ಹೊಸ “ಜೈವಿಕ ಇಂಧನ ಧೋರಣೆ 2025–30” ಜಾರಿಗೆ ತ್ವರಿತ ಕ್ರಮ: ಎಸ್.ಇ. ಸುಧೀಂದ್ರ

ಬೆಂಗಳೂರು: “ಜೈವಿಕ ಇಂಧನದ ಹೊಸ ನೀತಿ”ಯನ್ನು ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಈ ಧೋರಣೆಯನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ತಯಾರಿಯಲ್ಲಿರುವುದಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಇ. ಸುಧೀಂದ್ರ ತಿಳಿಸಿದ್ದಾರೆ.

ನಿಗಮದ 42ನೇ ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅವರು, ನಿರೀಕ್ಷಿತ ಇಂಧನ ನೀತಿಯ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಹಸಿರು ಪರಿಸರ ನಿರ್ಮಾಣದ ದೃಷ್ಟಿಯಿಂದ ಜೈವಿಕ ಇಂಧನ ಉಪಯೋಗವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಸ ನೀತಿಗೆ ರೂಪರೇಖೆ ಸಿದ್ಧವಾಗಿದೆ. ಈ ನವೀನ ಧೋರಣೆಯ ಅನುಷ್ಠಾನದಿಂದ ಪ್ರತಿಯೊಬ್ಬರೂ ಜೈವಿಕ ಇಂಧನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತಾಗುತ್ತದೆ ಎಂದು ಅವರು ಹೇಳಿದರು. ಸಭೆಯಲ್ಲಿ 2024–25ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಸಹ ಮಂಡಿಸಲಾಯಿತು.

ಮಾಹಿತಿಯ ಪ್ರಮುಖ ಅಂಶಗಳು:

ಜೈವಿಕ ಇಂಧನದ ಪ್ರಾಯೋಗಿಕ ಬಳಕೆಗಾಗಿ ಹೊಸ ನೀತಿಯ ಜಾರಿ.

ಬಯೋಬ್ರಿಕೆಟ್, ಬಯೋಪೆಲೆಟ್, ಸಂಕುಚಿತ ಜೈವ ಅನಿಲ, ಜೈವಿಕ ಮಾಸದ ಆಧಾರಿತ ಹಸಿರು ಹೈಡ್ರೋಜನ್ ಮೊದಲಾದವುಗಳ ಕುರಿತು ಪ್ರಸ್ತಾಪ.

ಬಯೋಡೀಸೆಲ್ ತಯಾರಿಕೆಗೆ ಅಗತ್ಯವಿರುವ ತೈಲಬೀಜಗಳಾದ ಹೊಂಗೆ, ಬೇವು, ಸೀಮರೂಬ ಇತ್ಯಾದಿಗಳ ಸಂಗ್ರಹಣೆಗೆ ಉಪ ಸಮಿತಿ ರಚನೆಗೆ ಸೂಚನೆ.


ಸಭೆಯಲ್ಲಿ ಭಾಗವಹಿಸಿದ ಪ್ರಮುಖ ಪದಾಧಿಕಾರಿಗಳು:
ನಿರ್ವಹಣಾಧಿಕಾರಿ ಶಿವಶಂಕರ್ ಎಲ್., ಸದಸ್ಯರು ಕೃಷ್ಣನ್, ದಿವಾಕರ್ ರಾವ್, ಉಪ ಕಾರ್ಯದರ್ಶಿ ಎಂ.ಎಂ. ರಾಜು, ತಾಂತ್ರಿಕ ಅಧಿಕಾರಿ ಲೋಹಿತ್ ಬಿ.ಆರ್., ಸಲಹೆಗಾರರು ಭರತ್ ಸುಬ್ರಮಣ್ಯಂ, ದೀಪಿ ಸಿಂಗ್, ಸಂತೋಷ್ ಬಿ.ಎಲ್., ಡಾ. ದಯಾನಂದ ಜಿ.ಎನ್., ಅರಣ್ಯ ಇಲಾಖೆಯ ರಮೇಶ್ ಬಿ.ಆರ್ ಮತ್ತು ಸಾರಿಗೆ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.