
ಶಿವಮೊಗ್ಗ: ವಾಸನ್ ಐ ಕೇರ್ ಆಸ್ಪತ್ರೆ, ಶಿವಮೊಗ್ಗದಲ್ಲಿ ಮೋತಿಬಿಂದು ಮತ್ತು ರೆಟಿನಾ ಶಸ್ತ್ರಚಿಕಿತ್ಸೆಗಾಗಿ ಅತಿ ಆಧುನಿಕ ಫಾಕೋ ಯಂತ್ರ ಹಾಗೂ ಅಲ್ಟ್ರಾ-ಮಾಡರ್ನ್ ಮೈಕ್ರೋಸ್ಕೋಪ್ ಅಳವಡಿಕೆ ಮಾಡಲಾಗಿದೆ. ಈ ನೂತನ ಸೌಲಭ್ಯಗಳನ್ನು ಆಗಸ್ಟ್ 15, 2025ರಂದು ಬೆಳಿಗ್ಗೆ 11 ಗಂಟೆಗೆ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಶ್ರೀ ಕೆ.ಎಸ್. ಈಶ್ವರಪ್ಪ, ಶಾಸಕರು ಶ್ರೀ ಚನ್ನಬಸಪ್ಪ ಎಸ್.ಎನ್., ಶ್ರೀಮತಿ ಶಾರದ ಪೂರ್ಯ ನಾಯಕ್, ಮಾಜಿ ಉಪಮೇಯರ್ ಶ್ರೀಮತಿ ವಿಜಯಲಕ್ಷ್ಮಿ ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯರು ಶ್ರೀ ಅರುಣ್ ಡಿ.ಎಸ್. ಮತ್ತು ಡಾ. ಧನಂಜಯ ಸರ್ಜಿ ಆರ್., ಜಿಲ್ಲಾ ಅಧ್ಯಕ್ಷ ಶ್ರೀ ಸುಂದರೇಶ್ ಎಚ್.ಎಸ್., ಕನ್ನಡ ಚಿತ್ರ ನಟ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ಆದರ್ಶ ಕೆ.ಜಿ. ಭಾಗವಹಿಸಲಿದ್ದಾರೆ.

2012ರಿಂದ ವಾಸನ್ ಐ ಕೇರ್ ಶಿವಮೊಗ್ಗ ಜಿಲ್ಲೆಯಲ್ಲಿ ವಿಶ್ವಮಟ್ಟದ ಕಣ್ಣಿನ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡುತ್ತಿದೆ. ಹೊಸ ತಂತ್ರಜ್ಞಾನದಿಂದ ಮೋತಿಬಿಂದು ಮತ್ತು ರೆಟಿನಾ ಚಿಕಿತ್ಸೆಯಲ್ಲಿ ಇನ್ನಷ್ಟು ಉತ್ತಮ ಸೇವೆ ಲಭ್ಯವಾಗಲಿದೆ.
City TodaybNews 9341997936
