TAFE ಮತ್ತು AGCO ನಡುವೆ ಮಹತ್ವದ ಒಪ್ಪಂದ: ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್‌ ಹಕ್ಕುಗಳು TAFE ಗೆ

ಬೆಂಗಳೂರು, ಜುಲೈ 1 – ಕೃಷಿ ಯಂತ್ರೋಪಕರಣ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿರುವ TAFE (ಟ್ರಾಕ್ಟರ್ಸ್‌ ಅಂಡ್ ಫಾರ್ಮ್ ಎಕ್ವಿಪ್‌ಮೆಂಟ್ ಲಿಮಿಟೆಡ್) ಸಂಸ್ಥೆಯು, ಜಾಗತಿಕ ಮಟ್ಟದ ಕೃಷಿ ಉಪಕರಣ ತಯಾರಕ ಸಂಸ್ಥೆ AGCO(Carporation) ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಲ್ಲಿ ಬ್ರ್ಯಾಂಡ್ ಹಕ್ಕುಗಳು, ಷೇರು ಹಂಚಿಕೆ ಹಾಗೂ ವಾಣಿಜ್ಯ ಸಂಬಂಧಿತ ವಿಷಯಗಳ ಸಮಗ್ರ ಬಗೆಯ ಅಂಶಗಳನ್ನು ಒಳಗೊಂಡಿದೆ.

TAFE ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್ ಅವರು ಪ್ರಕಟಣೆ ಮೂಲಕ ತಿಳಿಸಿದಂತೆ, “ಮ್ಯಾಸ್ಸಿ ಫರ್ಗುಸನ್” ಮತ್ತು ಅದರ ಸಂಬಂಧಿತ ಟ್ರೇಡ್‌ಮಾರ್ಕ್‌ಗಳ ಹಕ್ಕುಗಳು, ಶೀರ್ಷಿಕೆ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಸದ್ಭಾವನೆಗಳು ಭಾರತ, ನೇಪಾಳ ಹಾಗೂ ಭೂತಾನ್‌ನೊಳಗೆ ಇದೀಗ TAFE ಸಂಸ್ಥೆಗೆ ಏಕೈಕ ಹಾಗೂ ವಿಶೇಷ ಮಾಲೀಕತ್ವದ ರೂಪದಲ್ಲಿ ಲಭ್ಯವಾಗುತ್ತವೆ.

ಈ ವ್ಯವಹಾರದ ಭಾಗವಾಗಿ, AGCO ನಲ್ಲಿನ 20.7% ಷೇರುಗಳನ್ನು TAFE ಸಂಸ್ಥೆಯು ಸುಮಾರು $260 ಮಿಲಿಯನ್ (ಅಂದಾಜು ₹2,170 ಕೋಟಿ) ಮೊತ್ತಕ್ಕೆ ಮರಳಿ ಖರೀದಿಸಲು ಒಪ್ಪಿಕೊಂಡಿದ್ದು, ಇದರ ಮೂಲಕ ಸಂಸ್ಥೆಯು ಚೆನ್ನೈ ಆಧಾರಿತ ಅಮಾಲ್ಗಮೇಷನ್ಸ್‌ ಗ್ರೂಪ್‌‍ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾಗಿ ಪರಿಗಣಿಸಲಾಗುತ್ತಿದೆ.

ಅದೆಯೇ ಸಮಯದಲ್ಲಿ, AGCO ನಲ್ಲಿನ ತನ್ನ ಪಾಲುದಾರಿಕೆಯನ್ನು 16.3% ಮಟ್ಟದಲ್ಲಿ ಮುಂದುವರಿಸುತ್ತಿರುವ TAFE, ಕೆಲವು ವಿನಾಯಿತಿಗಳನ್ನು ಬಿಟ್ಟರೆ, AGCO ನಿರ್ದೇಶಕರ ಮಂಡಳಿಯ ಶಿಫಾರಸುಗಳ ಪರವಾಗಿ ಷೇರುಗಳ ಮೂಲಕ ಮತ ಚಲಾಯಿಸಿ ಬೆಂಬಲ ನೀಡುವುದಾಗಿ ತಿಳಿಸಿದೆ. ಜೊತೆಗೆ AGCO ಯೊಂದಿಗೆ ನಿಯಮಿತ ಸಂವಹನ ನಡೆಸುವ ಮೂಲಕ ಸಂಸ್ಥೆಯಲ್ಲಿ ದೀರ್ಘಕಾಲಿಕ ಹೂಡಿಕೆಯ ನಿಲುವಿನಲ್ಲಿ ಮುಂದುವರೆಯಲಿದೆ.

TAFE ಮತ್ತು AGCO ನಡುವೆ ಇದ್ದ ಎಲ್ಲಾ ವಾಣಿಜ್ಯ ಒಪ್ಪಂದಗಳನ್ನು ಪರಸ್ಪರ ರದ್ದುಗೊಳಿಸಿದ ಬಳಿಕ, ಬಾಕಿ ಇರುವ ಪೂರೈಕೆ ಆರ್ಡರ್‌ಗಳನ್ನು ಪೂರೈಸಲು ಹಾಗೂ ಒಪ್ಪಂದದ ನಿಯಮಗಳ ಅನುಸಾರ ಮಾರುಕಟ್ಟೆಗೆ ಬಿಡಿಭಾಗ ಪೂರೈಕೆಯನ್ನು ಮುಂದುವರಿಸಲು TAFE ಬದ್ಧವಿರುತ್ತದೆ ಎಂದು ಮಲ್ಲಿಕಾ ಶ್ರೀನಿವಾಸನ್ ಅವರು ಸ್ಪಷ್ಟಪಡಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.