ಇ-ಸ್ವತ್ತು ಪ್ರಕ್ರಿಯೆಯಲ್ಲಿ ಗೊಂದಲ, ಭ್ರಷ್ಟಾಚಾರದ ಭೀತಿ: ಎನ್.ಡಿ.ಎಸ್. ಸ್ಟೀಫನ್

ಬೆಂಗಳೂರು, ಆ. 7: ಗ್ರಾಮೀಣ ಪ್ರದೇಶಗಳಲ್ಲಿ ಇ-ಸ್ವತ್ತು ಅಭಿಯಾನ ಗೊಂದಲದ ಗೂಡಾಗಿದ್ದು, ಹೈಟೆಕ್ ಭ್ರಷ್ಟಾಚಾರಕ್ಕೆ ವೇದಿಕೆ ಒದಗಿಸಿದೆ ಎಂದು ನ್ಯಾಷನಲ್ ಪಬ್ಲಿಕ್ ಸರ್ವಿಸ್ ರಾಜ್ಯಾಧ್ಯಕ್ಷ ಎನ್.ಡಿ.ಎಸ್. ಸ್ಟೀಫನ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಭೂ ಮಾಫಿಯಾ ಹಾಗೂ ವಂಚಕರಿಂದ ನಿವೇಶನ ಮಾಲಿಕರನ್ನು ರಕ್ಷಿಸಲು ಇ-ಸ್ವತ್ತು ಹಾಗೂ ಭೂ ಡಿಜಿಟಲೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೆ ಈ ಪ್ರಕ್ರಿಯೆ ಗ್ರಾಮೀಣ ಭಾಗದಲ್ಲಿ ಅಡಚಣೆಗೀಡಾಗಿದ್ದು, ಸರಕಾರಿ ಅಧಿಕಾರಿಗಳ ಅನಾಕಾಲಿಕತೆ ಮತ್ತು ಮಧ್ಯವರ್ತಿಗಳ ಲಂಚದ ಬೇಡಿಕೆಗಳಿಂದ ಜನ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.

ಇ-ಸ್ವತ್ತು ಮಾಡಿಸಲು ಮಧ್ಯವರ್ತಿಗಳೇ ದಾರಿ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ (E-Khata) ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿನ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇ-ಸ್ವತ್ತು ಪ್ರಕ್ರಿಯೆ ಅತೀ ಕಠಿಣವಾಗಿದೆ.
ಸ್ಥಳೀಯ ಆಡಳಿತ, ವಿಶೇಷವಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಅರ್ಜಿದಾರರಿಗೆ ಸೂಕ್ತ ಸ್ಪಂದನೆ ನೀಡದೆ ವಿಳಂಬ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ನಿವೇಶನದ ಮಾಲಿಕರು ಮಧ್ಯವರ್ತಿಗಳ ಸಹಾಯವನ್ನು ಕೇಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ. ಈ ಮಧ್ಯವರ್ತಿಗಳು ಇ-ಸ್ವತ್ತು ಮಾಡಿಸುವ ಹೆಸರಲ್ಲಿ ಲಕ್ಷಾಂತರ ರೂ. ಲಂಚ ಬೇಡುತ್ತಿದ್ದಾರೆ.

ಸರಕಾರವೇ ನೋಂದಣಿ ಮಾಡಿಸಿ, ಇ-ಸ್ವತ್ತು ನೀಡದ  “ಸರಕಾರದ ನೋಂದಣಿ ಕಚೇರಿಯಲ್ಲಿ ಲಕ್ಷಾಂತರ ರೂ. ಪಾವತಿಸಿ ನಿವೇಶನ ನೋಂದಣಿ ಮಾಡಿಸಿಕೊಂಡವರು, ಇ-ಸ್ವತ್ತು ಮಾಡಿಸಿಕೊಳ್ಳದಿದ್ದರೆ ಕಾನೂನುಬದ್ಧತೆಯಿಲ್ಲ ಎಂಬ ಮಾತು ವೈಚಾರಿಕವಾಗಿ ಪ್ರಶ್ನಾರ್ಹವಾಗಿದೆ. ಅಂತಹ ಸ್ಥಿತಿಯಲ್ಲಿ ಸರ್ಕಾರವೇ ಆ ನೋಂದಣಿಗೆ ಅನುಮತಿ ನೀಡುವುದೇಕೆ?” ಎಂದು ಸ್ಟೀಫನ್ ಕಿಡಿಕಾರಿದರು.



ಅಭಿಯಾನ ಸರಳಗೊಳಿಸಿ, ಭ್ರಷ್ಟಾಚಾರ ತಡೆಗಟ್ಟಲಿ

ಸ್ಟೀಫನ್ ಅವರು ಈ ಕುರಿತು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ:

ಇ-ಸ್ವತ್ತು ಪ್ರಕ್ರಿಯೆ ಹಂತವನ್ನು ಮತ್ತಷ್ಟು ಸರಳಗೊಳಿಸಿ, ತಂತ್ರಜ್ಞಾನ ಬಳಕೆ ಸುಲಭವಾಗಿಸಬೇಕು.

ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುವ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಮಧ್ಯವರ್ತಿಗಳ ಪ್ರವೇಶವನ್ನೇ ತಡೆಯಬೇಕು.

ಮೇಲ್ವಿಚಾರಣಾ ವ್ಯವಸ್ಥೆ ಕಡ್ಡಾಯಗೊಳಿಸಿ, ಎಲ್ಲಾ ಪ್ರಕ್ರಿಯೆ ಪರದರ್ಶಕವಾಗಬೇಕೆಂದು ಅವರು ಒತ್ತಾಯಿಸಿದರು.


ಇ-ಸ್ವತ್ತು ಎಂದರೆ ಏನು?

ಇ-ಸ್ವತ್ತು ಎಂದರೆ ಗ್ರಾಮೀಣ ಪ್ರದೇಶದ ಕೃಷಿಯೇತರ ಖಾಲಿ ಜಾಗ ಅಥವಾ ಮನೆ ನಿರ್ಮಿಸಿದ ಭೂಮಿಗೆ ನೀಡಲಾಗುವ ಡಿಜಿಟಲ್ ಮಾಲೀಕತ್ವ ಪ್ರಮಾಣ ಪತ್ರ. ಈ ದಾಖಲೆಗಳಲ್ಲಿ GPS ಫೋಟೋ, ಭೂ ವಿಸ್ತೀರ್ಣ, ಮಾಲೀಕರ ವಿವರಗಳು ಸೇರಿರುತ್ತವೆ.
ಇದು ಭೂಮಿಯ ಮಾಲೀಕತ್ವವನ್ನು ಅಧಿಕೃತವಾಗಿ ದೃಢಪಡಿಸುವ ಉದ್ದೇಶ ಹೊಂದಿದ್ದು, ಅಕ್ರಮ ವಹಿವಾಟು ಮತ್ತು ಭೂ ವಿವಾದಗಳನ್ನು ತಡೆಯಲು ಸಹಕಾರಿಯಾಗುತ್ತದೆ.

ಆದರೆ, ಸರ್ಕಾರ ಹೇಳುವಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಕೂಡ ಅಧಿಕಾರಿಗಳ ವಿರುದ್ಧವಾಗಿ ಅನಗತ್ಯ ವಿಳಂಬ ನಡೆಯುತ್ತಿದೆ ಎಂದು ಸ್ಟೀಫನ್ ದೂರಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.