ಹಿಂದುಳಿದ ವರ್ಗ ಗುತ್ತಿಗೆದಾರರಿಗೆ ಮೀಸಲಾತಿ ಘೋಷಿಸಿದ ಸರ್ಕಾರಕ್ಕೆ ಸಂಘದ ಧನ್ಯವಾದ — ಕಾಯ್ದೆ ಪಾಲಿಸದ ಇಲಾಖೆಗಳಿಗೆ ಎಚ್ಚರಿಕೆ

ಬೆಂಗಳೂರು, ಜೂನ್ 9: ಹಿಂದುಳಿದ ವರ್ಗಗಳ (ಪ್ರವರ್ಗ-1 ಮತ್ತು 2A) ಗುತ್ತಿಗೆದಾರರಿಗೆ ಸರಕಾರ ನೀಡಿರುವ ಮೀಸಲಾತಿ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘ (ಬೆಂಗಳೂರು) ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ. ಈ ನಿರ್ಧಾರ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಾಯ್ದುಕೊಳ್ಳುವ ಮತ್ತು ಸಾಮಾಜಿಕ ನ್ಯಾಯವನ್ನು ನೆಲೆಗಟ್ಟಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಘದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಸಂಘದ ಅಧ್ಯಕ್ಷ ಕೆ.ಎಲ್. ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜು,ಅವರು ಸೋಮವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ವರ್ಷಗಳ ಹೋರಾಟದ ಫಲವಾಗಿ ಇಂದಿನ ನಿರ್ಧಾರ ಸಾಧ್ಯವಾಯಿತು. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಲ್ಲ ಸಚಿವರು-ಶಾಸಕರ ಸಹಕಾರದಿಂದ ಈ ಮೀಸಲಾತಿ ಜಾರಿಯಾಗಿದೆ,” ಎಂದು ಹೇಳಿದರು.

ಸಂಘವು ಮೌಲಿಕ ಹೋರಾಟದ ಭಾಗವಾಗಿ ಕಾನೂನು ಮತ್ತು ಸಂಸದೀಯ ಇಲಾಖೆ, ಹಣಕಾಸು ಇಲಾಖೆ ಹಾಗೂ ಇ-ಪ್ರೊಕ್ಯೂರ್ಮೆಂಟ್ ಅಧಿಕಾರಿಗಳೊಂದಿಗೆ ಹಲವಾರು ಸಭೆಗಳಲ್ಲಿ ಭಾಗವಹಿಸಿ, ತಮ್ಮ ಸೂಚನೆಗಳನ್ನು ನೀಡಿದ್ದು, ಸರ್ಕಾರವು 2024ರ ಆಗಸ್ಟ್ 21ರಂದು ಬಿಡುಗಡೆ ಮಾಡಿದ ರಾಜ್ಯಪತ್ರದಲ್ಲಿ ಸಂಘದ ಹೆಸರನ್ನು ಸೇರಿಸಿರುವುದು, ಈ ಹೋರಾಟದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.


ಸಂಘದ ಮುಂದಿನ ಪ್ಲಾನ್

1. ಸದಸ್ಯತ್ವ ವಿಸ್ತರಣೆ:
ರಾಜ್ಯದ ಎಲ್ಲ ಅರ್ಹ ವರ್ಗ-1 ಮತ್ತು 2A ಗುತ್ತಿಗೆದಾರರಿಗೆ ಸಂಘದಲ್ಲಿ ಸೇರ್ಪಡೆಯಾಗಲು ಅವಕಾಶ ನೀಡಲಾಗುವುದು.


2. ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು:
ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ನೀಡಲು ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸ್ಥಾಪಿಸಲಾಗುವುದು.


3. ಕೆ.ಟಿ.ಟಿ.ಪಿ. ಕಾಯ್ದೆಯ ಅನುಷ್ಠಾನಕ್ಕೆ ಒತ್ತಾಯ:
ಕೆಲ ಇಲಾಖೆಗಳು ಕಾನೂನಿನಂತೆ ಮೀಸಲಾತಿ ಜಾರಿಗೆ ತಂದಿರುವರೆಂದರೆ, ಇನ್ನು ಕೆಲವರು ಅದನ್ನು ಉಲ್ಲಂಘಿಸುತ್ತಿವೆ. ಇದರಿಂದ ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಂಘಕ್ಕೆ ಹಲವಾರು ದೂರುಗಳು ಬಂದಿದ್ದು, ಎಚ್ಚರಿಕೆ ನೀಡಲಾಗಿದ್ದು, “ಅವಕಾಶ ನೀಡದೆ ಇದ್ದರೆ, ಸಂಬಂಧಿತ ಇಲಾಖೆಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ,” ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.



ಸಂಘವು ಮೀಸಲಾತಿ ಹಕ್ಕುಗಳ ಸಮರ್ಪಕ ಅನುಷ್ಠಾನಕ್ಕೆ ಬದ್ಧವಾಗಿದ್ದು, ಎಲ್ಲಾ ಇಲಾಖೆಗಳು ಕೆ.ಟಿ.ಟಿ.ಪಿ ಕಾಯ್ದೆಯ ಅನುಯಾಯಿಯಾಗಬೇಕು ಎಂಬುದು ಸಂಘದ ಸ್ಪಷ್ಟ ಮತ್ನವಾಗಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.