ನವರಾತ್ರಿಯ ಶುಭದಿನದಲ್ಲಿ ರಣರಾಗಿಣಿ ಮಹಿಳಾ ಶಾಖೆಯ ಭವ್ಯ ಉದ್ಘಾಟನೆ(ಹಿಂದೂ ಜನಜಾಗೃತಿ ಸಮಿತಿ – ಕೆಂಗೇರಿ ಉಪನಗರ)

ಬೆಂಗಳೂರು, ಸೆಪ್ಟೆಂಬರ್ 22: ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯು ಕೆಂಗೇರಿ ಉಪನಗರದ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅದ್ದೂರಿಯಾಗಿ ಉದ್ಘಾಟಿಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗವೀರ್, ಶ್ರೀ ಶರತ್ ಕುಮಾರ್, ರಣರಾಗಿಣಿ ಜಿಲ್ಲಾ ಸಂಯೋಜಕರಾದ ಸೌ. ಭವ್ಯ ಮೋಹನ ಗೌಡ, ದೇವಾಲಯದ ಅಧ್ಯಕ್ಷರಾದ ಶ್ರೀ ಕದ್ರಪ್ಪ, ಸೇವಕರಾದ ಸೌ. ಸೌಮ್ಯ ಗೌಡ ಮತ್ತು ಸೌ. ಲಕ್ಷ್ಮಿ ಸೇರಿದಂತೆ 25ಕ್ಕೂ ಹೆಚ್ಚು ಶಾಖೆಯ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸೌ. ಭವ್ಯ ಮೋಹನ ಗೌಡ ಅವರು, “ಹಿಂದೂ ಜನಜಾಗೃತಿ ಸಮಿತಿ ಸ್ಥಾಪನೆಯಾದ ದಿನದಿಂದಲೂ 23 ವರ್ಷಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶ್ರಮಿಸುತ್ತಿದೆ. ಇದುವರೆಗೆ 200 ಹಿಂದೂ ರಾಷ್ಟ್ರ ಅಧಿವೇಶನಗಳು, 2250 ಹಿಂದೂ ರಾಷ್ಟ್ರ ಸಭೆಗಳು ಹಾಗೂ 1000ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಒಕ್ಕೂಟದ ಮೂಲಕ ಸುಮಾರು 25 ಲಕ್ಷ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಲಾಗಿದೆ. ಜೊತೆಗೆ 300ಕ್ಕೂ ಅಧಿಕ ಧರ್ಮಶಿಕ್ಷಣ ವರ್ಗಗಳ ಮೂಲಕ ಸಾವಿರಾರು ಜನರಿಗೆ ಹಿಂದೂ ಧರ್ಮದ ಬೋಧನೆ ನೀಡಲಾಗಿದೆ,” ಎಂದು ತಿಳಿಸಿದರು.

ಅವರು ಮುಂದುವರಿದು, ಮಹಿಳೆಯರ ರಕ್ಷಣೆಗೆ ಸ್ವಸಂರಕ್ಷಣೆ ತರಗತಿಗಳು, ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನಗಳು ಹಾಗೂ ಅಶ್ಲೀಲತೆಯಂತಹ ಸಮಾಜದ ಅನಿಷ್ಠಗಳ ವಿರುದ್ಧ ಹೋರಾಟಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಭವಿಷ್ಯದಲ್ಲಿ ರಣರಾಗಿಣಿ ಮಹಿಳಾ ಶಾಖೆಯು ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿ ಧರ್ಮರಕ್ಷಣೆಗೆ ಶ್ರಮಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.