ಕೈ ಜೋಡಿಸಿದ ಏರ್ಟೆಲ್ ಮತ್ತು ಗೂಗಲ್: ಪೋಸ್ಟ್‌ಪೇಡ್ ಮತ್ತು ವೈಫೈ ಗ್ರಾಹಕರಿಗೆ ಆರು ತಿಂಗಳು ಉಚಿತ ಗೂಗಲ್ ಒನ್ ಕ್ಲೌಡ್ ಸ್ಟೋರೆಜ್

ಬೆಂಗಳೂರು, ಮೇ 20: ಭಾರತೀ ಏರ್ಟೆಲ್ ಮತ್ತು ಗೂಗಲ್ ಮೈತ್ರಿ ಮಾಡಿಕೊಂಡು, ಪೋಸ್ಟ್‌ಪೇಡ್ ಮೊಬೈಲ್ ಮತ್ತು ವೈಫೈ ಗ್ರಾಹಕರಿಗೆ ಆರು ತಿಂಗಳು ಉಚಿತವಾಗಿ 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೆಜ್ ನೀಡಲು ಘೋಷಣೆ ಮಾಡಿದ್ದಾರೆ. ಹೆಚ್ಚು ಡೇಟಾ ಸಂಗ್ರಹದ ಅಗತ್ಯತೆ ಎದುರಿಸುತ್ತಿರುವ ಬಳಕೆದಾರರಿಗೆ ಇದು ಬಹುಮುಖ್ಯ ಸಹಾಯವಾಗಲಿದೆ.

ಈ ಸೇವೆಯನ್ನು ಐದು ಮಂದಿ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾಗಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಅನುಕೂಲಕರವಾಗಿದೆ. ಗ್ರಾಹಕರು ಈ ಆಫರ್ ಅನ್ನು Airtel Thanks App ಮೂಲಕ ಸಕ್ರಿಯಗೊಳಿಸಬಹುದು. ಆರು ತಿಂಗಳ ಉಚಿತ ಅವಧಿಯ ನಂತರ, ಸೇವೆಯನ್ನು ಮುಂದುವರಿಸಲು ಪ್ರತಿ ತಿಂಗಳು ₹125 ಶುಲ್ಕ ವಿಧಿಸಲಾಗುವುದು. ಸೇವೆಯನ್ನು ಇಚ್ಛೆಯಿಲ್ಲದಿದ್ದರೆ ಗ್ರಾಹಕರು ಅದನ್ನು ರದ್ದುಪಡಿಸಬಹುದಾಗಿದೆ.

ಭಾರತೀ ಏರ್ಟೆಲ್‌ನ ಮಾರ್ಕೆಟಿಂಗ್ ನಿರ್ದೇಶಕ ಹಾಗೂ ಕನೆಕ್ಟೆಡ್ ಹೋಮ್ಸ್ ವಿಭಾಗದ ಸಿಇಒ ಸಿದ್ಧಾರ್ಥ ಶರ್ಮಾ ಮಾತನಾಡುತ್ತಾ, “ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿಯ ನಿರ್ವಹಣೆಗೆ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಸಾಧನವಾಗಿರುವುದರಿಂದ ಸ್ಟೋರೆಜ್ today ಮುಖ್ಯ ಸಮಸ್ಯೆಯಾಗಿಯೇ ಪರಿಣಮಿಸಿದೆ. ಈ ಗೂಗಲ್ ಜೊತೆಯ ಒಡಂಬಡಿಕೆಯಿಂದ ನಾವು ಗ್ರಾಹಕರಿಗೆ ಭದ್ರ ಮತ್ತು ಸುಲಭವಾದ ಡೇಟಾ ಸಂಗ್ರಹಣಾ ಪರಿಹಾರ ನೀಡಲು ಸಾಧ್ಯವಾಗಿದೆ.”ಎಂದರು.

ಗೂಗಲ್‌ನ ಏಪಿಎಸಿ ಉಪಾಧ್ಯಕ್ಷೆ ಕರನ್ ಟಿಯೋ ತನ್ನ ಹೇಳಿಕೆಯಲ್ಲಿ , “ಭಾರತದ ಲಕ್ಷಾಂತರ ಬಳಕೆದಾರರಿಗೆ ಗೂಗಲ್ ಒನ್ ಸೇವೆ ಒದಗಿಸಲು ಏರ್ಟೆಲ್ ಜೊತೆಗೆ ಕೈಜೋಡಿಸುವುದಕ್ಕೆ ನಾವು ಆನಂದಿಸುತ್ತಿದ್ದೇವೆ. ಫೋಟೋ, ವಿಡಿಯೋ, ದಸ್ತಾವೇಜುಗಳನ್ನು ಸುರಕ್ಷಿತವಾಗಿ ಬ್ಯಾಕ್‌ಅಪ್ ಮಾಡುವಲ್ಲಿ ಇದು ಸಹಾಯಕವಾಗಲಿದೆ.”ಅಂದರು.

ಈ ಹೆಜ್ಜೆಯಿಂದ ಏರ್ಟೆಲ್ ತನ್ನ ಡಿಜಿಟಲ್ ಸೇವೆಗಳ ಪೂರೈಕೆಯನ್ನು ಮತ್ತಷ್ಟು ಬಲಪಡಿಸಿ, ಗ್ರಾಹಕರಿಗೆ ಸಮಗ್ರ ಡಿಜಿಟಲ್ ಜೀವನ ಅನುಭವವನ್ನು ಒದಗಿಸಲು ಮುಂದಾಗಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.