
ಬೆಂಗಳೂರು, ನವೆಂಬರ್ 2025:
ದೇಶದಾದ್ಯಂತ ಕಣ್ಣು ಚಿಕಿತ್ಸೆಯ ಸುಲಭ ಪ್ರವೇಶವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ದಕ್ಷಿಣ ಭಾರತದ ವಾಸನ್ ಐ ಕೇರ್ ಆಸ್ಪತ್ರೆ ಮತ್ತು ಉತ್ತರ ಭಾರತದ ‘ಎ ಎಸ್ ಜಿ’ ಐ ಆಸ್ಪತ್ರೆ ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಜೊತೆ ಕ್ಯಾಶ್‌ಲೆಸ್ ಕಣ್ಣು ಚಿಕಿತ್ಸೆಗಾಗಿ ಪಾನ್ ಇಂಡಿಯಾ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಸಹಭಾಗಿತ್ವದ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 170 ಶಾಖೆಗಳು ಮತ್ತು 650 ಅನುಭವೀ ನೇತ್ರ ತಜ್ಞರ ಸೇವೆಗಳು ಒಂದೇ ಜಾಲದಲ್ಲಿ ಲಭ್ಯವಾಗಲಿವೆ. ಈ ಎರಡೂ ಆಸ್ಪತ್ರಾ ಶೃಂಖಲೆಗಳು ಈಗಾಗಲೇ 5 ಕೋಟಿ ಕ್ಕೂ ಹೆಚ್ಚು ರೋಗಿಗಳಿಗೆ ಗುಣಮಟ್ಟದ ಕಣ್ಣಿನ ಚಿಕಿತ್ಸೆಯನ್ನು ಒದಗಿಸಿವೆ. ಕ್ಯಾಂಟ್ರಾಕ್, ರಿಫ್ರಾಕ್ಟಿವ್ ಎರರ್, ಗ್ಲುಕೋಮಾ, ಸ್ಕ್ವಿಂಟ್, ರೆಟಿನಾ, ಓಕ್ಯುಲರ್ ಆಂಕಾಲಜಿ, ಮಕ್ಕಳ ಕಣ್ಣು ಚಿಕಿತ್ಸಾ ವಿಭಾಗ, ಡಯಾಬಿಟಿಕ್ ರೆಟಿನೋಪತಿ, ಕಾರ್ನಿಯಾ, ವಿಟ್ರೆಕ್ಟಮಿ, ಇಂಟ್ರಾಲೇಸ್, ಆಪ್ಟಿಕಲ್ ಹಾಗೂ kanTraakt ಕಾಂಟ್ರಾಕ್ಟ್ ಲೆನ್ಸ್ ಸೇರಿದಂತೆ ಹಲವು ವಿಶಿಷ್ಟ ಚಿಕಿತ್ಸೆಗಳು ಇದರಲ್ಲಿವೆ.

ಒಪ್ಪಂದಕ್ಕೆ ಸ್ಟಾರ್ ಹೆಲ್ತ್ ಇನ್ಶುರೆನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಡೈರೆಕ್ಟರ್ ಅಮಿತಾಭ್ ಜೈನ್, ಮುಖ್ಯ ವೈದ್ಯಾಧಿಕಾರಿ ಡಾ. ಅಭಿಜೀತ್ ಸಹಿ ಹಾಕಿದರು. ವಾಸನ್ ಐ ಕೇರ್ ಪರವಾಗಿ ಡಾ. ಕಮಲ್ ಬಾಬು, ಕಾರ್ಯನಿರ್ವಾಹಕ ಅಧಿಕಾರಿ – ದಕ್ಷಿಣ, ಹಾಗೂ ವಾಸನ್ ಹೆಲ್ತ್ ಕೇರ್‌ನ ಮುಖ್ಯ ತಂತ್ರಜ್ಞಾಧಿಕಾರಿ ಡಾ. ಮುತ್ತಣ್ಣ ಸಹಿ ಮಾಡಿದರು.
ಈ ಪ್ರಮುಖ ಪಾನ್ ಇಂಡಿಯಾ ಇನ್ಶುರೆನ್ಸ್ ಒಪ್ಪಂದವು ಮೆಡಿಕ್ಲೇಮ್ ಪಾಲಿಸಿಧಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದ್ದು, ಒಂದೇ ಗೂಡಿನಡಿ ಸಮಗ್ರ, ಗುಣಮಟ್ಟದ ಕಣ್ಣಿನ ಚಿಕಿತ್ಸೆ ಪಡೆಯುವಿಕೆಯನ್ನು ಸುಲಭಗೊಳಿಸುತ್ತದೆ. ಇದು ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಮತ್ತು ವಾಸನ್–’ಎ ಎಸ್ ಜಿ’ ಆಸ್ಪತ್ರೆ ಶೃಂಖಲೆಗಳಿಗೆ ಮಹತ್ತರ ಮೈಲುಗಲ್ಲಾಗಿ ಪರಿಣಮಿಸಿದೆ.
City Today News 9341997936
