ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ವಿತರಣೆ ಕಾರ್ಯಕ್ರಮ

ಬೆಂಗಳೂರು, 23 ಅಕ್ಟೋಬರ್ 2025: 5 ಅಕ್ಟೋಬರ್ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಅಂಗವಾಗಿ, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ), ಬೆಂಗಳೂರು ಒಂದು ವಿಶೇಷ ಗೌರವ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂಘವು ಕೆಜಿಯಿಂದ ಪಿಜಿ ತರಗತಿಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮತ್ತು ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸದಸ್ಯರಾಗಿ ಹೊಂದಿದೆ.

ಸಂಘದ ಆಶ್ರಯದಲ್ಲಿ 26 ಅಕ್ಟೋಬರ್ 2025 ರ ರವಿವಾರ ಬೆಳಿಗ್ಗೆ 11:00ಕ್ಕೆ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ನೀಡಿ 100 ಶಿಕ್ಷಕರಿಗೆ ಗೌರವ ಸಲ್ಲಿಸಲಾಗುವುದು.

ಇದೆಯೊಂದಿಗೆ, ರಾಜ್ಯದ 5 ಹೋರಾಟಗಾರ ಶಿಕ್ಷಕರಿಗೆ—ಸಂಘದ ರಾಜ್ಯಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿರ್ಧಾರದ ಮೂಲಕ—ಹೋರಾಟಗಾರ ಶಿಕ್ಷಕರತ್ನ ಪ್ರಶಸ್ತಿ ನೀಡಿ ಸನ್ಮಾನಿಸುವ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿದೆ.

ಸಂಘದ ರಾಜ್ಯಾಧ್ಯಕ್ಷ ಶ್ರೀ ಶೈಲ ಎನ್. ಗಡದಿನ್ನಿ ಅವರು ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಸಂಘದ ಮುಖಂಡರ ಸಮ್ಮುಖದಲ್ಲಿ ತಿಳಿಸಿದರು. ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

City Today News 9341997936

Leave a comment

This site uses Akismet to reduce spam. Learn how your comment data is processed.