“ಕರ್ನಾಟಕದಲ್ಲಷ್ಟೇ OC ಕಾನೂನು? – ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮಕ್ಕೆ, ಬೆಸ್ಕಾಂ ವಿರುದ್ಧ ಗ್ರಾಹಕರ ಆಕ್ರೋಶ”

ಬೆಂಗಳೂರು, ಜೂನ್ 19:
ಬೆಸ್ಕಾಂ ಕೇಂದ್ರ ಕಚೇರಿ ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ ಸುಪ್ರೀಂ ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ವಾಸಯೋಗ್ಯ ಪ್ರಮಾಣಪತ್ರ (OC) ಹೊಂದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಬೇಕೆಂದು ತಿಳಿಸಿದೆ. ಈ ಆದೇಶದ ಪರಿಣಾಮವಾಗಿ ಶಾಶ್ವತ ವಿದ್ಯುತ್ ಸಂಪರ್ಕ ನಿರಾಕರಿಸಿರುವುದರಿಂದ ಹಲವಾರು ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರಂಗದಲ್ಲಿ ಕಳೆದ ಎರಡು ವರ್ಷಗಳಿಂದ ಅನೇಕ ಮನೆ ನಿರ್ಮಾಣದ ಹಂತದಲ್ಲಿರುವ ಗ್ರಾಹಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಂಡು, ಶಾಶ್ವತ ಸಂಪರ್ಕಕ್ಕಾಗಿ ಬೇಕಾದ ಎಲ್ಲಾ ಶುಲ್ಕಗಳನ್ನು ಪಾವತಿಸಿದ್ದಾರೆ. ಆದರೆ ಇಂದಿನವರೆಗೂ ಶಾಶ್ವತ ಸಂಪರ್ಕ ನೀಡದೆ ಬೆಸ್ಕಾಂ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಪಾವತಿದಾರರ ವಿರುದ್ಧ ದುರುಪಯೋಗಪಡಿಸುತ್ತಿರುವುದಾಗಿ ಆರೋಪಿಸಿದ್ದಾರೆ.

“ಸುಪ್ರೀಂ ಕೋರ್ಟ್ ಯಾವುದೇ ನಿರ್ಣಯದಲ್ಲಿ ಪೂರ್ಣಗೊಂಡ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂಬ ನಿರ್ಬಂಧವನ್ನು ವಿಧಿಸಿರುವುದಿಲ್ಲ. ಇಂತಹ ನಿಯಮಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಜಾರಿಯಲ್ಲಿದ್ದು, ಬೇರೆ ರಾಜ್ಯಗಳಲ್ಲಿ ಜನರಿಗೆ ಈ ರೀತಿಯ ತೊಂದರೆಗಳಿಲ್ಲ,” ಎಂದು ಎಸ್7 ಉಪವಿಭಾಗದ ಬಳಕೆದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೊಂದು ಕಡೆ, ಈ ತಾತ್ಕಾಲಿಕ ಸಂಪರ್ಕಗಳಿಗೆ ಪ್ರತಿಮಾಸವೂ ಹೆಚ್ಚಿನ ಬಿಲ್ ಆಗುತ್ತಿರುವುದರಿಂದ ಗ್ರಾಹಕರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ. “ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ತೆಗೆದುಕೊಂಡು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾ EMI ಹಾಗೂ ವಿದ್ಯುತ್ ಬಿಲ್ಲುಗಳನ್ನು ಪೂರೈಸುವುದು ನಮಗೆ ಕಷ್ಟಕರವಾಗಿದೆ,” ಎಂದು ಬಳಕೆದಾರರು ಒತ್ತಾಯಿಸಿದರು.

ಈ ಸಮಸ್ಯೆಗೂ ಲೆಕ್ಕ ಹಾಕದೇ ಶಾಶ್ವತ ಸಂಪರ್ಕ ನೀಡದೆ ನಿರ್ಲಕ್ಷ್ಯ ತೋರುತ್ತಿರುವ ಬೆಸ್ಕಾಂ ವಿರುದ್ಧ ಗ್ರಾಹಕರು ಈಗ ಒಟ್ಟುಗೂಡಿದ್ದಾರೆ. ಕನ್ನಡ ವಿದ್ಯುತ್ ಗ್ರಾಹಕರ ಸಂಘದ ನೇತೃತ್ವದಲ್ಲಿ ನೊಂದ ಗ್ರಾಹಕರು ಸಹಿಗಳನ್ನು ಸಂಗ್ರಹಿಸಿ, ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.