ಮಡಿವಾಳ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ ಕಾರ್ಯಕ್ರಮ– ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ ಅಧಿಸೂಚನೆ

ಬೆಂಗಳೂರು, ಜುಲೈ 4:
ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ.) ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.

ರಾಜ್ಯದ ಮಡಿವಾಳ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿನ್ನಲೆಯಲ್ಲಿ ಇರುವುದರಿಂದ, ಅವರ ಪ್ರತಿಭೆಗೆ ಮಾನ್ಯತೆ ನೀಡಲು ಮತ್ತು ಪ್ರೋತ್ಸಾಹಿಸಲು ಈ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಅವರು ತಿಳಿಸಿದ್ದಾರೆ.

ಅರ್ಹತಾ ಮಾನದಂಡಗಳು:

ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ 80% ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು.

ದ್ವಿತೀಯ ಪಿಯುಸಿಯಲ್ಲಿ 90%ಕ್ಕಿಂತ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು.


ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:

2025ರ ವರ್ಷದ ಅಂಕಪಟ್ಟಿಯ ಪ್ರತಿಗಳು

ಇತ್ತೀಚಿನ ಎರಡು ಭಾವಚಿತ್ರಗಳು

ಆಧಾರ್ ಕಾರ್ಡ್ ಪ್ರತಿಯು

ಸ್ವಂತ ವಿಳಾಸ ಮತ್ತು ಮೊಬೈಲ್ ಸಂಖ್ಯೆಯ ವಿವರಗಳು


ಈ ಎಲ್ಲಾ ದಾಖಲೆಗಳನ್ನು 2025 ಜುಲೈ 30ರೊಳಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು. ಅರ್ಜಿ ಕಳುಹಿಸಬೇಕಾದ ವಿಳಾಸ:

ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ.)
ನಂ.7, ಶಿರೂರ್ ಪಾರ್ಕ್ ರಸ್ತೆ,
ಶೇಷಾದ್ರಿಪುರಂ, ಬೆಂಗಳೂರು – 560020

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು:

ಸಂಘದ ಕಚೇರಿ: 080-23460946

ಬಿ.ಆರ್. ಪ್ರಕಾಶ್ (ಪ್ರಧಾನ ಕಾರ್ಯದರ್ಶಿ): 9611664485

ಶಿವಕುಮಾರ್ ಇ.ಎಚ್. (ನೌಕರ ಸಮಿತಿಯ ಉಪಾಧ್ಯಕ್ಷರು): 9980408392

ಪ್ರಭಾಕರ್ ಎ. (ಪ್ರಧಾನ ಸಂಚಾಲಕರು): 9945421124


ಈ ಕುರಿತು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ. ಸಿ – ರಾಜ್ಯಾಧ್ಯಕ್ಷರು,ಪ್ರಕಾಶ್. ಬಿ. ಆರ್ -ಪ್ರಧಾನ ಕಾರ್ಯದರ್ಶಿ, ಮಂಜುನಾಥ್ -ಖಜಾಂಚಿ, ಸಿದ್ದಗಂಗಯ್ಯ-ಕಾರ್ಯಾಧ್ಯಕ್ಷರು ಮೈಸೂರು ವಿಭಾಗ, ಶಿವಕುಮಾರ್. ಹೆಚ್-ನಿರ್ದೇಶಕರು. ಮಧು-ನಿರ್ದೇಶಕರು  , ಚಂದ್ರು ನಿರ್ದೇಶಕರುಗಳ ಸಮ್ಮುಖದಲ್ಲಿ , ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಮಡಿವಾಳ ಸಂಘಗಳ ಮೂಲಕ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ತಕ್ಷಣ ಅರ್ಜಿ ಸಲ್ಲಿಸಬೇಕೆಂದು ಕರೆ ನೀಡಿದರು. ಮಾಧ್ಯಮಗಳು ಈ ಮಾಹಿತಿಯನ್ನು ಸಮುದಾಯದ ಮಕ್ಕಳಿಗೆ ತಲುಪಿಸಲು ಸಹಕರಿಸಬೇಕೆಂಬ ಮನವಿಯೂ ಈ ಸಂದರ್ಭದಲ್ಲಿ ಸಲ್ಲಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.