
ಬೆಂಗಳೂರು, ಜೂನ್ 18 – ಪ್ರಖ್ಯಾತ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರಾಂಡ್ ‘ಕಿಂಗ್‌ಫಿಶರ್ ಪ್ರೀಮಿಯಂ’ ಇದೀಗ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (AFA) ಜೊತೆಗೆ ಪ್ರಾದೇಶಿಕ ಪ್ರಾಯೋಜಕತ್ವದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ. ಬ್ಯೂನಸ್ ಐರಿಸ್‌ನ ರಿವರ್ ಪ್ಲೇಟ್ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಕುರಿತು ಅಧಿಕೃತ ಘೋಷಣೆ ನಡೆಯಿತು.
ಈ ಸಂಧರ್ಭದಲ್ಲಿ ಯುನೈಟೆಡ್ ಬ್ರೂವರೀಸ್‌ನ ಪಾಲುದಾರ ಸಂಸ್ಥೆಯಾದ ಕಿಂಗ್‌ಫಿಶರ್ ನ ಮುಖ್ಯಸ್ಥ ಮೋಹಿತ್ ರೈನಾ ಹಾಗೂ ಎಎಫ್‌ಎಯ ವಾಣಿಜ್ಯ ಮತ್ತು ಮಾರುಕಟ್ಟೆ ಮುಖ್ಯಸ್ಥ ಲಿಯಾಂಡ್ರೊ ಪೀಟರ್ಸನ್ ಉಪಸ್ಥಿತರಿದ್ದರು.
ಈ ಹೊಸ ಸಹಯೋಗದ ಮೂಲಕ ಪಶ್ಚಿಮ ಬಂಗಾಳ, ಕೇರಳ, ಗೋವಾ ಹಾಗೂ ಈಶಾನ್ಯ ರಾಜ್ಯಗಳಂತೆ ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಗೆ ಆಸಕ್ತಿ ಹೆಚ್ಚು ಇರುವ ಪ್ರದೇಶಗಳಲ್ಲಿ ಕಿಂಗ್‌ಫಿಶರ್ ತನ್ನ ಬ್ರಾಂಡ್ ಹಡವಿಕೆಯನ್ನು ವಿಸ್ತರಿಸಲು ಉದ್ದೇಶಿಸಿದೆ. ಇದೊಂದು ಕ್ರೀಡೆ, ಸಂಭ್ರಮ ಹಾಗೂ ಜೀವನಶೈಲಿ ಬ್ರಾಂಡ್ ಆಗಿ ತನ್ನನ್ನು ತಾನು ಪ್ರತಿಷ್ಠಾಪಿಸಲು ಕೈಗೊಂಡಿರುವ ಪ್ರಮುಖ ಹೆಜ್ಜೆಯಾಗಿದೆ.
ಬ್ರಾಂಡ್ ಸಕ್ರಿಯಗೊಳಿಸುವಿಕೆಗಾಗಿ ಆನ್‌ಗ್ರೌಂಡ್ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಅಭಿಮಾನಿಗಳನ್ನು ತೊಡಗಿಸಿಕೊಳ್ಳುವ ವಿಶಿಷ್ಟ ಅಭಿಯಾನವನ್ನು ರೂಪಿಸಿದೆ. ಇದಕ್ಕೂ ಮುಕ್ತಾಯವಾಗಿ, ಅಕ್ಟೋಬರ್ 2025 ರಲ್ಲಿ ಅರ್ಜೆಂಟೀನಾ ರಾಷ್ಟ್ರೀಯ ಫುಟ್‌ಬಾಲ್ ತಂಡವು ಕೇರಳದಲ್ಲಿ ಅಂತರರಾಷ್ಟ್ರೀಯ ಸ್ನೇಹಾತ್ಮಕ ಪಂದ್ಯವೊಂದನ್ನು ಆಡಲಿದ್ದು, ಇದನ್ನು ಲಕ್ಷಾಂತರ ಅಭಿಮಾನಿಗಳು ಎದುರುನೋಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಲಿಯಾಂಡ್ರೊ ಪೀಟರ್ಸನ್ ಅವರು, “ಕಿಂಗ್‌ಫಿಶರ್ ನೊಂದಿಗೆ ನಮ್ಮ ಸಹಭಾಗಿತ್ವವು ಆರ್ಥಿಕವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ಎರಡೂ ಅಂಶಗಳಲ್ಲಿ ಪ್ರಬಲವಾಗಿದೆ. ನಾವು ಭಾರತದಲ್ಲಿ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಲು ಉತ್ಸುಕರಾಗಿದ್ದೇವೆ,” ಎಂದು ತಿಳಿಸಿದರು.
City Today News 9341997936
