
ಬೆಂಗಳೂರು: ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಹಾಗೂ ಎಲೆಕ್ಟ್ರಿಕ್ ವಾಹನ ತಯಾರಕ ಬೌನ್ಸ್ ಇವಿ ನಡುವೆ ಹೊಸ ಸಹಯೋಗ ಘೋಷಣೆಯಾಗಿದೆ. ಇದರಡಿ, ಸ್ವಿಗ್ಗಿ ಮತ್ತು ಇನ್‌ಸ್ಟಾಮಾರ್ಟ್ ಡೆಲಿವರಿ ಪಾಲುದಾರರಿಗೆ ಬೌನ್ಸ್ ಇವಿ ಸ್ಕೂಟರ್‌ಗಳನ್ನು ಕಡಿಮೆ ದರದಲ್ಲಿ ಬಳಸುವ ಅವಕಾಶ ಸಿಗಲಿದೆ.
ಸ್ವಿಗ್ಗಿಯ ಹಿರಿಯ ಉಪಾಧ್ಯಕ್ಷ ಸೌರವ್ ಗೋಯಲ್ ಮಾತನಾಡುತ್ತಾ, “ಪ್ರಥಮ ಹಂತದಲ್ಲಿ ಬೆಂಗಳೂರು ಮತ್ತು ದೆಹಲಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಇವಿ ಸ್ಕೂಟರ್‌ಗಳನ್ನು ನಿಯೋಜಿಸಲಾಗುತ್ತಿದ್ದು, ಅವು ವಿಶೇಷ ದರದಲ್ಲಿ ಡೆಲಿವರಿ ಬಾಯ್ಸ್‌ಗಳಿಗೆ ಲಭ್ಯವಾಗುತ್ತವೆ. ಬೌನ್ಸ್ ವಾಹನಗಳ ನಿರ್ವಹಣೆ ಹಾಗೂ ನಿಯೋಜನೆಗೆ ಜವಾಬ್ದಾರಿಯಾಗಲಿದೆ” ಎಂದರು.
ಬೌನ್ಸ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ವಿವೇಕಾನಂದ ಹಲ್ಲೆಕೆರೆ ಯವರು, “ಸ್ವಿಗ್ಗಿಯೊಂದಿಗಿನ ಪಾಲುದಾರಿಕೆ ನಮ್ಮಿಗೆ ಮಹತ್ವದ ಹೆಜ್ಜೆ. ಡೆಲಿವರಿ ಪಾಲುದಾರರಿಗೆ ಸುಲಭ ದರದಲ್ಲಿ ಇವಿ ಸ್ಕೂಟರ್‌ಗಳನ್ನು ಒದಗಿಸುತ್ತೇವೆ. ಜೊತೆಗೆ ‘ಸ್ವಿಗ್ಗಿ ಬೌನ್ಸ್ ರಾಜಾ’ ಅಭಿಯಾನವನ್ನು ಜಾರಿಗೆ ತರುತ್ತಿದ್ದು, ಹೆಚ್ಚು ಆರ್ಡರ್‌ಗಳನ್ನು ಪೂರ್ಣಗೊಳಿಸುವ ಡೆಲಿವರಿ ಬಾಯ್ಸ್‌ಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುತ್ತದೆ” ಎಂದು ಹೇಳಿದರು.
ಈ ಒಪ್ಪಂದವು ಡೆಲಿವರಿ ಬಾಯ್ಸ್‌ಗಳಿಗೆ ಆರ್ಥಿಕ ನೆರವಾಗುವುದರ ಜೊತೆಗೆ, ಪರಿಸರ ಸ್ನೇಹಿ ಸಾರಿಗೆಯತ್ತ ಮುನ್ನಡೆಯ ಹೆಜ್ಜೆಯಾಗಿದೆ. ಸಂಸ್ಥೆಯ ಗುರಿಯಂತೆ, 2030ರೊಳಗೆ ಶೇಕಡಾ 100ರಷ್ಟು ಇವಿ ವಾಹನಗಳ ಬಳಕೆಯನ್ನು ಸಾಧಿಸುವ ದಿಶೆಯಲ್ಲಿ ಈ ಯೋಜನೆ ಪ್ರಮುಖ ಪಾತ್ರವಹಿಸಲಿದೆ.
City Today News 9341997936
