ಬೆಂಗಳೂರು ಗೇಮರ್ಸ್‌ಗಾಗಿ ದಿಟ್ಟ ವೇದಿಕೆ: ರಾಯಲ್ ಚಾಲೆಂಜ್ ಗೇಮ್ ನೈಟ್ಸ್ ಯಶಸ್ವಿ ಆಯೋಜನೆ

ಬೆಂಗಳೂರು, 28 ಮೇ 2025 – ದಿಟ್ಟತನ ಮತ್ತು ಸ್ಪರ್ಧಾತ್ಮಕತೆಗಾಗಿ ಹೆಸರಾಗಿರುವ ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತನ್ನ ಆವಿಷ್ಕಾರಾತ್ಮಕ ಗೇಮಿಂಗ್ ಉಪಕ್ರಮ ‘ಗೇಮ್ ನೈಟ್ಸ್’ ಅನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. ಈ ಕಾರ್ಯಕ್ರಮವು ಮುಂಬೈ, ಲೂಧಿಯಾನ ಮತ್ತು ಗೌಹಾತಿಯಂತಹ ನಗರಗಳಲ್ಲಿ ಯಶಸ್ವೀ ಸುತ್ತುಗಳನ್ನು ಪೂರೈಸಿದ ಬಳಿಕ, ಈಗ ನವೀನ ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಯುವಶಕ್ತಿಯ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ನಡೆಯಿತು.

ಆರ್‌ಸಿವಿ ಬಾರ್ ಮತ್ತು ಕೆಫೆ, ಅಶೋಕನಗರದಲ್ಲಿ ಜರುಗಿದ ಈ ಗೇಮಿಂಗ್ ಸಂಭ್ರಮವು, ಕ್ರೀಡೆ, ಆಟ, ಮತ್ತು ಡಿಜಿಟಲ್ ಸಂಸ್ಕೃತಿಯ ಸಂಗಮವನ್ನೇ ಮೇಳೈಸುವ ವೇದಿಕೆಯಾಗಿತ್ತು. ಇದರಲ್ಲಿ ಅತ್ಯಾಧುನಿಕ ವಿಆರ್ ಕ್ರಿಕೆಟ್, ಕ್ರಿಕೆಟ್ ಥೀಮ್ ಆಧಾರಿತ ಪ್ಲೇಸ್ಟೇಶನ್ ಗೇಮಿಂಗ್ ವಲಯಗಳು ಮತ್ತು ಬಹುಮಾನಗಳೊಂದಿಗೆ ನಡೆದ ಇಂಟರಾಕ್ಟಿವ್ ಸವಾಲುಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಈ ಕಾರ್ಯಕ್ರಮದಲ್ಲಿ ನೂರಾರು ಗೇಮರ್ಸ್, ಡಿಜಿಟಲ್ ಕ್ರಿಯೇಟರ್‌ಗಳು ಹಾಗೂ ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಂಡು, ಪರಸ್ಪರ ಸಂವಾದದ ಮೂಲಕ ತಮ್ಮ ಕೌಶಲ್ಯ ಹಾಗೂ ಸ್ಫೂರ್ತಿಯನ್ನು ಹಂಚಿಕೊಂಡರು. ಅಲ್ಲದೇ, ಆಸಕ್ತಿಯಾಯಕ ಮಾರ್ಕೀ ಲೀಗ್ ಪಂದ್ಯಗಳ ನೇರ ಪ್ರಸಾರವು ಕೂಡ ಈ ಗೇಮ್ ನೈಟ್‌ನ ಭಾಗವಾಗಿತ್ತು.

ಡಿಯಾಜಿಯೊ ಇಂಡಿಯಾದ ಉಪಾಧ್ಯಕ್ಷ ಮತ್ತು ಪೋರ್ಟ್‌ಫೋಲಿಯೋ ಮುಖ್ಯಸ್ಥ ವರುಣ್ ಕೂರಿಚ್ಚ್ ಈ ಕುರಿತು ಮಾತನಾಡುತ್ತಾ, “ರಾಯಲ್ ಚಾಲೆಂಜ್ ಬ್ರ್ಯಾಂಡ್‌ಗಾಗಿ ಗೇಮಿಂಗ್ ಒಂದು ನೈಸರ್ಗಿಕ ವಿಸ್ತರಣೆ. ಇದು ಕ್ರೀಡೆ ಮತ್ತು ಸ್ವ-ಅಭಿವ್ಯಕ್ತಿಯ ಮದ್ಯದಲ್ಲಿ ನಿಂತಿರುವ ದಿಟ್ಟತೆಯ ರೂಪವಾಗಿದೆ. ಡಿಜಿಟಲ್ ಆಟಗಳ ಮೂಲಕ ನಾವು ಹೊಸ ತಂತ್ರಜ್ಞಾನದಲ್ಲೂ ಸ್ಪರ್ಧಾತ್ಮಕ ಉತ್ಸಾಹವನ್ನೇ ಮುಂದುವರಿಸುತ್ತಿದ್ದೇವೆ,” ಎಂದರು.

ರಾಯಲ್ ಚಾಲೆಂಜ್ ಗೇಮ್ ನೈಟ್ಸ್ ಮುಂದಿನ ಹಂತವಾಗಿ ಭಾರತದಲ್ಲಿನ ಇತರ ನಗರಗಳಲ್ಲಿ, ವಿಶೇಷವಾಗಿ ಗೌಹಾತಿ ಮತ್ತು ಆ ಊರಾಚೆ, ಇತರ ಯುವ ಗೇಮಿಂಗ್ ಸಮುದಾಯಗಳೊಂದಿಗೆ ಸಂಪರ್ಕ ಬೆಳೆಸಲು ಉದ್ದೇಶಿಸಿಕೊಂಡಿದೆ. ಈ ಮೂಲಕ ಯುವ ಪೀಳಿಗೆಯ ಸೃಜನಶೀಲತೆಯನ್ನು ಉತ್ತೇಜಿಸುವ, ಸ್ಪರ್ಧಾತ್ಮಕತೆ ಮತ್ತು ಸಾಂಸ್ಕೃತಿಕ ಸಂಗಮವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಡಿಯಾಜಿಯೊ ಇಂಡಿಯಾ ಜಾಗತಿಕ ಮದ್ಯ ತಯಾರಿಕಾ ಸಂಸ್ಥೆಯಾದ ಡಿಯಾಜಿಯೊ ಪಿಎಲ್ಸಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ಪ್ರಮುಖ ಪಾನೀಯ ಉತ್ಪಾದಕ ಸಂಸ್ಥೆಯಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಯಾಜಿಯೊ ಇಂಡಿಯಾ 35ಕ್ಕೂ ಹೆಚ್ಚು ಘಟಕಗಳು ಮತ್ತು 3000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
http://www.diageoindia.com
http://www.DRINKiQ.com

City Today News 9341997936

Leave a comment

This site uses Akismet to reduce spam. Learn how your comment data is processed.