ಭಾರತದಲ್ಲಿ ರಿಯಲ್‌ಮೀ P4 ಸರಣಿ ಬಿಡುಗಡೆ

ಬೆಂಗಳೂರು: ಸ್ಮಾರ್ಟ್‌ಫೋನ್ ಪ್ರಿಯರು ನಿರೀಕ್ಷಿಸಿದ್ದ ರಿಯಲ್‌ಮೀ P4 ಸರಣಿ ಇದೀಗ ಭಾರತದಲ್ಲೂ ಲಭ್ಯ. ಕಂಪನಿಯು ರಿಯಲ್‌ಮೀ P4 ಪ್ರೋ ಮತ್ತು ರಿಯಲ್‌ಮೀ P4 ಮಾದರಿಗಳನ್ನು ಅಧಿಕೃತವಾಗಿ ಪರಿಚಯಿಸಿದೆ.

₹20,000 ಒಳಗಿನ ವಿಭಾಗದಲ್ಲೇ ಮೊದಲ ಬಾರಿಗೆ ಡುಯಲ್-ಚಿಪ್ ತಂತ್ರಜ್ಞಾನ ತಂದಿರುವ ಈ ಸರಣಿ, ಫ್ಲ್ಯಾಗ್‌ಶಿಪ್ ಮಟ್ಟದ ಅನುಭವವನ್ನು ಯುವ ಬಳಕೆದಾರರಿಗೆ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಮುಖ್ಯ ವೈಶಿಷ್ಟ್ಯಗಳು:

Snapdragon 7 Gen 4 ಪ್ರೊಸೆಸರ್ ಹಾಗೂ ಹೈಪರ್ ವಿಷನ್ AI ಚಿಪ್ – ಗೇಮಿಂಗ್, ಮಲ್ಟಿ-ಟಾಸ್ಕಿಂಗ್ ಮತ್ತು AI ಆಧಾರಿತ ಅನ್ವಯಿಕೆಗಳಿಗೆ ಹೆಚ್ಚು ಶಕ್ತಿಶಾಲಿ ಕಾರ್ಯಕ್ಷಮತೆ.

ಡುಯಲ್ 50MP AI ಕ್ಯಾಮೆರಾ – ಪ್ರೊ-ಮಟ್ಟದ ಫೋಟೋ ಮತ್ತು ವೀಡಿಯೋ ಅನುಭವ.

ಡಿಸ್‌ಪ್ಲೇ ವಿಶೇಷತೆಗಳು:

ರಿಯಲ್‌ಮೀ P4 ಪ್ರೋ: 6.78 ಇಂಚಿನ 144Hz 4D ಕರ್ವ್ಡ್ ಹೈಪರ್‌ಗ್ಲೋ AMOLED ಡಿಸ್‌ಪ್ಲೇ, 6500 ನಿಟ್ಸ್ ಬ್ರೈಟ್‌ನೆಸ್, HDR10+ ಬೆಂಬಲ.

ರಿಯಲ್‌ಮೀ P4: 6.77 ಇಂಚಿನ FHD+ AMOLED ಡಿಸ್‌ಪ್ಲೇ, 144Hz ರಿಫ್ರೆಶ್ ದರ, HDR10+ ಬೆಂಬಲ ಹಾಗೂ 4500 ನಿಟ್ಸ್ ತೀವ್ರತೆ.



ರಿಯಲ್‌ಮೀ ಇಂಡಿಯಾದ ಸಿಎಂಒ ಫ್ರಾನ್ಸಿಸ್ ವಾಂಗ್ ಅವರು, “30 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಡುಯಲ್-ಚಿಪ್ ಆರ್ಕಿಟೆಕ್ಚರ್ ಪರಿಚಯಿಸಿರುವುದು ರಿಯಲ್‌ಮೀಗಾಗಿ ಮಹತ್ವದ ಹೆಜ್ಜೆ. ಇದು ಬಳಕೆದಾರರಿಗೆ ಫ್ಲ್ಯಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆ ಮತ್ತು ದೃಶ್ಯಾನುಭವವನ್ನು ನೀಡಲಿದೆ” ಎಂದು ಹೇಳಿದರು.

City Today News 9341997936

Leave a comment

This site uses Akismet to reduce spam. Learn how your comment data is processed.