ಹಿಂದೂ ಸ್ವಾಭಿಮಾನ ರಥಯಾತ್ರೆ – ಜುಲೈ 4 ಮತ್ತು 5ರಂದು ಬೆಂಗಳೂರಿನಲ್ಲಿ ಭಕ್ತಿ ಭರಿತ ಶೋಭಾಯಾತ್ರೆ

ಹಿಂದೂ ಸ್ವಾಭಿಮಾನ ರಥಯಾತ್ರೆ ಪ್ರಯುಕ್ತ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಬೆಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ಮನೋಜ್ ಅಲುಂಗಲ್ ಅವರ ನೇತೃತ್ವದಲ್ಲಿ ಜುಲೈ 4 ಮತ್ತು 5, 2025 ರಂದು “ಹಿಂದೂ ಸ್ವಾಭಿಮಾನ ರಥಯಾತ್ರೆ” ನಡೆಸಲಾಗುತ್ತಿದೆ. ಈ ರಥಯಾತ್ರೆ ಹಿಂದೂ ಧರ್ಮದ ಗೌರವ, ಪರಂಪರೆ ಹಾಗೂ ರಾಷ್ಟ್ರೀಯತೆಯನ್ನು ಒತ್ತಿಹೇಳುವ ಉದ್ದೇಶವನ್ನು ಹೊಂದಿದ್ದು, ಭಕ್ತಿಭಾವಪೂರ್ಣವಾಗಿ ನಡೆಯಲಿದೆ.

ರಥಯಾತ್ರೆಯ ಮುಖ್ಯ ಕಾರ್ಯಕ್ರಮ ಜುಲೈ 5, ಶನಿವಾರದಂದು ನಡೆಯಲಿದ್ದು, ಮಧ್ಯಾಹ್ನ 3:00 ಗಂಟೆಗೆ ಮಲ್ಲೇಶ್ವರಂನ ಪ್ರಸಿದ್ಧ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯದಿಂದ ಶೋಭಾಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಈ ಯಾತ್ರೆಗೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷರಾದ ಶ್ರೀ. ಶ್ರೀ. ಶ್ರೀ. ಚಕ್ರಪಾಣಿ ಮಹಾರಾಜ್ ಅವರ ಸಾನ್ನಿಧ್ಯ ದಿಗ್ದರ್ಶನವಾಗಲಿದೆ.

ಮಲ್ಲೇಶ್ವರಂನ ಪ್ರಮುಖ ಬೀದಿಗಳ ಮೂಲಕ ಸಾಗಲಿರುವ ರಥಯಾತ್ರೆ ಸಂಜೆ 6:00 ಗಂಟೆಗೆ ಬೆಂಗಳೂರು ಅರಮನೆ ಮೈದಾನ, ಗೇಟ್ ನಂ. 5 (ಕಿಂಗ್ಸ್ ಕೋರ್ಟ್) ಗೆ ತಲುಪಲಿದ್ದು, ನಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಧರ್ಮಗುರುಗಳು, ಗಣ್ಯಅತಿಥಿಗಳು ಹಾಗೂ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮಾಧ್ಯಮ ಬಾಂಧವರು ಈ ಭಕ್ತಿ-ರಾಷ್ಟ್ರಭಕ್ತಿ ಮೆರವಣಿಗೆಯುಳ್ಳ ಕಾರ್ಯಕ್ರಮವನ್ನು ಧ್ವನಿಮುದ್ರಣ, ದೃಶ್ಯಮುದ್ರಣ ಮತ್ತು ವರದಿ ಮಾಡುವಂತೆ ಹೃತ್ಪೂರ್ವಕ ಆಹ್ವಾನ ಇರುತ್ತದೆ.

– ಡಾ. ಮನೋಜ್ ಅಲುಂಗಲ್
ಅಧ್ಯಕ್ಷರು, ಕರ್ನಾಟಕ ರಾಜ್ಯ
ಅಖಿಲ ಭಾರತ ಹಿಂದೂ ಮಹಾಸಭಾ

City Today News 9341997936

Leave a comment

This site uses Akismet to reduce spam. Learn how your comment data is processed.