
ಬೆಂಗಳೂರು, ಜೂನ್ 25 – ಮಹಾಲಯ ಪಕ್ಷದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರವಾಸಿ ಸಂಸ್ಥೆ ಟೂರ್ ಟೈಮ್ಸ್, ಭಾರತದ ಪ್ರಮುಖ ಧಾರ್ಮಿಕ ರೈಲು ಪ್ರವಾಸಗಳ ಆಯೋಜಕರಲ್ಲಿ ಒಬ್ಬರಾದವರು, ಈ ಬಾರಿ ವಿಶೇಷ ‘ಸಪ್ತ ಮೋಕ್ಷ ಕ್ಷೇತ್ರ ಯಾತ್ರೆ’ಯನ್ನು ಘೋಷಿಸಿದ್ದಾರೆ. 14 ದಿನಗಳ ಈ ಧಾರ್ಮಿಕ ಯಾತ್ರೆ ಸೆಪ್ಟೆಂಬರ್ 4ರಿಂದ ಆರಂಭವಾಗಲಿದ್ದು, ಭಾರತೀಯ ರೈಲ್ವೆಯ ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ, ಸೌತ್ ಸ್ಟಾರ್ ರೈಲಿನ ಮೂಲಕ ಜಾರಿಗೊಳ್ಳಲಿದೆ.
ಯಾತ್ರೆಯು ಪ್ರಾಯಾಗ, ಗಯಾ, ಕಾಶಿ, ಅಯೋಧ್ಯೆ, ಮಥುರಾ, ದ್ವಾರಕಾ, ಉಜ್ಜಯಿನಿ, ಓಂಕಾರೇಶ್ವರ ಸೇರಿದಂತೆ ಪ್ರಮುಖ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಿದೆ. ಮಹಾಲಯ ಪಕ್ಷದ ಪ್ರಯುಕ್ತ ಈ ಸ್ಥಳಗಳಲ್ಲಿ ಯಾತ್ರಿಕರು ಪಿಂಡ ದಾನ ಮತ್ತು ತಾತ್ಕಾಲಿಕ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಬಹುದಾಗಿದೆ.
ಪ್ರವಾಸದಲ್ಲಿ ಪೂರ್ಣ ಹವಾನಿಯಂತ್ರಿತ ರೈಲು, ಹೋಟೆಲ್ ವಸತಿ, ಸ್ಥಳಾಂತರ ವ್ಯವಸ್ಥೆ, ಸಿಸಿಟಿವಿ ಭದ್ರತೆ, ಪ್ರವಾಸ ಮಾರ್ಗದರ್ಶನ, ಹಾಗೂ ದಕ್ಷಿಣ ಭಾರತೀಯ ಆಹಾರ ವ್ಯವಸ್ಥೆ ಒಳಗೊಂಡಿದೆ. ಪ್ರತಿ ಕೋಚ್‌ಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರಯಾಣಿಕರು ತಾವು ಹೋದ ಸ್ಥಳಗಳಿಗೆ ಧೈರ್ಯವಾಗಿ ಭೇಟಿ ನೀಡಬಹುದಾಗಿದೆ.
ಈ ಕುರಿತು ವಿವರ ನೀಡಿದ ಸೌತ್ ಸ್ಟಾರ್ ರೈಲಿನ ಪ್ರತಿನಿಧಿ ವಿಘ್ನೇಶ್ ಅವರು, “ಹಿರಿಯ ನಾಗರಿಕರು ಮತ್ತು ಕುಟುಂಬಗಳಿಗಾಗಿ ನಿರ್ವಿಘ್ನ ಹಾಗೂ ಮಾರ್ಗದರ್ಶಿತ ಯಾತ್ರೆಯು ಈ ಬಾರಿ ರೂಪುಗೊಂಡಿದೆ. ಪ್ರವಾಸದ ಪೂರ್ವಭಾವಿಯಾಗಿ ಗುರುತಿನ ಚೀಟಿ, ತುರ್ತು ಸಂಪರ್ಕ ಸಂಖ್ಯೆ, ಹಾಗೂ ಸರಕಾರೀ ನೌಕರರಿಗೆ ರಜೆ ಪ್ರಯಾಣ ರಿಯಾಯಿತಿ ಹಾಗೂ ಮರುಪಾವತಿ ಸೌಲಭ್ಯವೂ ಲಭ್ಯವಿದೆ,” ಎಂದು ತಿಳಿಸಿದರು.
ಪ್ರವಾಸದ ಪ್ಯಾಕೇಜ್ ಶುಲ್ಕ: ಥರ್ಡ್ ಎಸಿ – ₹46,000, ಸೆಕೆಂಡ್ ಎಸಿ – ₹56,500 ಹಾಗೂ ಫಸ್ಟ್ ಎಸಿ – ₹62,500.
ಆಸಕ್ತರು http://www.tourtimes.in ಮೂಲಕ ಬುಕ್ಕಿಂಗ್ ಮಾಡಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ 7305 85 85 85 ಗೆ ಕರೆ ಮಾಡಬಹುದು.
City Today News 9341997936
