ಅಮೆರಿಕಾದ ವಿಸ್ಡಮ್ ಯೂನಿವರ್ಸಿಟಿಯಿಂದ ಜಾವೀದಖಾನ್‌ಗೆ ಗೌರವ ಡಾಕ್ಟರೇಟ್

ಸೆ.20ರಂದು ಜಾವೀದಖಾನ್‌ಗೆ ಗೌರವ ಡಾಕ್ಟರೇಟ್

ಬೆಂಗಳೂರು, ಸೆ.17: ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಹಾಗೂ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದಖಾನ್ ಅವರಿಗೆ ಅಮೆರಿಕಾದ ವಿಸ್ಡಮ್ ಫೀಸ್ ಆಫ್ ಯೂನಿವರ್ಸಿಟಿಯ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ ಮತ್ತು ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನವಾಗಲಿದೆ. ಈ ಗೌರವವನ್ನು ಸೆಪ್ಟೆಂಬರ್ 20ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು ಎಂದು ಜನಸೇವಾ ಫೌಂಡೇಶನ್ ಕಾರ್ಯದರ್ಶಿ ಪ್ರೊ. ಚಂದ್ರಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಜಾವೀದಖಾನ್ ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ವಿಶೇಷವಾಗಿ, ಶೈಕ್ಷಣಿಕ ಕಾರ್ಯಕ್ರಮಗಳು, ಶಾಂತಿ–ಸೌಹಾರ್ದತೆ ಕಾಪಾಡುವ ಪ್ರಯತ್ನಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಜನರನ್ನು ರಕ್ಷಿಸಲು ನಡೆಸಿದ ಹೋರಾಟಗಳು ಗಮನಾರ್ಹ. ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ಹೋರಾಟ ಹಾಗೂ ಭ್ರಷ್ಟಾಚಾರದ ವಿರುದ್ಧ ನಡೆಸಿದ ಅಭಿಯಾನಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿವೆ. ಈ ಎಲ್ಲ ಸೇವಾ ಚಟುವಟಿಕೆಗಳನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುತ್ತಿದೆ” ಎಂದು ಹೇಳಿದರು.

City Today News 9341997936

Leave a comment

This site uses Akismet to reduce spam. Learn how your comment data is processed.