ಬದಲಾವಣೆ ತರುತ್ತಿರುವ ಯುವ ಶಕ್ತಿಗೆ ಸಹಾಯದ ಹಸ್ತ: ಶೇಫ್ಲರ್ ಇಂಡಿಯಾದ ‘ಸಾಮಾಜಿಕ ಇನ್ನೋವೇಟರ್ ಫೆಲೋಶಿಪ್’ ನಾಲ್ಕನೇ ಆವೃತ್ತಿಗೆ ಕಿಕ್‌ಸ್ಟಾರ್ಟ್

ಬೆಂಗಳೂರು: ಚಲನೆ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಶೇಫ್ಲರ್ ಇಂಡಿಯಾ, ಯುವ ನಾವೀನ್ಯಕಾರರನ್ನು ಉತ್ತೇಜಿಸಲು ಮತ್ತು ಶಾಶ್ವತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವಿನ್ಯಾಸಗೊಳಿಸಿದ ತನ್ನ ಸಾಮಾಜಿಕ ಇನ್ನೋವೇಟರ್ ಫೆಲೋಶಿಪ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯನ್ನು ಘೋಷಿಸಿದೆ. ಈ ಉಪಕ್ರಮವು ಸಂಸ್ಥೆಯ ಪ್ರಮುಖ ಸಾಮಾಜಿಕ ಜವಾಬ್ದಾರಿ (CSR) ಯೋಜನೆ HOPEನ ಭಾಗವಾಗಿದ್ದು, ದೇಶದಾದ್ಯಾಂತ ಯುವ ತಂತ್ರಜ್ಞರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

ಈ ಫೆಲೋಶಿಪ್ ಕಾರ್ಯಕ್ರಮದಲ್ಲಿ ಆಯ್ಕೆಯಾದ 18ರಿಂದ 35 ವರ್ಷದೊಳಗಿನ 10 ನಾವೀನ್ಯಕಾರರಿಗೆ ತಲಾ ₹1.75 ಲಕ್ಷಗಳ ಅನುದಾನ ಒದಗಿಸಲಾಗುತ್ತದೆ. ಜೊತೆಗೆ, IIMA ವೆಂಚರ್ಸ್ನಲ್ಲಿ ನಡೆಯುವ 24 ವಾರಗಳ ಹೈಬ್ರಿಡ್ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಪ್ರವೇಶ ಸಿಗಲಿದೆ. ಈ ತರಬೇತಿ ಅವಧಿಯಲ್ಲಿ ಭಾಗವಹಿಸುವವರಿಗೆ ತಮ್ಮ ಯೋಜನೆಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲು ಅಗತ್ಯ ಮಾರ್ಗದರ್ಶನ, ಸಂಪನ್ಮೂಲ ಮತ್ತು ಸಾಧನಗಳನ್ನು ನೀಡಲಾಗುತ್ತದೆ.

ಈ ಕುರಿತು ಮಾತನಾಡಿದ ಶೇಫ್ಲರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಹಾಗೂ ಸಿಇಒ ಶ್ರೀ ಹರ್ಷ ಕದಮ್, “ಪರಿಸರ ಶಾಶ್ವತತೆ, ನವೀಕರಿಸಬಹುದಾದ ಇಂಧನ, ಕಾರ್ಬನ್ ತಟಸ್ಥತೆ, ವೃತ್ತಾಕಾರದ ಆರ್ಥಿಕತೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಇತ್ಯಾದಿ ಪ್ರಮುಖ ಸಮಸ್ಯೆಗಳ ಎದುರಿಸಲು ಪ್ರಯತ್ನಿಸುವ ವೈಯಕ್ತಿಕರು, ತಂಡಗಳು, ಸಂಸ್ಥೆಗಳು ಮತ್ತು ಎನ್‌ಜಿಒಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತೇವೆ” ಎಂದು ಹೇಳಿದರು.

ಅರ್ಜಿ ಸಲ್ಲಿಕೆ ವಿವರಗಳು:

ಅರ್ಹ ಅಭ್ಯರ್ಥಿಗಳು 2025ರ ಜುಲೈ 30ರಿಂದ ಆಗಸ್ಟ್ 30ರ ವರೆಗೆ Buddy4Study ವೆಬ್‌ಸೈಟ್‌ಗೆ ಲಾಗಿನ್ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಭರ್ತಿ ಮಾಡುವ ಜೊತೆಗೆ, ಪ್ರಾಜೆಕ್ಟ್ ವಿಡಿಯೋ, ಐಡಿಯಾ ಪಿಚ್ ಡೆಕ್ (ಐಚ್ಛಿಕ), ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ನಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

City Today News 9341997936

Leave a comment

This site uses Akismet to reduce spam. Learn how your comment data is processed.