ಕೆಪಿಸಿಎಲ್‌ನಲ್ಲಿ ಬಹುಕೋಟಿ ಭ್ರಷ್ಟಾಚಾರ ಆರೋಪ: ಅಧಿಕಾರಿಗಳ ವಿರುದ್ಧ ಗಂಭೀರ ದೂರು

ಬೆಂಗಳೂರು: ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಕೆಪಿಸಿಎಲ್) ನಲ್ಲಿ ನಡೆದಿರುವ ಬಹುಕೋಟಿ ಭ್ರಷ್ಟಾಚಾರದ ಕುರಿತು ಗಂಭೀರ ಆರೋಪಗಳು ಹೊರಹೊಮ್ಮಿವೆ. ಮ್ಯಾನೇಜಿಂಗ್ ಡೈರೆಕ್ಟರ್ ಗೌರವ್ ಗುಪ್ತ (ಐಎಎಸ್) ಹಾಗೂ ಫೈನಾನ್ಸ್ ಡೈರೆಕ್ಟರ್ ನಾಗರಾಜ್ ಆರ್ ಅವರ ಪ್ರಭಾವದಲ್ಲಿ, ಹಲವು ನಿರ್ದೇಶಕರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರವು ಜನರ ತೆರಿಗೆ ಹಣವನ್ನು ಕೆಪಿಸಿಎಲ್‌ಗೆ ವಿದ್ಯುತ್ ಉತ್ಪಾದನೆಗಾಗಿ ನೀಡಿದ್ದರೂ, ಆ ಹಣವನ್ನು ಕಳಪೆ ಮಟ್ಟದ ಕೋಲ್ ಖರೀದಿಸುವ ಮೂಲಕ ದುರುಪಯೋಗ ಮಾಡಲಾಗಿದೆ ಎಂಬುದು ಮುಖ್ಯ ಆರೋಪ.
ಟೆಂಡರ್ ಅಕ್ರಮಗಳು
2023ರಲ್ಲಿ ಕೆಪಿಸಿಎಲ್ YTPS, BTPS, RTPS ಸೇರಿದಂತೆ ಹಲವು ಪವರ್ ಪ್ಲಾಂಟ್‌ಗಳಿಗೆ ಕೋಲ್ ಖರೀದಿಸಲು ಮೂರು ಟೆಂಡರ್‌ಗಳನ್ನು ಹೊರಡಿಸಿತು:
ಸ್ಮಾರ್ಟ್ ಜಾನ್ (ಹೈದರಾಬಾದ್ ಮೂಲ) – 2.5 ಲಕ್ಷ ಮೆಟ್ರಿಕ್ ಟನ್ ಇಂಡೋನೇಷ್ಯಾ ಕೋಲ್
ಭರಾಧ್ಯ (ಇಂಡೋನೇಷ್ಯಾ ಮೂಲ) – 2.5 ಲಕ್ಷ ಮೆಟ್ರಿಕ್ ಟನ್ ಇಂಡೋನೇಷ್ಯಾ ಕೋಲ್
ಸುಬ್ಬಲಕ್ಷ್ಮಿ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ (ಬೆಂಗಳೂರು, ಮಾಲೀಕ ಉದಯ್ ಶೆಟ್ಟಿ) – 2.5 ಲಕ್ಷ ಮೆಟ್ರಿಕ್ ಟನ್ ಕೋಲ್
ಟೆಂಡರ್ ಪ್ರಕಾರ ಕೋಲ್ ಗುಣಮಟ್ಟ 5500 GCV, 18% ತೆವಾಂಶ ಪ್ರಮಾಣ ಇರಬೇಕಾಗಿದ್ದರೆ, ಕಂಪನಿಗಳು ಪೂರೈಸಿದ ಕೋಲ್ ಕೇವಲ 3800 GCV, 35% ಬೂದಿ ಪ್ರಮಾಣ ಹೊಂದಿತ್ತು.
ನಕಲಿ ದಾಖಲೆಗಳ ಸೃಷ್ಟಿ
ಕೆಲ ಎಕ್ಸಿಕ್ಯೂಟಿವ್ ಡೈರೆಕ್ಟರ್‌ಗಳು ಹಾಗೂ ರಸಾಯನಶಾಸ್ತ್ರ–ಗುಣಮಟ್ಟ ಪರೀಕ್ಷಕರು ಕಳಪೆ ಕೋಲ್‌ಗೆ ಉತ್ತಮ ಗುಣಮಟ್ಟದಂತೆ ತೋರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. “161 ಟೆಸ್ಟಿಂಗ್ ಕಂಪನಿ” ಹಾಗೂ ಇತರ ಖಾಸಗಿ ಲ್ಯಾಬ್‌ಗಳ ಸಹಕಾರದಿಂದ ನಕಲಿ ವರದಿಗಳನ್ನು ತಯಾರಿಸಿ ಕೋಟ್ಯಂತರ ರೂಪಾಯಿಗಳನ್ನು ಟೆಂಡರ್ ಕಂಪನಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ದೂರು ಹೇಳುತ್ತದೆ.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ
ಶರಾವತಿ ಹೈಡ್ರೋ ಪವರ್ ಪ್ಲಾಂಟ್‌ನಲ್ಲಿ ₹10,000 ಕೋಟಿ ಮೌಲ್ಯದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಮೆಗಾ ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಗೆ ನೀಡಲಾಗಿದೆ. ಅಗತ್ಯ ಇಲಾಖೆಗಳ ಅನುಮತಿ ಪಡೆಯದೇ ಮುಂಗಡವಾಗಿ ₹300 ಕೋಟಿ ಬಿಡುಗಡೆ ಮಾಡಿರುವುದರಿಂದ ಯೋಜನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಯಿತು.
ಕಿಂಗ್‌ಪಿನ್‌ಗಳ ಹೆಸರು
ಈ ಸಂಪೂರ್ಣ ಭ್ರಷ್ಟಾಚಾರದ ಹಿನ್ನಲೆಯಲ್ಲಿ ಚೆನ್ನೈ ಮೂಲದ ಅಬ್ಬುಲ್ ಖನಿ ಹಾಗೂ ಬೆಂಗಳೂರು ಮೂಲದ ನಿಸ್ಸಾರ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖಾ ದೂರು
ಈ ಪ್ರಕರಣ ಸಂಬಂಧ ಈಗಾಗಲೇ ಕರ್ನಾಟಕ ಲೋಕಾಯುಕ್ತ ಹಾಗೂ ಜಾರಿಗೆದಳ (ED) ಕಚೇರಿಗಳಲ್ಲಿ ದೂರು ದಾಖಲಾಗಿದ್ದು, “ಶೀಘ್ರದಲ್ಲೇ ಸತ್ಯಾಂಶಗಳು ಜನತೆ ಮುಂದೆ ಬರುವುದು” ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆನೇಕಲ್ ತಾಲೂಕಿನ ನಾಗರಾಜ್ ರವರ ಮಗನಾದ ಎನ್. ಚಂದ್ರಶೇಖರ್ ರವರು ಹೇಮಂತ್ ಮತ್ತು ನಾರಾಯಣಸ್ವಾಮಿ ಯವರ ಸಮ್ಮುಖದಲ್ಲಿ ತಿಳಿಸಲಾಯಿತು.
City Today News 9341997936
