ಬೆಸ್ಕಾಂ (BESCOM) ವತಿಯಿಂದ ವಿದ್ಯುತ್ ಸುರಕ್ಷತೆ ಕುರಿತ ಜಾಗೃತಿ ಜಾಥಾ– ‘ನಿಮ್ಮ ಜೀವದ ರಕ್ಷಣೆ ನಮ್ಮ ಆದ್ಯತೆ’ ಎಂಬ ಘೋಷಣೆಯೊಂದಿಗೆ ಸಾರ್ವಜನಿಕ ಜಾಗೃತಿ



ಬೆಂಗಳೂರು: ನಗರದ ಕೋರಮಂಗಲದಲ್ಲಿರುವ ಎನ್.ಜಿ.ವಿ. ಕಾಂಪ್ಲೆಕ್ಸ್‌ನಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ (BESCOM) ವತಿಯಿಂದ ವಿದ್ಯುತ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ಹಾಗೂ ಮಾಹಿತಿ ಅಭಿಯಾನವನ್ನು ಸಹಾಯಕ ಇಂಜಿನಿಯರಾದ ಮಂಜೇಗೌಡರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

‘ವಿದ್ಯುತ್ ಬಗ್ಗೆ ಜಾಗ್ರತೆ ಇರಲಿ, ಸುರಕ್ಷೆಯಿಂದ ಬಾಳೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಬೆಸ್ಕಾಂ (BESCOM) ಆಯೋಜಿಸಿದೆ. ಸಾರ್ವಜನಿಕರು ವಿದ್ಯುತ್ ಸಂಬಂಧಿತ ಅಪಾಯಗಳಿಂದ ದೂರವಿರಲು ಮತ್ತು ಜೀವದ ಸುರಕ್ಷತೆಗಾಗಿ ಅವಶ್ಯಕ ಎಚ್ಚರಿಕೆ ಕ್ರಮಗಳನ್ನು ಅನುಸರಿಸಲು ಉದ್ದೇಶಿತ ಈ ಜಾಗೃತಿ ಅಭಿಯಾನದಲ್ಲಿ ಹಲವಾರು ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಲಾಗಿದೆ.

ಬೆಸ್ಕಾಂ (BESCOM) ಎಚ್ಚರಿಕೆ – ತಪ್ಪಾಗಬಾರದು:

ವಿದ್ಯುತ್ ಕಂಬಗಳಿಗೆ ಜಾಹೀರಾತು ಫಲಕ ಅಥವಾ ಬ್ಯಾನರ್‌ಗಳನ್ನು ಕಟ್ಟುವುದು ತಪ್ಪು.

ಬಟ್ಟೆ ಒಣಗಿಸಲು ತಂತಿ ಅಥವಾ ಕಬ್ಬಿಣದ ಕೊಕ್ಕುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು.

ಒದ್ದೆಯಾದ ಕೈಗಳಿಂದ ವಿದ್ಯುತ್ ಸ್ವಿಚ್‌ಗಳು ಅಥವಾ ಉಪಕರಣಗಳನ್ನು ಸ್ಪರ್ಶಿಸಬಾರದು.

ತಂತಿಗಳ ಹತ್ತಿರದ ಮರದ ರಂಬೆ-ಕೊಂಬೆಗಳನ್ನು ಕಡಿಯುವುದು ಅಪಾಯಕರ.

ವಿದ್ಯುತ್ ಕಂಬಗಳನ್ನು ಹತ್ತುವುದು ಜೀವಹಾನಿಕಾರಕ.

ತಂತಿಬೇಲಿಗಳಿಗೆ ವಿದ್ಯುತ್ ಹರಿಸುವಂತ ಕೆಲಸ ಮಾಡಬಾರದು.

ತುಂಡಾಗಿ ಬಿದ್ದ ವಿದ್ಯುತ್ ತಂತಿಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳ ಬೇಲಿಗಳನ್ನು ಮುಟ್ಟಬಾರದು.

ವಿದ್ಯುತ್ ತಂತಿಗಳ ಸಮೀಪ ಕಟ್ಟಡ ನಿರ್ಮಿಸುವುದು ಅಪಾಯಕರ.

ತಂತಿಗಳ ಮೇಲೆ ಬಿದ್ದ ಮರಗಳು ಅಥವಾ ಕೊಂಬೆಗಳನ್ನು ತೆಗೆಯಲು ಸ್ವಯಂಪ್ರೇರಿತ ಪ್ರಯತ್ನ ಬೇಡ.


ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು:

ಸದಾ ಐಎಸ್‌ಐ ಪ್ರಮಾಣಿತ ವಿದ್ಯುತ್ ಉಪಕರಣಗಳ ಬಳಕೆ ಮಾಡಬೇಕು.

ಲೈಸೆನ್ಸ್ ಹೊಂದಿರುವ ಎಲೆಕ್ಟ್ರಿಷಿಯನ್ ಮೂಲಕವೇ ದುರಸ್ತಿ ಕಾರ್ಯಗಳು ನಡೆಸಬೇಕು.

ಉಪಕರಣಗಳನ್ನು ನಿಯಮಿತವಾಗಿ ಪರಿಶೀಲನೆಗೆ ಒಳಪಡಿಸಿ ಸುರಕ್ಷಿತ ಸ್ಥಿತಿಯಲ್ಲಿರಬೇಕು.

ವಿದ್ಯುತ್ ಸಂಪರ್ಕಕ್ಕೆ ಸಮರ್ಪಕ ಗೌಂಡಿಂಗ್ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಎಲ್ಲಾ ವಿದ್ಯುತ್ ವೈಯರಿಂಗ್ ಕಾರ್ಯಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದ ಗುತ್ತಿಗೆದಾರರಿಂದ ಮಾಡಿಸಿಕೊಳ್ಳುವುದು ಸೂಕ್ತ.

ಪ್ಲಗ್ ಪಾಯಿಂಟ್‌ಗಳು ಮಕ್ಕಳ ಕೈಗೆ ತಾಕದಂತಿರಬೇಕು.

ಸದಾ 3 ಪಿನ್ ಪ್ಲಗ್ ಅಥವಾ ಸಾಕೆಟ್ ಬಳಸಬೇಕು ಮತ್ತು ಅರ್ಥಿಂಗ್ ವ್ಯವಸ್ಥೆ ಜಾರಿಗೆ ತರಬೇಕು.


ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಈ ರೀತಿಯ ಅಭಿಯಾನಗಳು ಅತ್ಯಂತ ಅಗತ್ಯವಾಗಿದ್ದು, ಬಿಇಎಸ್ಕಾಂ ಈ ಮೂಲಕ ಜನರ ಜೀವದ ಸುರಕ್ಷೆಯನ್ನು ತನ್ನ ಮೊದಲ ಆದ್ಯತೆಯೆಂದು ಸಾರಿದೆ.

ಹೆಚ್ಚಿನ ಮಾಹಿತಿಗೆ ಅಥವಾ ದೂರು ನೀಡಲು:
ವಾಟ್ಸ್‌ಆಪ್ ಸಂಖ್ಯೆ: 94831 91212

City Today News 9341997936

Leave a comment

This site uses Akismet to reduce spam. Learn how your comment data is processed.