
ಬೆಂಗಳೂರು, ನವೆಂಬರ್ 13, 2025:
ಅಪೋಲೋ ಕ್ಯಾನ್ಸರ್ ಸೆಂಟರ್ (ACC), ಬಾನಶಂಕರ ರಸ್ತೆ, ಬೆಂಗಳೂರಿನಲ್ಲಿ ತನ್ನ ವಿಶಿಷ್ಟ ಸೆಲ್ಯುಲರ್ ಥೆರಪಿ ಮತ್ತು ರಕ್ತ–ಮಜ್ಜೆ ಪ್ರತಿರೋಪಣ ಕೇಂದ್ರವನ್ನು ಉದ್ಘಾಟಿಸಿದೆ. ಈ ಹೊಸ ಘಟಕ ಕರ್ನಾಟಕದಲ್ಲಿ ಕ್ಯಾನ್ಸರ್ ಹಾಗೂ ರಕ್ತಸಂಬಂಧಿ ರೋಗಗಳ ಆರೈಕೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ, ಸಮಗ್ರ ಚಿಕಿತ್ಸೆ ಹಾಗೂ ಮನೆಮೂಲದ ಸಮೀಪದಲ್ಲೇ ಉತ್ತಮ ಚಿಕಿತ್ಸಾ ವ್ಯವಸ್ಥೆಯನ್ನು ಒದಗಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ತಜ್ಞರಾದ ಡಾ. ನೀಮಾ ಭಟ್, ಪ್ರೊ. ಡಾ. ವಿಜಯ ಅಗರವಾಲ್, ಪ್ರೊ. ಡಾ. ವಿಶ್ವನಾಥ ಎಸ್, ಡಾ. ಪೂನಂ ಮೌರ್ಯ, ಡಾ. ಆದಿತ್ಯ ಮುರಳಿ ಹಾಗೂ ಶ್ರೀ ಅಕ್ಷಯ್ ಓಲೆಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ – ಕರ್ನಾಟಕ ಪ್ರಾಂತ್ಯ, ಅಪೋಲೋ ಆಸ್ಪತ್ರೆಗಳು ಹಾಜರಿದ್ದರು.
ಡಾ. ನೀಮಾ ಭಟ್ ರವರು, “ಈ ಕೇಂದ್ರವು ಲ್ಯೂಕಿಮಿಯಾ, ಲಿಂಫೋಮಾ, ಮಲ್ಟಿಪಲ್ ಮೈಯಲೋಮಾ, ಥಾಲಸೇಮಿಯಾ ಹಾಗೂ ಇತರೆ ಸಂಕೀರ್ಣ ರೋಗಗಳಿಗೆ ರಕ್ತಮಜ್ಜೆ ಪ್ರತಿರೋಪಣ ಅಗತ್ಯವಿರುವ ರೋಗಿಗಳಿಗೆ ಸೇವೆ ನೀಡಲಿದೆ. ಅನುಭವಸಂಪನ್ನ ತಜ್ಞರ ಬಹುಶಿಸ್ತ್ರ ತಂಡದಿಂದ ನಿರ್ವಹಿಸಲಾಗುತ್ತದೆ ”ಎಂದು ಹೇಳಿದರು.

ಪ್ರೊ. ಡಾ. ವಿಶ್ವನಾಥ ಎಸ್ ರವರು, “ಕ್ಲಿನಿಕಲ್ ಶಿಸ್ತು, ಸೋಂಕು ನಿಯಂತ್ರಣ ಮತ್ತು ಪ್ರೋಟೋಕಾಲ್ ಆಧಾರಿತ ಆರೈಕೆ ನಮ್ಮ ಕೇಂದ್ರದ ಪ್ರಮುಖ ಅಸ್ತ್ರಗಳು.”ಎಂದು ಹೇಳಿದರು.
ಪ್ರೊ. ಡಾ. ವಿಜಯ ಅಗರವಾಲ್ ರವರು, “ಕ್ಯಾನ್ಸರ್ ಚಿಕಿತ್ಸೆಯ ಭವಿಷ್ಯ ದೇಹದ ಸ್ವಂತ ಕೋಶಗಳನ್ನು ಬಳಸಿ ರೋಗವನ್ನು ಎದುರಿಸುವದಲ್ಲಿದೆ.”ಎಂದು ಅಭಿಪ್ರಾಯಪಟ್ಟರು.
ಶ್ರೀ ಅಕ್ಷಯ್ ಓಲೆಟಿ ಅವರು,“ಈ ಹೊಸ ಘಟಕದ ಮೂಲಕ ಅಪೋಲೋ ಕರ್ನಾಟಕದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಅತಿ ಸಂಕೀರ್ಣ ಚಿಕಿತ್ಸೆಗಳಿಗೂ ಪ್ರಾಪ್ಯತೆಯನ್ನು ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ ”ಎಂದು ಹೇಳಿದರು.
ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೋನ್ ಮ್ಯಾರೋ ಪ್ರತಿರೋಪಣ ಕಾರ್ಯಕ್ರಮದ ಅನುಭವದೊಂದಿಗೆ, ಬೆಂಗಳೂರು ಘಟಕವು ಅಪೋಲೋ ಸಂಸ್ಥೆಯ ಅತ್ಯಾಧುನಿಕ ಆಂಕಾಲಜಿ ಮತ್ತು ಹೀಮಾಟಾಲಜಿ ಸೇವೆಗಳ ಪರಂಪರೆಯನ್ನು ಮತ್ತಷ್ಟು ವಿಸ್ತರಿಸಿದೆ.
#WinningOverCancer
City Today News 9341997936
