ಅಂಗನವಾಡಿ ಕೇಂದ್ರಗಳ 50 ವರ್ಷದ ಸೇವಾ ಪಯಣ

ಇಂದು ಅಂಗನವಾಡಿ ಕೇಂದ್ರಗಳು ಪ್ರಾರಂಭಗೊಂಡು ಐವತ್ತು ವರ್ಷಗಳು ಪೂರೈಸಿವೆ. ಈ ಅವಧಿಯಲ್ಲಿ ಲಕ್ಷಾಂತರ ಮಕ್ಕಳ ಪೋಷಣೆ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಲ್ಲಿಸಿದ ಸೇವೆ ಅಸಾಧಾರಣವಾಗಿದೆ. ಸಮಾಜದ ಆರ್ಥಿಕ–ಸಾಮಾಜಿಕ ಬಲವರ್ಧನೆಗೆ ಅವರು ನೀಡಿರುವ ಕೊಡುಗೆ ಶ್ಲಾಘನೀಯ.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ (ರಿ)ಯ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಮಣಿ ಕೆ.ಎಲ್ ರವರು ತಮ್ಮ ಹೇಳಿಕೆಯಲ್ಲಿ “ಈ ಸುವರ್ಣ ಸಂಭ್ರಮದ ಸಂದರ್ಭದಲ್ಲಿ, ತಮ್ಮ ನಿಸ್ವಾರ್ಥ ಸೇವೆ, ಅಸಮರ್ಪಕ ವೇತನ, ಸವಾಲುಗಳ ನಡುವೆಯೂ ತಾಳ್ಮೆಯಿಂದ ಸಮಾಜದ ಹಿತಕ್ಕಾಗಿ ದುಡಿಯುತ್ತಿರುವ ಎಲ್ಲಾ ಅಂಗನವಾಡಿ ಸಿಬ್ಬಂದಿಗಳಿಗೆ ಹೃದಯಪೂರ್ವಕ ಸಲ್ಯೂಟ್ ಹಾಗೂ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ” ಎಂದರು.
City Today News 9341997936
