
ಬೆಂಗಳೂರು, ಸೆಪ್ಟೆಂಬರ್ 2, 2025:
ಭಾರತದ ಅತಿದೊಡ್ಡ ದೂರಸಂಪರ್ಕ ಮೂಲಸೌಕರ್ಯ ಸಂಸ್ಥೆಗಳಲ್ಲಿ ಒಂದಾದ ಇಂಡಸ್ ಟವರ್ಸ್ ಲಿಮಿಟೆಡ್, ತನ್ನ ಪ್ರಮುಖ CSR ಯೋಜನೆಗಳಾದ ಸಕ್ಷಮ್ ಮತ್ತು ಪ್ರಗತಿಗಳ ಮೂಲಕ 2025 ಹಣಕಾಸು ವರ್ಷದಲ್ಲಿ 1.73 ಕೋಟಿ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಯಶಸ್ವಿಯಾಗಿದೆ.
ಇಂಡಸ್ ಟವರ್ಸ್‌ನ CSR ಕಾರ್ಯತಂತ್ರವು ಭಾರತದ ರಾಷ್ಟ್ರೀಯ ಆದ್ಯತೆಗಳಾದ ಡಿಜಿಟಲ್ ಇಂಡಿಯಾ, ಬೇಟಿ ಬಚಾವೋ, ಬೇಟಿ ಪಢಾವೋ ಹಾಗೂ ಕೌಶಲ್ಯ ಭಾರತ ಕಾರ್ಯಕ್ರಮಗಳಿಗೆ ನೇರವಾಗಿ ಹೊಂದಿಕೊಂಡಿದೆ. ಜೊತೆಗೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹ ಇದು ಮಹತ್ವದ ಪಾತ್ರವಹಿಸಿದೆ.
ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲಾಧಿಕಾರಿ (CHRO) ಶ್ರೀ ಪುಷ್ಕರ್ ಸಿಂಗ್ ಕಟಾರಿಯಾ ಮಾತನಾಡುತ್ತಾ, “ಜೀವನಗಳನ್ನು ಉತ್ತಮಗೊಳಿಸುವುದು ಮತ್ತು ಸಾಮರ್ಥ್ಯವನ್ನು ಬೆಳೆಸುವುದು ಇಂಡಸ್ ಟವರ್ಸ್‌ನ ಸಾಮಾಜಿಕ ಜವಾಬ್ದಾರಿಯ ಕೇಂದ್ರೀಯ ಧ್ಯೇಯವಾಗಿದೆ. ಸಕ್ಷಮ್ ಮತ್ತು ಪ್ರಗತಿ ಕಾರ್ಯಕ್ರಮಗಳ ಮೂಲಕ ಹಿಂದುಳಿದ ಸಮುದಾಯಗಳ ತಕ್ಷಣದ ಅಗತ್ಯಗಳನ್ನು ಪೂರೈಸುವುದರೊಂದಿಗೆ, ಅವರ ಭವಿಷ್ಯವನ್ನು ರೂಪಿಸಲು ಶಕ್ತಿ ನೀಡುವುದು ನಮ್ಮ ಉದ್ದೇಶ,” ಎಂದು ಹೇಳಿದರು.
ಇಂಡಸ್ ಟವರ್ಸ್ ತನ್ನ CSR ಉಪಕ್ರಮಗಳಲ್ಲಿ ಮಹಿಳಾ ಮತ್ತು ಬಾಲಕಿಯರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಆರೋಗ್ಯ, ನೈರ್ಮಲ್ಯ ಹಾಗೂ ಮೂಲಸೌಕರ್ಯ ಒದಗಿಸಲು ಕಟಿಬದ್ಧವಾಗಿದೆ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಸ್ವಾವಲಂಬಿತ್ವವನ್ನು ಉತ್ತೇಜಿಸುತ್ತಿರುವ ಸಂಸ್ಥೆ, ಡಿಜಿಟಲ್ ಇಂಡಿಯಾ ಮಿಷನ್ಗೆ ಅನುಗುಣವಾಗಿ ಡಿಜಿಟಲ್ ಸಾಕ್ಷರತೆಯನ್ನು ವಿಸ್ತರಿಸುತ್ತಿದೆ.
ಪರಿಸರ ಸ್ನೇಹಿ ಕಾರ್ಯಚಟುವಟಿಕೆ ಮತ್ತು ನವೀನ ಉಪಕ್ರಮಗಳ ಮೂಲಕ ಇಂಡಸ್ ಟವರ್ಸ್ ಸಮಾಜಕ್ಕೆ ದೀರ್ಘಕಾಲಿಕ ಕೊಡುಗೆ ನೀಡುವ ಗುರಿ ಹೊಂದಿದೆ. 2030ರೊಳಗೆ 15 ಕೋಟಿ ಜನರ ಜೀವನಕ್ಕೆ ಸ್ಪರ್ಶಿಸುವ ದೃಷ್ಟಿಯನ್ನು ಸಂಸ್ಥೆ ಹೊಂದಿದೆ.
ಹೆಚ್ಚಿನ ಮಾಹಿತಿಗೆ: http://www.industowers.com
City Today News 9341997936
