂಜೀವ್ ನೌಟಿಯಾಲ್ ಅವರು, “ಈ ಹಣಕಾಸು ವರ್ಷವು ಬ್ಯಾಂಕಿಗೆ ತೀವ್ರ ಸ್ಪರ್ಧಾತ್ಮಕ ಪರಿಸರದಲ್ಲೂ ಉತ್ತಮ ಗುಣಮಟ್ಟದ ಸಾಲ ಪೋರ್ಟ್‌ಫೋಲಿಯ ಸಾಧನೆಯಿಂದ ಮಹತ್ವಪೂರ್ಣವಾಗಿದೆ. ಅಡಮಾನ ಆಧಾರಿತ ಸಾಲಗಳ ವೈವಿಧ್ಯತೆ ಮತ್ತು ವೃದ್ಧಿಗೆ ಗಮನ ಹರಿಸಿದ ಫಲವಾಗಿ, ಈಗ ಇದರ ಕೊಡುಗೆ ಶೇ.44ಕ್ಕೆ ತಲುಪಿದ್ದು, ಇದು ಕಳೆದ ವರ್ಷಕ್ಕಿಂತ ಶೇ.30 ಹೆಚ್ಚಾಗಿದೆ. ಕ್ರೆಡಿಟ್ ಮತ್ತು ಠೇವಣಿಗಳ ಅನುಪಾತವನ್ನು ಶೇ.85ಕ್ಕೆ ಸುಧಾರಿಸಲಾಗಿದೆ, ಜೊತೆಗೆ ಲಿಕ್ವಿಡಿಟಿ ಕವರೆಜ್ ಅನುಪಾತ (LCR) ಅನ್ನು ಶೇ.120ರ ಮಟ್ಟದಲ್ಲಿ ನಿರ್ವಹಿಸಲಾಗಿದೆ.”ಎಂದರು.
ಅಲ್ಲದೇ, 2025 ಫೆಬ್ರವರಿಯಲ್ಲಿ ಉಜ್ಜೀವನ್ ಬ್ಯಾಂಕ್ ಯೂನಿವರ್ಸಲ್ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳಲು ರಿಸರ್ವ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
City Today News 9341997936
