ಜಯನಗರ ರಾಯರ ಮಠದಲ್ಲಿ ಭವ್ಯ ಧಾರ್ಮಿಕ ಆಚರಣೆ: ತಪ್ತ ಮುದ್ರಾಧಾರಣೆ ಮತ್ತು ಅಖಂಡ ಭಾಗವತ ಪ್ರವಚನಕ್ಕೆ ಸಜ್ಜು

ಬೆಂಗಳೂರು, ಜುಲೈ 5:
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 6, ಭಾನುವಾರ, ಪ್ರಥಮ ಏಕಾದಶಿ ಪ್ರಯುಕ್ತ ಭವ್ಯ ಧಾರ್ಮಿಕ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ಬೆಳಗ್ಗೆ 7 ಗಂಟೆಗೆ ನೆರವೇರಿಸಿ, ಶ್ರೀ ಸುದರ್ಶನ ಹೋಮದೊಂದಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಈ ಬಳಿಕ, ಮಠದ ಸಹಸ್ರಾರು ಶಿಷ್ಯರು ಹಾಗೂ ಭಕ್ತರಿಗೆ ಬೆಳಗ್ಗೆ 7:30ರಿಂದ ರಾತ್ರಿ 9:30ರ ವರೆಗೆ ಶ್ರೀಪಾದರ ಅಮೃತ ಹಸ್ತದಿಂದ ತಪ್ತ ಮುದ್ರಾಧಾರಣೆಯ ವಿಶೇಷ ವಿಧಿ ಕೈಗೊಳ್ಳಲಾಗುತ್ತದೆ ಎಂದು ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದಿಂದ್ರ ಆಚಾರ್ಯರು ತಿಳಿಸಿದ್ದಾರೆ.

ಅದೇ ದಿನ, ನಾಡಿನ ಪ್ರಮುಖ ಪಂಡಿತರಿಂದ ‘ಅಖಂಡ ಭಾಗವತ ಪ್ರವಚನ’ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಂದು ಸ್ಕಂಧದ ಪ್ರವಚನವನ್ನು ವಿವಿಧ ವಿದ್ವಾಂಸರು ನಿರ್ವಹಿಸಲಿದ್ದಾರೆ:

ಪ್ರಥಮ ಸ್ಕಂಧ: ವೇಣುಗೋಪಾಲಾಚಾರ್ಯ

ದ್ವಿತೀಯ ಸ್ಕಂಧ: ಕಡಪ ಶಶಿಧರಾಚಾರ್ಯ

ತೃತೀಯ ಸ್ಕಂಧ: ಪ್ರಣವಾಚಾರ್ಯ

ಚತುರ್ಥ ಸ್ಕಂಧ: ಕಡಪ ವಸುಧೇಂದ್ರಾಚಾರ್ಯ

ಪಂಚಮ ಸ್ಕಂಧ: ಉಮರ್ಜಿ ಪ್ರಹ್ಲಾದಾಚಾರ್ಯ

ಷಷ್ಟಮ ಸ್ಕಂಧ: ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ

ಸಪ್ತಮ ಸ್ಕಂಧ: ಗೊಗ್ಗಿ ಸುಶೀಲೇಂದ್ರಾಚಾರ್ಯ

ಅಷ್ಟಮ ಸ್ಕಂಧ: ಸಂಜೀವಾಚಾರ್ಯ ದೇಶಪಾಂಡೆ

ನವಮ ಸ್ಕಂಧ: ಕಲ್ಯಾ ನರಸಿಂಹಮೂರ್ತಿ ಆಚಾರ್ಯ

ದಶಮ ಸ್ಕಂಧ (ಪೂರ್ವಾರ್ಧ): ಐತರೇಯಾಚಾರ್ಯ

ದಶಮ ಸ್ಕಂಧ (ಉತ್ತರಾರ್ಧ): ವಿಷ್ಣುಕಶ್ಯಪಾಚಾರ್ಯ

ಏಕಾದಶ ಸ್ಕಂಧ: ತಿರುಮಲಾಚಾರ್ಯ ಕುಲಕರ್ಣಿ

ದ್ವಾದಶ ಸ್ಕಂಧ: ವೆಂಕಟನರಸಿಂಹಾಚಾರ್ಯ ರಾಜಪುರೋಹಿತ


ಭಕ್ತರ ಅನುಕೂಲಕ್ಕಾಗಿ ಮಠದ ವತಿಯಿಂದ ಶಿಸ್ತಿನ ಸಾಲು ವ್ಯವಸ್ಥೆ ಕಲ್ಪಿಸಲಾಗಿದ್ದು, ವಯೋವೃದ್ಧರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಆರ್.ಕೆ. ವಾದಿಂದ್ರ ಆಚಾರ್ಯರು ಮಾಹಿತಿ ನೀಡಿದರು. ಈ ಪವಿತ್ರ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ನಂದಕಿಶೋರ ಆಚಾರ್ಯರು ಹಾಗೂ ಮಠದ ಸಿಬ್ಬಂದಿಗಳು, ಸ್ವಯಂಸೇವಕರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.