ನವೆಂಬರ್–ಡಿಸೆಂಬರ್‌ನಲ್ಲಿ ಮೂರು ನಗರಗಳಲ್ಲಿ ಲೈವ್ ಸಂಗೀತ ಪ್ರದರ್ಶನ; ಟಿಕೆಟ್ ಮಾರಾಟ ಆರಂಭ

ಬೆಂಗಳೂರು, 15 ಆಗಸ್ಟ್ 2025: ಭಾರತದ ಜನಪ್ರಿಯ ಪ್ಲೇಬ್ಯಾಕ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಸಿದ್ ಶ್ರೀರಾಮ್ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಸಂಗೀತ ಪ್ರವಾಸ – ‘ದಿ ಹೋಂಕಮಿಂಗ್ ಟೂರ್’ ಘೋಷಿಸಿದ್ದಾರೆ.
ಈ ಪ್ರವಾಸದ ಭಾಗವಾಗಿ, ಅವರು ನವೆಂಬರ್ 22ರಂದು ಬೆಂಗಳೂರಿನ ಟೆರಾಫಾರ್ಮ್ ಅರೆನಾಯಲ್ಲಿ, ನವೆಂಬರ್ 29ರಂದು ಚೆನ್ನೈನಲ್ಲಿ ಮತ್ತು ಡಿಸೆಂಬರ್ 13ರಂದು ಹೈದರಾಬಾದ್‌ನಲ್ಲಿ ಭಾವಪೂರ್ಣ ಸಂಗೀತ ಕಚೇರಿಗಳನ್ನು ನಡೆಸಲಿದ್ದಾರೆ. ಫ್ಯಾಟ್ ಏಂಜಲ್ ಮತ್ತು ಜೊಮಾಟೊ ಡಿಸ್ಟ್ರಿಕ್ಟ್ ಪ್ರಸ್ತುತಪಡಿಸುತ್ತಿರುವ ಈ ಕಾರ್ಯಕ್ರಮಗಳು ಸಂಜೆ 5 ಗಂಟೆಗೆ ಪ್ರಾರಂಭವಾಗಲಿದ್ದು, ಸಿಡ್ ಶ್ರೀರಾಮ್ ತಮ್ಮ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಜನಪ್ರಿಯ ಹಾಡುಗಳನ್ನು ಪ್ರೇಕ್ಷಕರಿಗೆ ಲೈವ್‌ನಲ್ಲಿ ಮನರಂಜಿಸಲಿದ್ದಾರೆ.
ಆಗಸ್ಟ್ 4ರಿಂದ ಟಿಕೆಟ್ ಮಾರಾಟ ಆರಂಭಗೊಂಡಿದ್ದು, ಪ್ರಾರಂಭಿಕ ಹಂತದಲ್ಲಿ ಒನ್ ಗೆಟ್ ಒನ್ ಫ್ರೀ ಆಫರ್ ಲಭ್ಯ. ಫ್ಯಾನ್‌ಪಿಟ್, ಜನರಲ್ ಮತ್ತು ಲೌಂಜ್ ವಿಭಾಗಗಳ ಟಿಕೆಟ್‌ಗಳು ₹2,000ರಿಂದ ಆರಂಭವಾಗುತ್ತವೆ. ಜೊಮಾಟೊ ಡಿಸ್ಟ್ರಿಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯಕ್ರಮವನ್ನು ಹಾಟ್‌ಲಿಸ್ಟ್ ಮಾಡಿ ಬುಕ್ಕಿಂಗ್ ಮಾಡಬಹುದಾಗಿದೆ.
ಸಂಗೀತ ಪ್ರವಾಸದ ಕುರಿತು ಮಾತನಾಡಿದ ಸಿದ್ ಶ್ರೀರಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ,“ಈ ಪ್ರವಾಸ ನನ್ನ ಜೀವನದ ಪ್ರಮುಖ ಭಾಗ. ಬೆಂಗಳೂರು, ಚೆನ್ನೈ, ಹೈದರಾಬಾದ್ ನನ್ನ ಸಂಗೀತಯಾನದ ನೆಲೆಗಳು. ಇಲ್ಲಿ ನಾನು ನನ್ನ ಧ್ವನಿಯನ್ನು ಕಂಡುಹಿಡಿದೆ, ಸಂಗೀತದೊಂದಿಗೆ ಪ್ರೀತಿಯಲ್ಲಿ ಬಿದ್ದೆ. ಪ್ರತಿಯೊಂದು ವೇದಿಕೆ ನನಗೆ ಅನನ್ಯ ಅನುಭವಗಳನ್ನು ನೀಡಿದೆ. ‘ದಿ ಹೋಂಕಮಿಂಗ್ ಟೂರ್’ ಕೇವಲ ಸಂಗೀತ ಕಾರ್ಯಕ್ರಮವಲ್ಲ – ಇದು ನನ್ನನ್ನು ರೂಪಿಸಿದ ನಗರಗಳಿಗೆ, ನನ್ನನ್ನು ಬೆಂಬಲಿಸಿದ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುವ ಪ್ರಯತ್ನ”ಎಂದರು.
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿ 250ಕ್ಕೂ ಹೆಚ್ಚು ಹಾಡುಗಳನ್ನು ನೀಡಿರುವ ಸಿಡ್ ಶ್ರೀರಾಮ್, ಇಂದಿನ ಭಾರತೀಯ ಸಂಗೀತ ಲೋಕದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಈ ಪ್ರವಾಸವು ಭಾರತದ ಲೈವ್ ಸಂಗೀತಕ್ಕೆ ಹೊಸ ಮಾನದಂಡವನ್ನು ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮ ದಿನಾಂಕಗಳು:
ನವೆಂಬರ್ 22 – ಬೆಂಗಳೂರು | ಟೆರಾಫಾರ್ಮ್ ಅರೆನಾ
ನವೆಂಬರ್ 29 – ಚೆನ್ನೈ
ಡಿಸೆಂಬರ್ 13 – ಹೈದರಾಬಾದ್
ಟಿಕೆಟ್‌ಗಾಗಿ:
ಬೆಂಗಳೂರು: link
ಚೆನ್ನೈ: link
ಹೈದರಾಬಾದ್: link
ಸೋಶಿಯಲ್ ಮೀಡಿಯಾ:
Instagram: fatangel.in
Facebook: fatangel.ಇನ್
City Today News 9341997936
