ಪ್ಯಾರಾಲಿಂಪಿಕ್‌ ಪ್ರತಿಭೆಗಳಿಗೆ ಬೆಂಬಲ ನೀಡಲು ಡೆಲಾಯ್ಟ್‌ ಇಂಡಿಯಾ – ಪ್ಯಾರಾಲಿಂಪಿಕ್‌ ಚಿನ್ನದ ವಿಜೇತೆ ಶೀತಲ್‌ ದೇವಿಯೊಂದಿಗೆ ಸಹಯೋಗ

ಬೆಂಗಳೂರು: ಡೆಲಾಯ್ಟ್‌ ಇಂಡಿಯಾ ಪ್ಯಾರಾಲಿಂಪಿಕ್‌ ಚಿನ್ನದ ಪದಕ ವಿಜೇತೆ, ಬಿಲ್ಲುಗಾರ್ತಿ ಶೀತಲ್‌ ದೇವಿಯೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಸಹಯೋಗದ ಮೂಲಕ ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಹಾಗೂ ಅರ್ಹತೆಯುಳ್ಳ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ ಹಾಗೂ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ.

ಡೆಲಾಯ್ಟ್‌ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಮಲ್‌ ಶೆಟ್ಟಿ ಅವರು ಮಾತನಾಡುತ್ತಾ, “ಕೇವಲ 15ನೇ ವಯಸ್ಸಿನಲ್ಲಿ ಶೀತಲ್‌ ಬಿಲ್ಲು ಹಿಡಿದು ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದರು. 16ನೇ ವಯಸ್ಸಿನಲ್ಲಿ ವಿಶ್ವ ನಂ.1 ಬಿಲ್ಲುಗಾರ್ತಿಯಾಗಿ, 17ನೇ ವಯಸ್ಸಿನಲ್ಲಿ ಅರ್ಜುನ ಪ್ರಶಸ್ತಿ ಮತ್ತು ಪ್ಯಾರಾಲಿಂಪಿಕ್‌ ಕಂಚಿನ ಪದಕವನ್ನು ಗಳಿಸಿದರು. ಇಂತಹ ಪ್ರತಿಭೆಗಳು ದೇಶದ ಹೆಮ್ಮೆ, ಅವರಿಗೆ ಅಗತ್ಯ ಸೌಲಭ್ಯ ಒದಗಿಸಿದರೆ, ಭಾರತದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಾರೆ. ಭಾರತದ ನಿಜವಾದ ಶಕ್ತಿ ಜನರಲ್ಲಿ ಇದೆ; ಅವರ ಕನಸು, ಹೋರಾಟ ಮತ್ತು ಸಾಧನೆ ಸಾಮರ್ಥ್ಯದಲ್ಲಿ ಇದೆ. ಶೀತಲ್ ಅವರ ಪಯಣವೇ ಅದಕ್ಕೆ ಸಾಕ್ಷಿ. ಡೆಲಾಯ್ಟ್‌ ಇಂಡಿಯಾದ ದೃಷ್ಟಿ ಕೇವಲ ಪ್ರಗತಿಯನ್ನು ನೋಡುವುದಲ್ಲ, ಅದನ್ನು ಸಕ್ರಿಯವಾಗಿ ರೂಪಿಸುವುದಾಗಿದೆ,” ಎಂದು ಹೇಳಿದರು.

ಬಿಲ್ಲುಗಾರ್ತಿ ಶೀತಲ್‌ ದೇವಿ ಪ್ರತಿಕ್ರಿಯೆ ನೀಡಿ, “ಡೆಲಾಯ್ಟ್‌ ಇಂಡಿಯಾ ನನ್ನಂತಹ ಹಲವಾರು ಪ್ರತಿಭೆಗಳಿಗೆ ಸೌಲಭ್ಯ ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸಲು ಹೆಚ್ಚಿನ ಪ್ರತಿಭೆಗಳು ಮುಂದೆ ಬರಬೇಕು. ಅಂತಹವರನ್ನು ಗುರುತಿಸಿ ಬೆಳೆಸುವ ಕಾರ್ಯ ಇಂತಹ ಸಂಸ್ಥೆಗಳ ಸಹಾಯದಿಂದ ಸಾಧ್ಯ,” ಎಂದು ಹೇಳಿದರು.

City Today News 9341997936

Leave a comment

This site uses Akismet to reduce spam. Learn how your comment data is processed.