
ಬೆಂಗಳೂರು, ಆಗಸ್ಟ್ 14 – ‘ಪರಮ್ ಕಲ್ಚರ್’ ಆಯೋಜಿಸಿದ್ದ ಪರಂಪರಾ ಸರಣಿಯ ಏಳನೇ ಕಾರ್ಯಕ್ರಮ ‘ವಂದೇ ಮಾತರಂ’ ಡಾ. ಸಿ. ಅಶ್ವತ್ಥ ಕಲಾಭವನದಲ್ಲಿ ಭವ್ಯವಾಗಿ ನೆರವೇರಿತು. ಸಂಸ್ಥೆಯ ನಿರ್ದೇಶಕ ಪಂ. ಪ್ರವೀಣ್ ಡಿ.ರಾವ್, ಕಾರ್ಯದರ್ಶಿ ಶ್ರೀ ರಾಘವೇಂದ್ರ ಹೆಗಡೆ ಹಾಗೂ ಗಾಯಕ ಶಂಕರ ಶಾನುಭೋಗ್ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಶಂಕರ ಶಾನುಭೋಗ್ ಅವರ ತಂಡದಿಂದ ದೇಶಭಕ್ತಿಗೀತೆಗಳ ಮಧುರ ವಾದನ – ಆಕಾಶಕೆದ್ದುನಿಂತ ಪರ್ವತಹಿಮ ಮೌನದಲ್ಲಿ, ತಾಯೆ ನಿನ್ನ ಮಡಿಲಲಿ, ಏ ಮೆರೇ ವತನ್ಕೆ ಲೋಗೋ, ವಂದೇ ಮಾತರಂ – ಪ್ರೇಕ್ಷಕರ ಹೃದಯ ಗೆದ್ದವು. ಸಹಗಾಯನದಲ್ಲಿ ಕುಮಾರಿ ಮೇಘನಾ ಹಳಿಯಾಳ, ಕೀಬೋರ್ಡ್‌ನಲ್ಲಿ ಶ್ರೀ ಕೃಷ್ಣ ಉಡುಪ, ತಬಲಾದಲ್ಲಿ ಶ್ರೀ ಸುದತ್ತ ಎಲ್. ಶ್ರೀಪಾದ್, ಢೋಲಕ್‌ನಲ್ಲಿ ಶ್ರೀ ಲೋಕೇಶ್ ಆರ್., ಕೊಳಲಿನಲ್ಲಿ ಶ್ರೀ ರಮೇಶ್ ಕುಮಾರ್ ಜಿ.ಎಲ್., ರಿದಮ್ ಪ್ಯಾಡ್ಸ್‌ನಲ್ಲಿ ಶ್ರೀ ಪದ್ಮನಾಭ ಕಾಮತ್ ಅವರು ಸಂಗತಿಸಿದರು.
ಕಾರ್ಯಕ್ರಮದ ಅಂಗವಾಗಿ ಇಂಡಿಯಾ ಪೋಸ್ಟ್ ಸಹಯೋಗದಲ್ಲಿ, ಸ್ಥಳೀಯ ಕಲಾವಿದರಿಂದ ರಚಿಸಲಾದ ಅಪರಿಚಿತ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಸಹಿತ ಅಂಚೆ ಪತ್ರಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯಿತು. ಅಲ್ಲದೆ, ಆತ್ಮೀಯರಿಗೆ ಸಂದೇಶ ಬರೆಯುವ ಹಳೆಯ ಪತ್ರ ಬರೆಯುವ ಕಲೆಯನ್ನು ಪುನರುಜ್ಜೀವನಗೊಳಿಸುವ ವಿಶೇಷ ವ್ಯವಸ್ಥೆಯೂ ಮಾಡಲಾಗಿತ್ತು.
City Today News 9341997936
